ಬೆಂಗಳೂರಲ್ಲಿ ದುಬಾರಿ ಟಿಕೆಟ್ ಬೆಲೆಗೆ ‘ಜನ ನಾಯಗನ್’ ಡಲ್; ಶೋಗಳಿಗಿಲ್ಲ ಹೌಸ್​​ಫುಲ್ ಬೋರ್ಡ್ – Kannada News | Jana Nayagan Box Office: Thalapathy Vijay Film Starts Dull in Bengaluru Due to High Ticket Prices

ದಳಪತಿ ವಿಜಯ್ ನಟನೆಯ ಕೊನೆಯ ಸಿನಿಮಾ ‘ಜನ ನಾಯಗನ್’ (Jana Nayagan Movie) ಚಿತ್ರ ಇಂದು (ಜುಲೈ 23) ರಿಲೀಸ್ ಆಗಿದೆ. ಈ ಸಿನಿಮಾ ಒಳ್ಳೆಯ ಓಪನಿಂಗ್ ಪಡೆಯಲಿದೆ ಎಂದು ನಿರೀಕ್ಷಿಸಲಾಗಿದೆ. ಮೊದಲ ದಿನದ ಗಳಿಕೆ ಭಾರತದಲ್ಲಿ 100 ಕೋಟಿ ರೂಪಾಯಿ ದಾಟೋ ನಿರೀಕ್ಷೆ ಇದೆ. ಆದರೆ, ಈ ಚಿತ್ರಕ್ಕೆ ಬೆಂಗಳೂರಲ್ಲಿ ಡಲ್ ಓಪನಿಂಗ್ ಸಿಕ್ಕಿದೆ. ಬಹುತೇಕ ಮಲ್ಟಿಪ್ಲೆಕ್ಸ್​​ಗಳಲ್ಲಿ ಹೌಸ್​​ಫುಲ್ ಬೋರ್ಡ್ ಬಿದ್ದಿಲ್ಲ. ದುಬಾರಿ ಟಿಕೆಟ್ ದರ ಕೂಡ ಇದಕ್ಕೆ ಕಾರಣ ಎಂಬ ಮಾತು ವ್ಯಕ್ತವಾಗುತ್ತಿದೆ.

ಯಾವುದಾದರೂ ಒಂದು ಸಿನಿಮಾ ಗೆಲ್ಲಬೇಕು ಎಂದರೆ ಅದು ಕೇವಲ ಅಭಿಮಾನಿಗಳನ್ನು ಮಾತ್ರ ಖುಷಿಪಡಿಸುವ ರೀತಿಯಲ್ಲಿ ಇರಬಾರದು. ಅಂದಾಗ ಮಾತ್ರ ಸಿನಿಮಾ ದೊಡ್ಡ ಯಶಸ್ಸು ಕಾಣಲು ಸಾಧ್ಯ. ಆಗಲೇ ಒಳ್ಳೆಯ ಕಲೆಕ್ಷನ್ ಆಗೋದು. ಆದರೆ, ‘ಜನ ನಾಯಗನ್’ ಸಿನಿಮಾ ಅಭಿಮಾನಿಗಳನ್ನು ಗಮನದಲ್ಲಿ ಇಟ್ಟುಕೊಂಡು ಮಾಡಿದ ಚಿತ್ರ. ಹೀಗಾಗಿ, ಮೊದಲ ದಿನ ಮೊದಲ ಶೋ ಅಭಿಮಾನಿಗಳಿಂದ ತುಂಬಿದೆ.

ಬುಕ್ ಮೈ ಶೋ ಓಪನ್ ಮಾಡಿ ನೋಡಿದರೆ ಬೆಂಗಳೂರಿನಲ್ಲಿ 9 ಗಂಟೆಯ ಬಳಿಕದ ಬಹುತೇಕ ಶೋಗಳು ಹಸಿರು ಬಣ್ಣದಲ್ಲೇ ಇವೆ. ಅಂದರೆ, ಸಿನಿಮಾ ಹಾಲ್ ಬುಕ್ ಆಗುತ್ತಿಲ್ಲ ಎಂಬ ಅರ್ಥ ಇದು. ಇನ್ನು, ಕೆಲವೇ ಕೆಲವು ಶೋಗಳು ಆರೆಂಜ್ ಬಣ್ಣಕ್ಕೆ ತಿರುಗಿವೆ. ಆರೆಂಜ್ ಎಂದರೆ, ಸೀಟ್​​​ಗಳು ತುಂಬಲು ಆರಂಭಿಸಿದೆ ಎಂದರ್ಥ.

ಇದನ್ನೂ ಓದಿ: ಅಕ್ರಮವಾಗಿ ‘ಜನ ನಾಯಗನ್’ ಟಿಕೆಟ್ ದರ ಏರಿಕೆ: ಕ್ರಮ ತೆಗೆದುಕೊಳ್ಳಲು ವಿಜಯ್ ಅಭಿಮಾನಿಗಳ ಆಗ್ರಹ

‘ಜನ ನಾಯಗನ್’ ಸಿನಿಮಾ ಈಗಾಗಲೇ ಲೀಕ್ ಕಾಟ ಅನುಭವಿಸಿದೆ. ಇದು ಸಿನಿಮಾ ತಂಡಕ್ಕೆ ಚಾಲೆಂಜ್ ಆಗಿತ್ತು. ಈ ಕಾರಣದಿಂದ ಅನೇಕರು ಸಿನಿಮಾ ನೋಡುವ ಸಾಹಸಕ್ಕೆ ಹೋಗಿಲ್ಲ. ಇನ್ನು ಸಿನಿಮಾ ಟಿಕೆಟ್ ಬೆಲೆ ಮಲ್ಟಿಪ್ಲೆಕ್ಸ್​​ಗಳಲ್ಲಿ 400 ರೂಪಾಯಿ ದಾಟಿದೆ. ಇಷ್ಟೊಂದು ಹಣ ಕೊಟ್ಟು ಸಿನಿಮಾ ವೀಕ್ಷಿಸಲು ಪ್ರೇಕ್ಷಕ ಸಿದ್ಧನಿಲ್ಲ.
‘ಜನ ನಾಯಗನ್’ ಸಿನಿಮಾಗೆ ಎಚ್​​. ವಿನೋದ್ ನಿರ್ದೇಶನ ಇದೆ. ಈ ಚಿತ್ರಕ್ಕೆ ಪೂಜಾ ಹೆಗ್ಡೆ ನಾಯಕಿ. ಮಲಯಾಳಂ ನಟಿ ಮಮಿತಾ ಬೈಜು ಅವರು ಈ ಸಿನಿಮಾದಲ್ಲಿ ವಿಜಯ್ ಸಹೋದರಿ ಪಾತ್ರ ಮಾಡಿದ್ದಾರೆ. ತೆಲುಗಿನ ‘ಭಗವಂತ ಕೇಸರಿ’ ಚಿತ್ರದ ರಿಮೇಕ್ ಇದಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *