ಮೈಸೂರು, ಫೆಬ್ರವರಿ 25: ಟಿ.ನರಸೀಪುರ–ಬನ್ನೂರು–ಮಂಡ್ಯ ಬಸ್‌ಗಳಲ್ಲಿ ಸುಡುವ ಬೇಸಿಗೆಯಲ್ಲಿ ಪ್ರಯಾಣಿಕರಿಗೆ KSRTC ಸಿಬ್ಬಂದಿ ಆಶ್ರಯ ನೀಡಿದ್ದಾರೆ. ನಿರ್ವಾಹಕ ಲಕ್ಷ್ಮೇಶ್ ಮತ್ತು ಚಾಲಕ ಹೇಮಂತ್ ತಮ್ಮ ಆಸಕ್ತಿಯಿಂದ ಬಸ್ಸಿನೊಳಗೆ ಶುದ್ಧ ಕುಡಿಯುವ ನೀರಿನ ಕ್ಯಾನ್ ಅಳವಡಿಸಿ, ಪ್ರಯಾಣಿಕರ ದಾಹ ನಿವಾರಣೆ ಮಾಡಿದ್ದಾರೆ. ಪ್ರತಿದಿನ 2–3 ಕ್ಯಾನ್ ನೀರನ್ನು ಶುದ್ಧ ನೀರಿನ ಘಟಕಗಳಿಂದ ತರುತ್ತಿರುವ ಅವರ ಮಾನವೀಯ ಕಾರ್ಯವನ್ನು ಸಾರ್ವಜನಿಕರು ಶ್ಲಾಘಿಸಿದ್ದಾರೆ. ಇದರಿಂದ ಪ್ರೇರಣೆ ಪಡೆದು ಇದೇ ಮಾರ್ಗದ 5 ಬಸ್‌ಗಳಲ್ಲಿ ಸಹ ಉಚಿತ ನೀರಿನ ವ್ಯವಸ್ಥೆ ಮಾಡಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
