Headlines

ಬಿಜೆಪಿ ಶಾಸಕ ಶರಣು ಸಲಗರ್​​ಗೆ ಬಂಧನದ ಭೀತಿ: 2023ರ ಬಕ್ರೀದ್ ಗಲಾಟೆ ಕೇಸ್‌ನಲ್ಲಿ ಶಾಸಕನಿಗೆ ಬಿಗ್ ಶಾಕ್ – Kannada News

ಬೀದರ್, ಜೂ.6: 2023ರ ಬಕ್ರೀದ್ ಹಬ್ಬದ ವೇಳೆ ನಡೆದ ಗೋಹತ್ಯೆ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಶರಣು ಸಲಗರ್ ಬಂಧನದ ಭೀತಿ ಎದುರಿಸುತ್ತಿದ್ದಾರೆ. ಬೆಂಗಳೂರಿನ 42ನೇ ಎಸಿಜೆಎಂ ನ್ಯಾಯಾಲಯ ಶಾಸಕರ ವಿರುದ್ಧ ಜಾಮೀನು ರಹಿತ (ನಾನ್‌ಬೈಲೆಬಲ್) ಬಂಧನ ವಾರಂಟ್ ಹೊರಡಿಸಿದೆ. 2023ರ ಜುಲೈ 1ರಂದು ನಡೆದ ಘಟನೆಯಲ್ಲಿ, ಅಕ್ರಮ ಗೋಹತ್ಯೆ ತಡೆಯಲು ಶಾಸಕರು ಮುಸ್ಲಿಂ ಸಮುದಾಯದ ಮನೆಯೊಂದಕ್ಕೆ ತೆರಳಿ ಗಲಾಟೆ ಮಾಡಿದ್ದರು ಎನ್ನಲಾಗಿದೆ. ಈ ಪ್ರಕರಣದ ವಿಚಾರಣೆಗೆ ಬರುವಂತೆ ಶಾಸಕ ಶರಣು ಸಲಗರ್​​ಗೆ ಹಲವು ಬಾರಿ ನೋಟಿಸ್ ನೀಡಲಾಗಿದ್ದರೂ, ಅವರು ಹಾಜರಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ನ್ಯಾಯಾಲಯ ಬಂಧನ ವಾರಂಟ್ ಜಾರಿ ಮಾಡಿದ್ದು, ಯಾವುದೇ ಕ್ಷಣದಲ್ಲಾದರೂ ಶಾಸಕರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆಗಳಿವೆ. ಶಾಸಕರನ್ನು ಬಂಧಿಸಲು ಪೊಲೀಸರು ಅವರ ಬಸವಕಲ್ಯಾಣ ನಿವಾಸಕ್ಕೆ ತೆರಳಿದ್ದರೂ, ಶಾಸಕರು ಅಲ್ಲಿ ಲಭ್ಯವಿರದ ಕಾರಣ ವಾಪಸ್ ತೆರಳಿದ್ದಾರೆ. ಸದ್ಯ ಶಾಸಕರು ಎಲ್ಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿಲ್ಲ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *