‘ಅಮೃತಧಾರೆ’ ಧಾರಾವಾಹಿಯಲ್ಲಿ ಜೆಡಿ ಹಾಯಾಗಿ ಜೀವನ ನಡೆಸಿಕೊಂಡು ಹೋಗುತ್ತಿದ್ದ ವ್ಯಕ್ತಿ. ಅಣ್ಣನ ಆಸ್ತಿಯನ್ನೆಲ್ಲ ಕಬಳಿಸಿ, ಬೇರೆಯದೇ ರೀತಿಯಲ್ಲಿ ಬದುಕಲು ಆರಂಭಿಸಿದ. ಆದರೆ, ಈಗ ಆತನ ಪಾಪದ ಕೊಡ ತುಂಬಿ ತುಳುಕುತ್ತಿದೆ. ಹೀಗಾಗಿ, ಆತನಿಗೆ ಕೆಟ್ಟ ದಿನಗಳು ಆರಂಭವಾದವೂ ಎಂದರೂ ತಪ್ಪಾಗಲಾರದು. ಆ ಬಗ್ಗೆ ಇಲ್ಲಿದೆ ವಿವರ.
‘ಅಮೃತಧಾರೆ’ ಧಾರಾವಾಹಿಯಲ್ಲಿ ಬೆಟ್ಟಿಂಗ್ ಆ್ಯಪ್ ಮಾಡಿಕೊಂಡ ಜಯದೇವ್ ನಂತರ ಅದರಿಂದ ಸಾಕಷ್ಟು ನಷ್ಟ ಅನುಭವಿಸಿದೆ. ಈ ನಷ್ಟದಿಂದ ಹೊರಬರುವ ಮೊದಲೇ ಆತನ ಮನೆ, ಕಚೇರಿ ಎಲ್ಲವೂ ಸೀಝ್ ಆಯಿತು. ಈಗ ಗೌತಮ್ ಮರಳಿ ಮನೆ, ಕಂಪನಿ ಎಲ್ಲವನ್ನೂ ಮರಳಿ ಪಡೆದಿದ್ದಾನೆ.
ಇದನ್ನೂ ಓದಿ: ‘ಅಮೃತಧಾರೆ’: ಮೋಸ ಮಾಡಿ ಕಾಲ್ಕಿತ್ತ ಜೆಡಿ ಪತ್ನಿ ದಿಯಾ; ಬೀದಿಗೆ ಬಂದ ಜಯದೇವ್
ಒಂದು ಕಡೆ ಅಮ್ಮನನ್ನು ಜಯದೇವ್ ದೂರ ಮಾಡಿಕೊಂಡ. ಅಣ್ಣನಿಗಂತೂ ಮುಖ ತೋರಿಸುವ ಸ್ಥಿತಿಯಲ್ಲಿ ಆತ ಇಲ್ಲ. ಇದರ ಜೊತೆಗೆ ಮತ್ತೊಂದು ಅಚ್ಚರಿಯ ಘಟನೆ ಎಂದರೆ ಈತನ ಪತ್ನಿ ದಿಯಾ ಎನಿಸಿಕೊಂಡವಳು ಮೋಸ ಮಾಡಿ ಓಡಿ ಹೋಗಿದ್ದಾಳೆ. ಇದೆಲ್ಲವೂ ಜಯದೇವ್ಗೆ ಶಾಕಿಂಗ್ ಎನಿಸಿದೆ. ಈಗ ಆತನು ಬೀದಿ ಬದಿಯಲ್ಲೇ ಮಲಗುವಂತಾಗಿದೆ. ಈ ಸಮಯದಲ್ಲಿ ಆತನ ಕೈ ಬೆರಳಲ್ಲಿ ಇದ್ದ ಚಿನ್ನದ ಉಂಗುರುವನ್ನು ವ್ಯಕ್ತಿಯೋರ್ವ ಕದ್ದು ಓಡಿದ್ದಾನೆ. ಇದರಿಂದ ಜಯದೇವ್ ಶಾಕ್ಗೆ ಒಳಗಾಗಿದ್ದಾನೆ. ಮುಂದಿನ ದಿನಗಳಲ್ಲಿ ಧಾರಾವಾಹಿ ಯಾವ ರೀತಿಯಲ್ಲಿ ಸಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
‘ಅಮೃತಧಾರೆ’ ಧಾರಾವಾಹಿ ಕೊನೆಯ ಹಂತಕ್ಕೆ ತಲುಪಿದೆ ಎನ್ನುವ ಮಾತುಗಳು ಕೇಳಿ ಬಂದಿವೆ. ಏಕೆಂದರೆ, ಈಗಾಗಲೇ ಜಯದೇವ್ಗೆ ಕೆಟ್ಟ ಪರಿಸ್ಥಿತಿ ಬಂದಿದೆ. ಅವನ ತಾಯಿ ಬದಲಾಗಿದ್ದಾಳೆ. ಇನ್ನು, ಗೌತಮ್ಗೂ ಮನೆ ಮರಳಿ ಸಿಕ್ಕಿದೆ. ಈಗ ಅವರ ಜಾತಕದಲ್ಲಿ ಮಗಳಿಂದ ಕೆಟ್ಟದಾಗುತ್ತದೆ ಎಂಬುದು ಬಂದಿದೆ. ಈ ಆ್ಯಂಗಲ್ನಲ್ಲಿ ಕಥೆ ಹೋಗುತ್ತದೆಯೇ ಎನ್ನುವ ಪ್ರಶ್ನೆ ಮೂಡಿದೆ. ಶೀಘ್ರವೇ ‘ಜಗದ್ಧಾತ್ರಿ’ ಸಿನಿಮಾ ಬರಲಿದೆ. ಈ ಧಾರಾವಾಹಿ ಯಾವಾಗ ಪ್ರಸಾರ ಕಾಣಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.