ಬೆಂಗಳೂರಲ್ಲಿ ಉಬರ್ ಕ್ಯಾಬ್ ಚಾಲಕನ ಮೇಲೆ ಗ್ಯಾಂಗ್​ನಿಂದ ಡೆಡ್ಲಿ ಅಟ್ಯಾಕ್​​! ಯುವತಿ ಎದುರೇ ಹಿಗ್ಗಾಮುಗ್ಗಾ ಥಳಿತ – Kannada News | Bengaluru: Gang Attacks Uber Cab Driver in Front of girl

ಬೆಂಗಳೂರು, ಮೇ 23: ಸಿಲಿಕಾನ್ ಸಿಟಿಯಲ್ಲಿ (Bangaluru) ಪುಂಡರ ಹಾವಳಿ ಮಿತಿಮೀರಿದ್ದು, ಮಧ್ಯರಾತ್ರಿ ರಸ್ತೆಯಲ್ಲೇ ಉಬರ್ ಕ್ಯಾಬ್ ಚಾಲಕನೊಬ್ಬನ (Uber driver) ಮೇಲೆ ಮತ್ತೊಬ್ಬ ಚಾಲಕ ಮತ್ತು ಗ್ಯಾಂಗ್​​ನಿಂದ ಕಾರು ಅಡ್ಡ ಹಾಕಿ ಮನ ಬಂದಂತೆ ಥಳಿಸಿದ್ದಾರೆ. ನಗರದ ಡಬಲ್ ರೋಡ್​ನಲ್ಲಿ ಮೇ 22 ರಂದು ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಹಲ್ಲೆಗೆ ಕಾರಣವೇನು ಎಂದು ತಿಳಿದುಬಂದಿಲ್ಲ. ವಿಲ್ಸನ್ ಗಾರ್ಡನ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಮುಖ್ಯಾಂಶಗಳು

  • ರಸ್ತೆಯಲ್ಲೇ ಉಬರ್ ಚಾಲಕನ ಮೇಲೆ ಮಾರಣಾಂತಿಕ ಹಲ್ಲೆ
  • ಡೆಡ್ಲಿ ಅಟ್ಯಾಕ್​​ ವಿಡಿಯೋ ವೈರಲ್​​
  • ಇದುವರೆಗೆ ಯಾವುದೇ ಅಧಿಕೃತ ದೂರು ದಾಖಲಾಗಿಲ್ಲ

ಯುವತಿ ಮುಂದೆ ಹಿಗ್ಗಾಮುಗ್ಗಾ ಹಲ್ಲೆ

ಮತ್ತೊಬ್ಬ ಚಾಲಕ ಹಾಗೂ ಆತನ ಗ್ಯಾಂಗ್ ಸೇರಿ ಉಬರ್ ಕ್ಯಾಬ್ ಅನ್ನು ಮಧ್ಯರಸ್ತೆಯಲ್ಲೇ ಅಡ್ಡಗಟ್ಟಿದ್ದಾರೆ. ಬಳಿಕ ಉಬರ್ ಡ್ರೈವರ್‌ನನ್ನು ಬಲವಂತವಾಗಿ ಕಾರಿನಿಂದ ಕೆಳಗೆ ಇಳಿಸಿ, ಮನಬಂದಂತೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಹಲ್ಲೆ ನಡೆಸುವಾಗ ಪಕ್ಕದಲ್ಲೇ ಯುವತಿಯೊಬ್ಬರು ನಿಂತಿದ್ದರೂ ಲೆಕ್ಕಿಸದ ಪುಂಡರು, ಚಾಲಕನ ಮೇಲೆ ಡೆಡ್ಲಿ ಅಟ್ಯಾಕ್ ಮಾಡಿದ್ದಾರೆ. ಸದ್ಯ ಎದೆ ನಡುಗಿಸುವ ಹಲ್ಲೆಯ ಸಿಸಿಟಿವಿ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿವೆ.

ಇದನ್ನೂ ಓದಿ: ಶಿರಸಿಯಲ್ಲಿ ನಡುರಸ್ತೆಯಲ್ಲೇ ನಡುಕ ಹುಟ್ಟಿಸಿದ ಗ್ಯಾಂಗ್‌ವಾರ್!: 6 ಯುವಕರ ವಿರುದ್ಧ ಪ್ರಕರಣ ದಾಖಲು

ಇನ್ನು ಈ ಘಟನೆ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಮಾಹಿತಿ ತಿಳಿಯುತ್ತಿದ್ದಂತೆಯೇ ವಿಲ್ಸನ್ ಗಾರ್ಡನ್ ಪೊಲೀಸರು ಅಲರ್ಟ್ ಆಗಿದ್ದಾರೆ. ಹಲ್ಲೆ ನಡೆದ ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಮೇ 22ರಂದೇ ಈ ಘಟನೆ ನಡೆದಿದ್ದು, ಇದುವರೆಗೆ ಯಾವುದೇ ಅಧಿಕೃತ ದೂರು ದಾಖಲಾಗಿಲ್ಲ.

ಸಿಸಿಟಿವಿ ತಲಾಷ್; ಪುಂಡರಿಗಾಗಿ ಹುಡುಕಾಟ

ದೂರು ದಾಖಲಾಗದಿದ್ದರೂ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು, ಕೆ.ಹೆಚ್. ರಸ್ತೆಯ ಸುತ್ತಮುತ್ತಲಿರುವ ವಿವಿಧ ಸಿಸಿ ಕ್ಯಾಮರಾಗಳ ದೃಶ್ಯಾವಳಿಗಳನ್ನು ತೀವ್ರವಾಗಿ ಪರಿಶೀಲಿಸುತ್ತಿದ್ದಾರೆ. ದಾಳಿಗೆ ಒಳಗಾದ ಉಬರ್ ಕ್ಯಾಬ್ ಹಾಗೂ ಅಟ್ಯಾಕ್ ಮಾಡಿದ ಗ್ಯಾಂಗ್‌ನ ಕಾರಿನ ನೋಂದಣಿ ಸಂಖ್ಯೆಗಳನ್ನು ಪತ್ತೆ ಹಚ್ಚಲಾಗುತ್ತಿದ್ದು, ಆರೋಪಿಗಳ ಪತ್ತೆಗಾಗಿ ಜಾಲ ಬೀಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Leave a Reply

Your email address will not be published. Required fields are marked *