
ಟಾಲಿವುಡ್ ನಟ ಜೂನಿಯರ್ ಎನ್ಟಿಆರ್ (JR NTR) ಅವರು ಭಾನುವಾರ (ಮಾರ್ಚ್ 8) ಬೆಂಗಳೂರಿಗೆ ಆಗಮಿಸಿದ್ದರು. ಕಿಮ್ಸ್ ಆಸ್ಪತ್ರೆಯ ಹೊಸ ಘಟಕದ ಉದ್ಘಾಟನೆಗಾಗಿ ಅವರು ಇಲ್ಲಿಗೆ ಬಂದಿದ್ದರು. ಈ ವೇಳೆ ವೇದಿಕೆ ಮೇಲೆ ಮಾತನಾಡುವಾಗ ಅಭಿಮಾನಿಗಳು ಇದಕ್ಕೆ ಅವಕಾಶ ಕೊಡಲಿಲ್ಲ. ಒಂದೇ ಸಮನೆ ಕೂಗುತ್ತಿದ್ದರು. ಆಗ ಜೂನಿಯರ್ ಎನ್ಟಿಆರ್ ಅವರು ಖಡಕ್ ಎಚ್ಚರಿಕೆ ನೀಡಿದರು. ಈ ಸಂದರ್ಭದ ವಿಡಿಯೋ ವೈರಲ್ ಆಗಿದೆ.
ಜೂನಿಯರ್ ಎನ್ಟಿಆರ್ ಕಿಮ್ಸ್ ಘಟಕ ಉದ್ಘಾಟನೆಗೆ ಬರಲು ಒಂದು ಕಾರಣವೂ ಇತ್ತು. 1983ರಲ್ಲಿ ಜೂ ಎನ್ಟಿಆರ್ ಅವರ ತಾತ ಎನ್ಟಿಆರ್ ಅವರೇ ಕಿಮ್ಸ್ಗೆ ಅಡಿಗಲ್ಲು ಹಾಕಿದ್ದರು. 2009ರಲ್ಲಿ ಜೂ ಎನ್ಟಿಆರ್ ಭಾರಿ ರಸ್ತೆ ಅಪಘಾತಕ್ಕೆ ಒಳಾಗಾದಾಗ ಅವರು ಕಿಮ್ಸ್ನಲ್ಲಿಯೇ ಚಿಕಿತ್ಸೆ ಪಡೆದಿದ್ದರು. ಇದೇ ಕಾರಣಕ್ಕೆ ಇಂದು ಕಿಮ್ಸ್ನ ಹೊಸ ಘಟಕದ ಉದ್ಘಾಟನೆಗೆ ಅವರು ಆಗಮಿಸಿದ್ದರು. ಅವರನ್ನು ಅಭಿಮಾನಿಗಳು ಖುಷಿಯಿಂದ ಸ್ವಾಗತಿಸಿದರು. ಅವರನ್ನು ನೋಡಲು ಜನ ಸಾಗರವೇ ನೆರೆದಿತ್ತು.
ಇದನ್ನೂ ಓದಿ: ಬೆಂಗಳೂರಿನಲ್ಲಿ ಜೂ ಎನ್ಟಿಆರ್: ಬಂದಿದ್ದೇಕೆ? ಆಡಿದ ಮಾತುಗಳೇನು?
ಮಾರ್ಚ್ 8 ಮಹಿಳಾ ದಿನಾಚರಣೆ ಆಗಿತ್ತು. ಹೀಗಾಗಿ ಆ ಬಗ್ಗೆ ಅವರು ಮಾತನಾಡಿದರು. ‘ಮಹಿಳೆಯರನ್ನು ಹೇಗೆ ಗೌರವಿಸಬೇಕು ಎಂದು ಪದೇ ಪದೇ ಹೇಳುವುದು ತನಗೆ ಇಷ್ಟವಿಲ್ಲ. ಪ್ರತಿಯೊಬ್ಬ ಪುರುಷನೂ ಆ ಸಂಸ್ಕೃತಿಯೊಂದಿಗೆ ಹುಟ್ಟಬೇಕು’ ಎಂದರು. ಅಲ್ಲದೆ, ತಮ್ಮ ಮಕ್ಕಳಿಗೂ ಮಹಿಳೆಯರನ್ನು ಗೌರವಿಸುವುದನ್ನು ಹೇಳಿಕೊಡೋದಾಗಿ ಹೇಳಿದರು. ಸಿನಿಮಾ ಮಾತ್ರವಲ್ಲದೆ ಹೊರಗೆಯೂ ತುಂಬಾ ಸಾಧಾರಣವಾಗಿ ವರ್ತಿಸುವ ಎನ್ಟಿಆರ್, ಮಹಿಳೆಯರ ಸುರಕ್ಷತೆ ಮತ್ತು ಗೌರವದ ಬಗ್ಗೆ ತುಂಬಾ ಚೆನ್ನಾಗಿ ಮಾತನಾಡಿದ್ದಕ್ಕಾಗಿ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಅವರು ತಮ್ಮ ಅಭಿಮಾನಿಗಳ ಬಗ್ಗೆಯೂ ಮಾತನಾಡಿದರು ಮತ್ತು ಮನೆಗೆ ಎಚ್ಚರಿಕೆಯಿಂದ ಹೋಗುವಂತೆ ಸಲಹೆ ನೀಡಿದರು.
ಜೂನಿಯರ್ ಎನ್ಟಿಆರ್ ಅವರು ಮಾತು ಆರಂಭಿಸುವಾಗ ಫ್ಯಾನ್ಸ್ ಅವರ ಹೆಸರನ್ನು ಕೂಗಿದರು.. ಆಗ ಫ್ಯಾನ್ಸ್ ಜೂನಿಯರ್ ಎನ್ಟಿಆರ್ ಅವರಿಗೆ ಮಾತನಾಡಲು ಅವಕಾಶ ನೀಡಿಲ್ಲ. ಸುಮ್ಮನಿರಿ, ಸುಮ್ಮನಿರಿ ಎಂದು ಖಡಕ್ ಎಚ್ಚರಿಕೆ ನೀಡಿದ ಬಳಿಕ ಫ್ಯಾನ್ಸ್ ಸುಮ್ಮನಾದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.