ಬಿಜೆಪಿ ನಾಯಕರ ಮಧ್ಯೆಯೇ ಜೋರಾದ ವಾಗ್ಯುದ್ಧ: ಮತ್ತೊಂದು ಹಂತಕ್ಕೆ ಹೋದ ಕಿತ್ತಾಟ – Kannada News | Once Again BJP MLA SR Vishwanath Hits out at Chikkaballapur MP Dr K Sudhakar

ಬೆಂಗಳೂರು, (ಜೂನ್ 27): ಬಿಜೆಪಿ ನಾಯಕರಾದ ಸಂಸದ ಡಾ.ಕೆ ಸುಧಾಕರ್ ಹಾಗೂ ಯಲಹಂಕ ಶಾಸಕ ಎಸ್​​ಆರ್ ವಿಶ್ವನಾಥ್ ನಡುವೆ ಮತ್ತೆ ಮಾತಿನ ಸಮರ ಶುರುವಅಗಿದ್ದು, ಇದು ಇದೀಗ ಮತ್ತೊಂದು ಹಂತಕ್ಕೆ ಹೋಗಿದೆ. ನಿನ್ನೆ (ಜೂನ್ 26) ಅಷ್ಟೇ ಸುಧಾಕರ್​​​ಗೆ ಎಚ್ಚರಿಕೆ ಜೊತೆಗೆ ಸವಾಲು ಹಾಕಿದ್ದ ವಿಶ್ವನಾಥ್ ಇಂದೂ ಸಹ ವಾಗ್ದಾಳಿ ಮುಂದುವರೆಸಿದ್ದಾರೆ. ಇನ್ನು ಚಿಕ್ಕಬಳ್ಳಾಪುರಕ್ಕೆ ಸ್ವಾಗತ ಎಂದಿರುವ ಸುಧಾಕರ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ವಿಶ್ವನಾಥ್,ಬೆಣ್ಣೆ ಮಾತು ಇಲ್ಲಿ ನಡೆಯೋದಿಲ್ಲ .ನೀನು ಪಕ್ಷೇತರ ಅಭ್ಯರ್ಥಿ ಅಥವಾ ಕಾಂಗ್ರೆಸ್ ಅಭ್ಯರ್ಥಿಯಾಗಿ ಬಾ. ನನಗೆ ಬಿಜೆಪಿ ಇದೆ, ನೀನು ಬಂದು ಇಲ್ಲಿ ನಿಲ್ಲು ಆಮೇಲೆ ತೋರಿಸ್ತೀನಿ ಎಂದು ತಿರುಗೇಟು ನೀಡಿದ್ದಾರೆ.

ಪಕ್ಷ, ಕಾರ್ಯಕರ್ತರನ್ನು ಹೊಡೆಯೋ ಕೆಲಸ ನೀವೂ ಮಾಡೋದು. ಚಿಕ್ಕಬಳ್ಳಾಪುರ ನಮ್ಮ ತಾಯಿಯದ್ದು, ನಿಮ್ಮ ಸ್ವಾಗತ ನನಗೆ ಬೇಡ .ಇನ್ನು ನೀವು ಇರೋದು ಬೆಂಗಳೂರಿನ ಸದಾಶಿವನಗರದಲ್ಲಿ . ನೀನು ಜಂಪಿಂಗ್ ಜಪಾಂಗ್ ಮಾಡೋದು. ಕೆಲ ಕಾಗೆ, ಗೂಬೆ, ಬೆರಕೆಗಳನ್ನು ನೀವೂ ಇಟ್ಕೊಂಡಿದ್ದೀರಿ, ಇಟ್ಕೊಳಿ. ನೀವು ದುರಹಂಕಾರದಿಂದ ಪಕ್ಷದ ಅಧ್ಯಕ್ಷರನ್ನು ಬೈತೀರಿ. ನನಗೆ ಆ ರೀತಿ ದುರಹಂಕಾರ ಇಲ್ಲ. ಸಿಎಂ ಡಿ.ಕೆ.ಶಿವಕುಮಾರ್​​ ಅವರನ್ನು ಮೋಡ ಹೋಗಿ ಬೆಳಕು ತಂದ್ರು ಅಂತೀರಿ. ಹಾಗಾದರೆ ಪಕ್ಕದಲ್ಲಿದ್ದ ಸದಾನಂದಗೌಡ ಬಗ್ಗೆ ಯಾಕೆ ಮಾತಾಡಲಿಲ್ಲ. ಪಕ್ಷದಲ್ಲಿ ಹೊಡೆಯುವ ಕೆಲಸ ಮಾಡಬೇಡಿ ಎಂದು ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: ಬಿಜೆಪಿಯಲ್ಲಿ ಮತ್ತೆ ಶುರುವಾಯ್ತು ನಾಯಕರ ವಾರ್:ಸುಧಾಕರ್​​ಗೆ ವಿಶ್ವನಾಥ್ ಬಹಿರಂಗ ಸವಾಲ್

Source link

Leave a Reply

Your email address will not be published. Required fields are marked *