ಬಿಳಿ ಬಟ್ಟೆಯ ಮೇಲಿನ ಹಠಮಾರಿ ಕಲೆಗಳನ್ನು ಸುಲಭವಾಗಿ ಹೋಗಲಾಡಿಸಲು ಇಲ್ಲಿವೆ ಸರಳ ಉಪಾಯ – Kannada News | Here are some simple tips to easily remove stubborn stains from white clothes

ಇತರೆ ಬಣ್ಣದ ಬಟ್ಟೆಗಳಿಗೆ ಹೋಲಿಸಿದರೆ ಬಿಳಿ ಬಟ್ಟೆಗಳ (white clothes) ಮೇಲೆ  ಸುಲಭವಾಗಿ ಕಲೆಗಳಾಗುತ್ತದೆ. ಎಣ್ಣೆ, ಪದಾರ್ಥ ಶಾಯಿ, ಚಹಾ ಕಲೆಗಳು, ಬಣ್ಣಗಳು ಸುಲಭವಾಗಿ ಬಿಳಿ ಬಟ್ಟೆಯ ಮೇಲೆ ಅಂಟಿಕೊಳ್ಳುತ್ತದೆ. ಈ ಸಣ್ಣ ಕಲೆ ಕೂಡ ಬಿಳಿ ಬಟ್ಟೆಯ ಅಂದವನ್ನೇ ಹಾಳು ಮಾಡುತ್ತದೆ. ಜೊತೆಗೆ ಕಲೆಗಳನ್ನು ತೊಡೆದುಹಾಕುವುದು ಕೂಡ ದೊಡ್ಡ ಸವಾಲಿನ ಸಂಗತಿ. ಹೌದು ಬಿಳಿ ಬಟ್ಟೆಯ ಮೇಲೆ ಕಲೆಯಾದ್ರೆ ಎಷ್ಟೇ ತಿಕ್ಕಿದ್ರೂ ಸಹ ಆ ಕಲೆಗಳು ಮಾತ್ರ ಹೋಗುವುದೇ ಇಲ್ಲ. ಅಲ್ಲದೆ  ಪದೇ ಪದೇ ತೊಳೆದ ನಂತರವೂ ಈ ಕಲೆಗಳು ಹಾಗೆಯೇ ಇರುತ್ತವೆ ಮತ್ತು ಬಟ್ಟೆಯು ಹಳದಿ ಬಣ್ಣಕ್ಕೆ ತಿರುಗಲು ಪ್ರಾರಂಭಿಸುತ್ತದೆ. ಹೀಗಿರುವಾಗ  ಈ ಕೆಲವು ಸುಲಭ ಸಲಹೆಗಳನ್ನು ಪಾಲಿಸುವ ಮೂಲಕ ಬಿಳಿ ಬಟ್ಟೆಯ ಮೇಲಿನ ಮೊಂಡುತನದ ಕಲೆಗಳನ್ನು ಸುಲಭವಾಗಿ ತೆಗೆದು ಹಾಕಬಹುದು.

ಬಿಳಿ ಬಟ್ಟೆಗಳ ಕಲೆಗಳನ್ನು ತೆಗದುಹಾಕಲು ಇಲ್ಲಿವೆ ಸುಲಭ ಸಲಹೆ:

ಅಡಿಗೆ ಸೋಡಾ ಮತ್ತು ವಿನೆಗರ್: ಬಿಳಿ ಬಟ್ಟೆಗಳಿಂದ ಕಲೆಗಳನ್ನು ತೆಗೆದುಹಾಕಲು ನೀವು ಅಡಿಗೆ ಸೋಡಾ ಮತ್ತು ವಿನೆಗರ್ ಅನ್ನು ಬಳಸಬಹುದು. ಒಂದು ಬಕೆಟ್ ಉಗುರು ಬೆಚ್ಚಗಿನ ನೀರಿಗೆ 1 ಕಪ್ ವಿನೆಗರ್ ಮತ್ತು 2 ಟೀ ಚಮಚ ಅಡಿಗೆ ಸೋಡಾ ಸೇರಿಸಿ, ನೀರನ್ನು ಚೆನ್ನಾಗಿ ಬೆರೆಸಿ. ಬಟ್ಟೆಯನ್ನು ಈ ದ್ರಾವಣದಲ್ಲಿ ನೆನೆಸಿ 30 ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ, ಶುದ್ಧ ನೀರಿನಿಂದ ಈ ಬಟ್ಟೆಯನ್ನು ತೊಳೆಯಿರಿ. ಇದು ನಿಮ್ಮ ಬಿಳಿ ಬಟ್ಟೆಯನ್ನು ನಿಮಿಷಗಳಲ್ಲಿ ಹೊಸದರಂತೆ ಹೊಳೆಯುವಂತೆ ಮಾಡುತ್ತದೆ.

