
ಬಾಗಲಕೋಟೆ, ಏಪ್ರಿಲ್ 04: ಉಪ ಚುನಾವಣೆಗೆ ಯಾವುದೇ ಅಜೆಂಡಾ ಎಂಬುದನ್ನು ಕಾಂಗ್ರೆಸ್ ಇಟ್ಟುಕೊಂಡಿಲ್ಲ. ನಮ್ಮ ಕೆಲಸಗಳನ್ನು ಜನರ ಮುಂದೆ ಇಟ್ಟಿದ್ದು, ಮತದಾರರು ಅವುಗಳ ವಿಮರ್ಶೆ ಮಾಡಿ ವೋಟ್ ಹಾಕಲಿದ್ದಾರೆ. ಬಿಜೆಪಿಗರು ನನ್ನ ಮೇಲೆ ಮಾತಿನ ದಾಳಿ ನಡೇಸೋದು ಬಿಟ್ಟು, ರಾಜ್ಯದಲ್ಲಿ ಅಧಿಕಾರದಲ್ಲಿದ್ದ 9 ವರ್ಷ ನಾವೇನು ಮಾಡಿದ್ದೇವೆ ಎಂಬುದನ್ನು ಹೇಳುತ್ತಿಲ್ಲ. ಸಿದ್ದರಾಮಯ್ಯನವರ ಮೇಲೆ ಅಟ್ಯಾಕ್ ಮಾಡಿ ಎಂದು ಆರ್ಎಸ್ಎಸ್ನವರು ಬಿಜೆಪಿಗರಿಗೆ ಹೇಳಿಕೊಟ್ಟಿದ್ದು, ಬಡವರ ಮತ್ತು ಹಿಂದುಳಿದವರ ಪರ ನಾನು ಇರೋದಕ್ಕೇ ಅವರು ನನ್ನನ್ನು ಗುರಿಯಾಗಿಸಿಕೊಂಡಿದ್ದಾರೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ. ಹಿಂದಿನ ಉಪ ಚುನಾವಣೆಗಳಂತೆ ಈಗಿನ ಎರಡೂ ಬೈ ಎಲೆಕ್ಷನ್ಗಳಲ್ಲಿಯೂ ನಾವು ಗೆಲ್ಲುತ್ತೇವೆ ಎಂಬ ವಿಶ್ವಾಸವನ್ನೂ ಸಿಎಂ ವ್ಯಕ್ತಪಡಿಸಿದ್ದಾರೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.