ಎಲ್ಎಸ್ಜಿ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ ತಂಡ ಸೋತಿದೆ. ರೋಚಕ ಪಂದ್ಯದಲ್ಲಿ ಆರ್‌ಸಿಬಿ 9 ರನ್‌ಗಳ ಸೋಲು ಕಂಡಿತು. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಡಕ್ ಬಿದ್ದಿದ್ದಾರೆ. ಒಂದೆಡೆ ವಿರಾಟ್ ಕೊಹ್ಲಿ ಅವರ ಅಪರೂಪದ ‘ಡಕ್ ಔಟ್’ ಅಭಿಮಾನಿಗಳಿಗೆ ಆಘಾತ ನೀಡಿದರೆ, ಮತ್ತೊಂದೆಡೆ ರಿಷಬ್ ಪಂತ್ ನೇತೃತ್ವದ ತಂಡ ಸತತ ಆರು ಸೋಲುಗಳ ನಂತರ ಗೆಲುವಿನ ಹಳಿಗೆ ಮರಳಿದೆ.
209 ರನ್‌ಗಳ (19 ಓವರ್) ಬೃಹತ್ತ ಮೊತ್ತ ಬೆನ್ನು ಹತ್ತಿದ ಆರ್ಸಿಬಿಗೆ ಆರಂಭದಲ್ಲೇ ಆಘಾತ ಎದುರಾಯಿತು. ಕೊಹ್ಲಿ ಹಾಗೂ ಬೆತೆಲ್ ಔಟ್ ಆದರು. ಪಂದ್ಯದ ಗೆಲುವಿನಲ್ಲಿ 24 ವರ್ಷದ ಯುವ ವೇಗಿ ಯಾದವ್ ಪ್ರಮುಖ ಪಾತ್ರ ವಹಿಸಿದರು. ಕೇವಲ 33 ರನ್ ನೀಡಿ 3 ವಿಕೆಟ್ ಕಬಳಿಸಿದ ಇವರು, ಪಂದ್ಯದ ದಿಕ್ಕನ್ನೇ ಬದಲಿಸಿದರು. ಕೊಹ್ಲಿ ಔಟ್ ಆದ ಬಳಿಕ ದೇವದತ್ ಪಡಿಕ್ಕಲ್ ಮತ್ತು ರಜತ್ ಪಾಟಿದಾರ್ ನಡುವಿನ 95 ರನ್‌ಗಳ ಜೊತೆಯಾಟವನ್ನು ಮುರಿಯುವ ಮೂಲಕ ಪಂತ್ ಪಡೆಗೆ ಗೆಲುವಿನ ಹಾದಿಯನ್ನು ಸುಗಮ ಮಾಡಿದರು. ಅದೇ ಓವರ್‌ನಲ್ಲಿ ಜಿತೇಶ್ ಶರ್ಮಾ ಅವರ ವಿಕೆಟ್ ಕೂಡ ಪಡೆದ ಯಾದವ್, ಅಂತಿಮವಾಗಿ 9 ರನ್‌ಗಳ ರೋಚಕ ಜಯ ತಂದುಕೊಡುವಲ್ಲಿ ಯಶಸ್ವಿಯಾದರು.
PRINCE YADAV BOWLED AN ABSOLUTE CRACKER TO GET KOHLI FOR A DUCK. 🥶 pic.twitter.com/N0xS5ZEtmJ
— Mufaddal Vohra (@mufaddal_vohra) May 7, 2026
ಕ್ರಿಕೆಟ್ ದಿಗ್ಗಜ ವಿರಾಟ್ ಕೊಹ್ಲಿ ಶೂನ್ಯಕ್ಕೆ ಔಟ್ ಆಗುವ ಮೂಲಕ ಅಚ್ಚರಿ ಮೂಡಿಸಿದರು. 18 ವರ್ಷಗಳ ಐಪಿಎಲ್ ಇತಿಹಾಸದಲ್ಲಿ, 269 ಇನಿಂಗ್ಸ್‌ಗಳನ್ನು ಆಡಿರುವ ಕೊಹ್ಲಿಕೇವಲ 11ನೇ ಬಾರಿಗೆ ಶೂನ್ಯಕ್ಕೆ ನಿರ್ಗಮಿಸಿದ್ದಾರೆ. ವಿಶೇಷವೆಂದರೆ, ರನ್ ಚೇಸಿಂಗ್ ವೇಳೆ ಅವರು ಔಟಾಗುತ್ತಿರುವುದು ಇದು 6ನೇ ಬಾರಿ.
ಇದನ್ನೂ ಓದಿ: ಲಕ್ನೋ ವಿರುದ್ಧ ಆರ್ಸಿಬಿಗೆ 9 ರನ್ ಸೋಲು
ವಿರಾಟ್ ಕೊಹ್ಲಿ ರನ್ ಚೇಸಿಂಗ್ ವೇಳೆ ಶೂನ್ಯಕ್ಕೆ ಔಟಾಗಿ ಬರೋಬ್ಬರಿ 3,301 ದಿನಗಳು ಕಳೆದಿವೆ. ಅಂದರೆ ಸುಮಾರು 8 ವರ್ಷಗಳು. ಕೊನೆಯ ಬಾರಿಗೆ 2017ರ ಏಪ್ರಿಲ್ 23ರಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಅವರು ಮೊದಲ ಎಸೆತದಲ್ಲೇ ಔಟ್ ಆಗಿದ್ದರು. ಅಂದು ಆರ್‌ಸಿಬಿ ತಂಡವು ಐಪಿಎಲ್ ಇತಿಹಾಸದ ಕನಿಷ್ಠ ಮೊತ್ತವಾದ 49 ರನ್‌ಗಳಿಗೆ ಆಲೌಟ್ ಆಗಿತ್ತು. ಆ ಬಳಿಕ ಡಕ್ ಬಿದ್ದಿದ್ದು ಇದೇ ಮೊದಲು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On – 7:39 am, Fri, 8 May 26
