Headlines

ಬಿಟ್ ಕಾಯಿನ್ ಹಗರಣಕ್ಕೂ ಶಾಸಕ ಹ್ಯಾರಿಸ್​ಗೂ ಏನು ಸಂಬಂಧ? ಕಾಂಗ್ರೆಸ್ ಶಾಸಕರ, ನಲಪಾಡ್ ಮನೆ ಮೇಲೆ ಇಡಿ ದಾಳಿ ಮಾಡಿದ್ದೇಕೆ? – Kannada News | Bitcoin Scam: ED Raids Congress MLA NA Haris and Mohammed Nalapad’s House in Bengaluru Over Money Laundering Links

ಮೊಹಮ್ಮದ್ ನಲಪಾಡ್, ಶಾಸಕ ಎನ್ಎ ಹ್ಯಾರಿಸ್ ಹಾಗೂ ಇಡಿ ದಾಳಿಯ ಚಿತ್ರImage Credit source: tv9

ಬೆಂಗಳೂರು, ಏಪ್ರಿಲ್ 20: ರಾಜ್ಯ ರಾಜಕಾರಣದಲ್ಲಿ ದೊಡ್ಡ ಸಂಚಲನ ಮೂಡಿಸಿದ್ದ ಬಿಟ್‌ಕಾಯಿನ್ ಹಗರಣ (Bitcoin scam) ಮತ್ತೆ ಮುನ್ನೆಲೆಗೆ ಬಂದಿದೆ. ಹಗರಣಕ್ಕೆ ಸಂಬಂಧಿಸಿದಂತೆ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (PMLA) ಅಡಿಯಲ್ಲಿ ಜಾರಿ ನಿರ್ದೇಶನಾಲಯದ (ED) ಅಧಿಕಾರಿಗಳು ಸೋಮವಾರ ಬೆಳ್ಳಂಬೆಳಗ್ಗೆ ಶಾಂತಿನಗರ ಕಾಂಗ್ರೆಸ್ ಶಾಸಕ ಎನ್.ಎ. ಹ್ಯಾರಿಸ್ (NA Haris) ಮತ್ತು ಅವರ ಪುತ್ರ ಮೊಹಮ್ಮದ್ ನಲಪಾಡ್ (Mohammed Nalapad) ನಿವಾಸಗಳ ಮೇಲೆ ದಾಳಿ ನಡೆಸಿದ್ದಾರೆ.

12 ಕಡೆ ಏಕಕಾಲಕ್ಕೆ ದಾಳಿ

ಬೆಂಗಳೂರಿನ ಅಶೋಕನಗರದಲ್ಲಿರುವ ಹ್ಯಾರಿಸ್ ನಿವಾಸ ಸೇರಿದಂತೆ ನಗರದ ಒಟ್ಟು 12 ಕಡೆಗಳಲ್ಲಿ ಇಡಿ ಅಧಿಕಾರಿಗಳ ತಂಡ ಶೋಧ ಕಾರ್ಯ ಕೈಗೊಂಡಿದೆ. ಬಿಟ್‌ಕಾಯಿನ್ ಹಗರಣದ ಪ್ರಮುಖ ಆರೋಪಿ ಶ್ರೀಕಿ ಅಲಿಯಾಸ್ ಶ್ರೀಕೃಷ್ಣನ ಜಯನಗರದ ಮನೆ ಹಾಗೂ ಮಾಜಿ ಕೇಂದ್ರ ಸಚಿವ ರೆಹಮಾನ್ ಖಾನ್ ಅವರ ಮೊಮ್ಮಗ ಹಾಕೀಬ್ ಖಾನ್ ನಿವಾಸದ ಮೇಲೂ ದಾಳಿ ನಡೆದಿದೆ. ಹಗರಣದ ಕಿಂಗ್‌ಪಿನ್ ಶ್ರೀಕಿ ಜೊತೆ ಮೊಹಮ್ಮದ್ ನಲಪಾಡ್ ಆಪ್ತ ಒಡನಾಟ ಹೊಂದಿದ್ದರು ಎಂಬ ಶಂಕೆಯ ಹಿನ್ನೆಲೆಯಲ್ಲಿ ಈ ತನಿಖೆ ಚುರುಕುಗೊಂಡಿದೆ.

