ಬಿಡಿಎ ಓಪನ್ ಹೌಸ್ ಸಭೆಗೆ ಉತ್ತಮ ಸ್ಪಂದನೆ: 3,092 ದೂರುಗಳ ವಿಚಾರಣೆ, 2,206 ಸಮಸ್ಯೆಗಳ ಇತ್ಯರ್ಥ – Kannada News | BDA Open House Initiative Wins Public Trust: Over 2,200 Complex Grievances Resolved, 75 Meetings Held So Far

ಬಿಡಿಎ ಓಪನ್ ಹೌಸ್ ಸಭೆImage Credit source: Bangalore Development Authority Facebook page

ಬೆಂಗಳೂರು, ಜುಲೈ 22: ಸಾರ್ವಜನಿಕರ ದೀರ್ಘಕಾಲದ ಸಮಸ್ಯೆಗಳನ್ನು ಪರಿಹರಿಸುವ ಉದ್ದೇಶದಿಂದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ಆರಂಭಿಸಿರುವ ಓಪನ್ ಹೌಸ್ ಮೀಟಿಂಗ್ (OHM) ಯೋಜನೆಗೆ ಉತ್ತಮ ಸ್ಪಂದನೆ ದೊರೆತಿದ್ದು, ಹಲವು ವರ್ಷಗಳಿಂದ ಬಾಕಿ ಉಳಿದಿದ್ದ ದೂರುಗಳ ಇತ್ಯರ್ಥಕ್ಕೆ ವೇದಿಕೆಯಾಗುತ್ತಿದೆ. 2025ರ ಆಗಸ್ಟ್‌ನಲ್ಲಿ ಬಿಡಿಎಯ ಸಿಟಿಜನ್ ಆಕ್ಷನ್ ಸೆಲ್ (CAC) ಮೂಲಕ ಆರಂಭಿಸಲಾದ ಈ ಯೋಜನೆಯಡಿ, ಜೂನ್ 30ರ ವೇಳೆಗೆ ನಗರದಲ್ಲಿನ ನಾಲ್ಕು ವಲಯಗಳಿಂದ ದಾಖಲಾಗಿದ್ದ 5,829 ದೂರುಗಳಲ್ಲಿ 3,092 ದೂರುಗಳ ವಿಚಾರಣೆ ನಡೆಸಲಾಗಿದ್ದು, 2,206 ದೂರುಗಳನ್ನು ಇತ್ಯರ್ಥಪಡಿಸಲಾಗಿದೆ.

ವಲಯವಾರು ದೂರುಗಳ ವಿವರ

  • ಪಶ್ಚಿಮ ವಲಯ: 2,228
  • ಉತ್ತರ ವಲಯ: 1,588
  • ದಕ್ಷಿಣ ವಲಯ: 1,312
  • ಪೂರ್ವ ವಲಯ: 701

ಇದನ್ನೂ ಓದಿ: ಕೆಪಿಎಸ್‌ಸಿ ನೇಮಕಾತಿ ಅಕ್ರಮ; ರಾಜ್ಯ ಸರ್ಕಾರ, ಸಿಬಿಐಗೆ ಕರ್ನಾಟಕ ಹೈಕೋರ್ಟ್ ನೋಟಿಸ್

ಯಾವ ರೀತಿಯ ದೂರುಗಳು?

  • ಪರ್ಯಾಯ ನಿವೇಶನ ಹಂಚಿಕೆ
  • ಒಂದೇ ನಿವೇಶನವನ್ನು ಹಲವರಿಗೆ ಹಂಚಿಕೆ ಮಾಡಿದ ಪ್ರಕರಣಗಳು
  • ದಿನಾಂಕವಿಲ್ಲದ ಹಂಚಿಕೆ ಪತ್ರಗಳು
  • ಡಿಜಿಟಲೀಕರಣಕ್ಕೂ ಮುಂಚಿನ ಲೇಔಟ್‌ಗಳಲ್ಲಿನ ದೋಷಗಳು
  • ಅತಿಕ್ರಮಿತ ನಿವೇಶನಗಳ ಸಮಸ್ಯೆ
  • ದಾಖಲೆಗಳ ಕೊರತೆಯಿಂದ ಉಂಟಾದ ವಿವಾದಗಳು

75 ಓಪನ್ ಹೌಸ್ ಸಭೆಗಳು

ಬಿಡಿಎ ಮಾಹಿತಿಯ ಪ್ರಕಾರ, ಇದುವರೆಗೆ 75 ಓಪನ್ ಹೌಸ್ ಸಭೆಗಳು ನಡೆದಿವೆ. ಒಟ್ಟು 4,895 ದೂರುಗಳನ್ನು ವಿಚಾರಣೆಗೆ ಪಟ್ಟಿ ಮಾಡಲಾಗಿದ್ದು, ಅವುಗಳಲ್ಲಿ 3,092 ಪ್ರಕರಣಗಳನ್ನು ಆಲಿಸಿ 2,206 ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲಾಗಿದೆ.

ದೂರು ಪರಿಹಾರ ವ್ಯವಸ್ಥೆ ಕಾರ್ಯನಿರ್ವಹಣೆ ಹೇಗೆ?

ಬಿಡಿಎ ಅಧಿಕಾರಿಗಳ ಪ್ರಕಾರ, ಹೊಸ ವ್ಯವಸ್ಥೆಯಲ್ಲಿ ದೂರುಗಳನ್ನು ಅವುಗಳ ಸ್ವರೂಪಕ್ಕೆ ಅನುಗುಣವಾಗಿ ವಿಂಗಡಿಸಲಾಗುತ್ತದೆ. ಸಾಮಾನ್ಯ ಪ್ರಶ್ನೆಗಳಿಗೆ ದೂರವಾಣಿ ಮೂಲಕ ಉತ್ತರದ ಜೊತೆಗೆ, ಸರಳ ದೂರುಗಳಿಗೆ 24 ಗಂಟೆಗಳೊಳಗೆ ಪರಿಹಾರ ನೀಡಲಾಗುತ್ತೆ. ತುರ್ತು ಹಾಗೂ ಸಂಕೀರ್ಣ ಸಮಸ್ಯೆಗಳಿಗೆ 7 ದಿನಗಳಲ್ಲಿ ಕ್ರಮವಾದರೆ, ನೀತಿ ಸಂಬಂಧಿತ ಅಥವಾ ಹಲವು ಇಲಾಖೆಗಳ ಸಮನ್ವಯ ಅಗತ್ಯವಿರುವ ಪ್ರಕರಣಗಳನ್ನು ಓಪನ್ ಹೌಸ್ ಸಭೆಗೆ ವರ್ಗಾಯಿಸಲಾಗುತ್ತದೆ.

ಬಿಡಿಎ ಅಧ್ಯಕ್ಷ ಎನ್.ಎ. ಹ್ಯಾರಿಸ್ ಮಾತನಾಡಿ, ಈ ವ್ಯವಸ್ಥೆಯಿಂದ ಸಂಪೂರ್ಣ ಪಾರದರ್ಶಕತೆ ಬಂದಿದೆ. ಭ್ರಷ್ಟಾಚಾರಕ್ಕೆ ಕಡಿವಾಣ ಬಿದ್ದಿದ್ದು, ಸಮಸ್ಯೆ ಬಗೆಹರಿಯದಿದ್ದರೆ ಅಥವಾ ಯಾರಾದರೂ ಹಣ ಕೇಳಿದರೆ, ಸಹಾಯವಾಣಿ ಮೂಲಕ ಮತ್ತೊಮ್ಮೆ ಓಪನ್ ಹೌಸ್ ಸಭೆಗೆ ನೋಂದಾಯಿಸಿಕೊಂಡು ಅಧಿಕಾರಿಗಳ ಎದುರೇ ತಮ್ಮ ಸಮಸ್ಯೆ ಮಂಡಿಸಬಹುದು ಎಂಬ ವಿಶ್ವಾಸ ಸಾರ್ವಜನಿಕರಲ್ಲಿ ಮೂಡಿದೆ ಎಂದು ತಿಳಿಸಿದ್ದಾರೆ ಎಂದು ದಿ ಟೈಮ್ಸ್​​ ಆಫ್​​ ಇಂಡಿಯಾ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Leave a Reply

Your email address will not be published. Required fields are marked *