ಬೆಂಗಳೂರು, ಜೂನ್ 28: ಮಹಾನಗರದ ಸಂಚಾರ ದಟ್ಟಣೆ ನಿವಾರಣೆಗೆ ಮಹತ್ವದ ಹೆಜ್ಜೆಯಾಗಿ, ಹೆಬ್ಬಾಳ ಜಂಕ್ಷನ್ ಬಳಿ 2.2 ಕಿ.ಮೀ ಉದ್ದದ ನೂತನ ತ್ರೀ ಲೇನ್ ಸುರಂಗ ರಸ್ತೆ (Tunnel Road) ಕಾಮಗಾರಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಈ ಯೋಜನೆಯು ಸುಧಾರಿತ ಎಂಜಿನಿಯರಿಂಗ್ ವೈಶಿಷ್ಟ್ಯಗಳನ್ನು ಒಳಗೊಂಡಿದ್ದು, ಬೆಂಗಳೂರಿನ ಉತ್ತರದ ಕಡೆಗೆ, ವಿಶೇಷವಾಗಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಪೂರ್ವಕ್ಕೆ ಕೆ.ಆರ್. ಪುರಂ ಕಡೆಗೆ ಸಂಚಾರ ಸಂಪರ್ಕವನ್ನು ಸುಧಾರಿಸಲು ನಿರ್ಣಾಯಕವಾಗಿದೆ. ಸುರಂಗ ರಸ್ತೆ ನಿರ್ಮಾಣವು ನಗರದ ಭವಿಷ್ಯದ ಬೆಳವಣಿಗೆಗೆ ಪೂರಕವಾಗಿದ್ದು, ಆಧುನಿಕ ತಂತ್ರಜ್ಞಾನ ಮತ್ತು ಸುರಕ್ಷತಾ ಕ್ರಮಗಳನ್ನು ಒಳಗೊಂಡಿರುತ್ತದೆ.
ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಸಿಎಂ, ಈ ಸುರಂಗ ಮಾರ್ಗವು ಸಂಪೂರ್ಣ ಟೋಲ್ ಫ್ರೀ (Toll-Free) ಆಗಿರಲಿದ್ದು, ಸಾರ್ವಜನಿಕರು ಯಾವುದೇ ಹಣ ನೀಡಬೇಕಿಲ್ಲ. ಬಿಡಿಎ ಈ ಯೋಜನೆಯ ಜವಾಬ್ದಾರಿ ಹೊತ್ತಿದೆ ಎಂದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