ನಿಂಬೆ ಮತ್ತು ಉಪ್ಪು: ಬಿಳಿ ಬಟ್ಟೆಗಳಿಂದ ಮೊಂಡುತನದ ಕಲೆಗಳನ್ನು ತೆಗೆದುಹಾಕಲು ನಿಂಬೆ ಮತ್ತು ಉಪ್ಪನ್ನು ಸಹ ಬಳಸಬಹುದು.  ಇದನ್ನು ಮಾಡಲು, ನಿಂಬೆ ರಸವನ್ನು ಉಪ್ಪಿನೊಂದಿಗೆ ಬೆರೆಸಿ ಒಂದು ದ್ರಾವಣವನ್ನು ತಯಾರಿಸಿ. ಈ ಮಿಶ್ರಣವನ್ನು ಬಟ್ಟೆಗೆ ಅಂಟಿರುವ ಕಲೆಯ ಮೇಲೆ ಹಚ್ಚಿ 30 ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ, ಬಟ್ಟೆಯನ್ನು ಬಿಸಿಲಿನಲ್ಲಿ ಒಣಗಲು ಬಿಡಿ. ಈ ತಂತ್ರ ಕಲೆಗಳನ್ನು ತೆಗೆದುಹಾಕುತ್ತದೆ ಮತ್ತು ಬಟ್ಟೆಯ ಹೊಳಪನ್ನು ಕಾಪಾಡಿಕೊಳ್ಳುತ್ತದೆ.

ಪಾತ್ರೆ ತೊಳೆಯುವ ದ್ರವ: ಬಿಳಿ ಬಟ್ಟೆಯ ಮೇಲೆ ಆಹಾರದ ಕಲೆಗಳಾದರೆ ಅದನ್ನು ತೆಗೆದುಹಾಕಲು ಡಿಶ್‌ ವಾಶ್‌ ಲಿಕ್ವಿಡ್‌ ಅನ್ನು ಬಳಸಬಹುದು. ಅದಕ್ಕಾಗಿ ಬಟ್ಟೆಯ ಮೇಲೆ ಕಲೆ ಇರುವ ಪ್ರದೇಶಕ್ಕೆ ಪಾತ್ರೆ ತೊಳೆಯುವ ದ್ರವವನ್ನು ಹಚ್ಚಿ ನಿಧಾನವಾಗಿ ಉಜ್ಜಿಕೊಳ್ಳಿ. ನಂತರ, ಬಟ್ಟೆಯನ್ನು ಶುದ್ಧ ನೀರಿನಿಂದ ತೊಳೆಯಿರಿ. ಇದು ಎಣ್ಣೆ ಮತ್ತು ಆಹಾರದ ಕಲೆಗಳನ್ನು ತ್ವರಿತವಾಗಿ ತೆಗೆದುಹಾಕುತ್ತದೆ.

ಇದನ್ನೂ ಓದಿ: ಶೂನಿಂದ ಬರುವ ಕೆಟ್ಟ ವಾಸನೆಯನ್ನು ತೊಡೆದು ಹಾಕಲು ಸಿಂಪಲ್‌ ಟಿಪ್ಸ್‌ ಪಾಲಿಸಿ

ಬಿಳಿ ವಿನೆಗರ್: ಬಿಳಿ ವಿನೆಗರನ್ನು ನೈಸರ್ಗಿಕ ಕ್ಲೀನರ್ ಎಂದು ಪರಿಗಣಿಸಲಾಗುತ್ತದೆ. ಇದು ಬಿಳಿ ಬಟ್ಟೆಯ ಮೇಲೆ ಅಂಟಿರುವ ಎಣ್ಣೆ, ಚಹಾ ಅಥವಾ ಕಾಫಿ ಕಲೆಗಳನ್ನು ಸುಲಭವಾಗಿ ತೆಗೆದುಹಾಕುತ್ತದೆ. ಇದಕ್ಕಾಗಿ ಬಟ್ಟೆಯಲ್ಲಿ ಕಲೆಯಾದ ಜಾಗಕ್ಕೆ ವಿನೆಗರ್‌ ಹಾಕಿ 10 ನಿಮಿಷಗಳ ಕಾಲ ಬಿಡಿ. ನಂತರ, ಸೋಪ್ ಹಚ್ಚಿ ಮತ್ತು ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ.

ಟೂತ್‌ಪೇಸ್ಟ್: ಬಿಳಿ ಟೂತ್‌ಪೇಸ್ಟನ್ನು ಬಿಳಿ ಬಟ್ಟೆಯ ಮೇಲೆ ಅಂಟಿರುವ ಕಲೆಗಳ ಮೇಲೆ  ಹಚ್ಚಿ ಕೆಲವು ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ, ಅದನ್ನು ಟೂತ್ ಬ್ರಷ್‌ನಿಂದ ಸ್ಕ್ರಬ್ ಮಾಡಿ. ಇದು ಹಠಮಾರಿ ಕಲೆಯನ್ನು ಸುಲಭವಾಗಿ ತೆಗೆದುಹಾಕಲು ಸಹಾಯ ಮಾಡುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *