ಬಿಗ್ ಬ್ಯಾಷ್ ಲೀಗ್ನಲ್ಲಿ ಇದೇ ಮೊದಲ ಬಾರಿಗೆ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದ ಬಾಬರ್ ಪ್ರದರ್ಶನ ತೀರ ಕಳಪೆಯಾಗಿತ್ತು. ಪ್ರತಿ ರನ್ ಗಳಿಸಲು ಬಾಬರ್ ಹರಸಾಹಸ ಪಡಬೇಕಾಯಿತು. ಕಳಪೆ ಫಾರ್ಮ್ ಜೊತೆಗೆ ರಾಷ್ಟ್ರೀಯ ಕರ್ತವ್ಯದಿಂದಾಗಿ ಬಾಬರ್ ಸೀಸನ್ ಮಧ್ಯದಲ್ಲೇ ಲೀಗ್ ತೊರೆದಿದ್ದಾರೆ. ಪರಿಣಾಮವಾಗಿ, ಬಾಬರ್ ಗಳಿಸಿದ ಪ್ರತಿ ರನ್ಗೆ ಸಿಡ್ನಿ ಸಿಕ್ಸರ್ಸ್ ಲಕ್ಷಾಂತರ ರೂಗಳ ವೇತನ ನೀಡಬೇಕಾಗಿ ಬಂದಿದೆ.