ಹಣಕಾಸು ನಂಟಿನ ಶಂಕೆ

ಈ ಹಿಂದೆ ಸಿಸಿಬಿ ಮತ್ತು ಸಿಐಡಿ ನಡೆಸಿದ್ದ ತನಿಖೆಯ ವೇಳೆ ಶ್ರೀಕಿ ಮತ್ತು ನಲಪಾಡ್ ನಡುವೆ ಹಣಕಾಸಿನ ವ್ಯವಹಾರ ನಡೆದಿರುವ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ಬಿಟ್‌ಕಾಯಿನ್ ವರ್ಗಾವಣೆ ಮತ್ತು ಅದರಿಂದ ಬಂದ ಹಣವನ್ನು ಅಕ್ರಮವಾಗಿ ಬಳಕೆ ಮಾಡಿರುವ ಬಗ್ಗೆ ಇಡಿ ಅಧಿಕಾರಿಗಳು ಈಗ ಕಡತಗಳ ಪರಿಶೀಲನೆ ನಡೆಸುತ್ತಿದ್ದಾರೆ. ದಾಳಿಯ ವೇಳೆ ಹ್ಯಾರಿಸ್ ಮತ್ತು ಅವರ ಪುತ್ರರು ಮನೆಯಲ್ಲೇ ಇದ್ದು, ಅಧಿಕಾರಿಗಳು ಬ್ಯಾಂಕ್ ವಹಿವಾಟು ಹಾಗೂ ಇತರ ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ.

ಪ್ರಮುಖ ಆರೋಪಗಳು

ಜಾರಿ ನಿರ್ದೇಶನಾಲಯವು ಈ ಹಗರಣದಲ್ಲಿ ಈ ಕೆಳಗಿನ ಗಂಭೀರ ಆರೋಪಗಳನ್ನು ಪಟ್ಟಿ ಮಾಡಿದೆ;

  • ವೆಬ್‌ಸೈಟ್ ಹ್ಯಾಕಿಂಗ್: ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ವೆಬ್‌ಸೈಟ್‌ಗಳನ್ನು ಹ್ಯಾಕ್ ಮಾಡಿ ವರ್ಚುವಲ್ ಡಿಜಿಟಲ್ ಆಸ್ತಿಗಳನ್ನು (VDAs) ಕಳವು ಮಾಡುವುದು.
  • ಡೇಟಾ ಕಳವು: ವೆಬ್‌ಸೈಟ್‌ಗಳನ್ನು ಹ್ಯಾಕ್ ಮಾಡಿ ಮಹತ್ವದ ಡೇಟಾ ಮತ್ತು ಹಣವನ್ನು ದೋಚುವುದು.
    ಅಕ್ರಮ ಮಾರಾಟ (Routing): ಕಳುವಾದ ಡಿಜಿಟಲ್ ಆಸ್ತಿಗಳನ್ನು ಕ್ರಿಪ್ಟೋ ಟ್ರೇಡಿಂಗ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಮಾರಾಟ ಮಾಡಿ ಹಣವಾಗಿ ಪರಿವರ್ತಿಸುವುದು.
  • ಹಣ ವರ್ಗಾವಣೆ (Layering): ಮಾರಾಟದಿಂದ ಬಂದ ಹಣವನ್ನು ವಿವಿಧ ಬ್ಯಾಂಕ್ ಖಾತೆಗಳ ಮೂಲಕ ವರ್ಗಾವಣೆ ಮಾಡಿ ಮೂಲವನ್ನು ಮುಚ್ಚಿಡುವುದು.
  • ಅಕ್ರಮ ಬಳಕೆ: ಕಳುವಾದ ಹಣವನ್ನು ವೈಯಕ್ತಿಕ ಲಾಭಕ್ಕಾಗಿ ಹಾಗೂ ಡ್ರಗ್ಸ್ ಖರೀದಿಯಂತಹ ಕಾನೂನುಬಾಹಿರ ಚಟುವಟಿಕೆಗಳಿಗೆ ಬಳಸಿರುವುದು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *