ಬೆಂಗಳೂರು, ಜೂನ್ 16: ರಾಜಧಾನಿ ಬೆಂಗಳೂರಲ್ಲಿ (Bengaluru) ಶ್ವಾನಗಳ ದಾಳಿ ಪ್ರಕರಣಗಳು ಮಿತಿ ಮೀರಿದ್ದು, ಈ ಸಂಬಂಧ ಆರೋಗ್ಯ ಇಲಾಖೆಯ ಅಂಕಿ-ಅಂಶಗಳು ಆತಂಕ ಮೂಡಿಸಿದೆ. ಕಳೆದ 5 ತಿಂಗಳಲ್ಲಿ ಬೆಂಗಳೂರಲ್ಲಿ ಬರೋಬ್ಬರಿ 9,763 ಪ್ರಕರಣಗಳು ಪತ್ತೆಯಾಗಿದ್ದು, ಕೇವಲ 1 ವಾರದಲ್ಲಿ 13,220 ನಾಯಿ ಕಡಿತಗಳು ರಾಜ್ಯದಲ್ಲಿ ವರದಿಯಾಗಿವೆ. ನಾಯಿಗಳ ದಾಳಿಯಿಂದ ಕಳೆದ ವಾರ ಇಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಜನವರಿಯಿಂದ ಇಲ್ಲಿಯವರೆಗೆ ಬರೊಬ್ಬರಿ 2,66,367 ಜನರಿಗೆ ರಾಜ್ಯದಲ್ಲಿ ನಾಯಿ ಕಚ್ಚಿದ್ದು ಒಟ್ಟು 30 ಜನರು ಮೃತಪಟ್ಟಿದ್ದಾರೆ.
ಮುಖ್ಯಾಂಶಗಳು
- ಬೆಂಗಳೂರು ಸೇರಿ ರಾಜ್ಯಾದ್ಯಂತ ನಾಯಿಗಳ ಅಟ್ಟಹಾಸ
- 5 ತಿಂಗಳಲ್ಲಿ ಬೆಂಗಳೂರಲ್ಲಿ 9,763 ನಾಯಿ ಕಡಿತ ಪ್ರಕರಣ
- ಕೇವಲ 1 ವಾರದಲ್ಲಿ ರಾಜ್ಯದಲ್ಲಿ 13,220 ನಾಯಿ ಕಡಿತ ಕೇಸ್
ಇದನ್ನೂ ಓದಿ: ಒಂದೇ ತಿಂಗಳಲ್ಲಿ ಸಾವಿರಾರು ಜನರಿಗೆ ನಾಯಿ ಕಡಿತ; ಕಾಫಿನಾಡಿನಲ್ಲಿ ರಸ್ತೆಗಿಳಿಯಲೂ ಭಯಪಡುತ್ತಿರುವ ಜನರು!
ಕಳೆದ 5 ತಿಂಗಳ ಬೆಂಗಳೂರಿನ ಅಂಕಿ-ಅಂಶ
| ವಲಯ | ಪ್ರಕರಣಗಳು |
| ಆನೇಕಲ್ | 982 |
| ಪೂರ್ವ ವಲಯ | 2909 |
| ಉತ್ತರ ವಲಯ | 2569 |
| ದಕ್ಷಿಣ ವಲಯ | 3303 |
ಬೆಂಗಳೂರಿನ ಸೌತ್ ಝೋನ್ನಲ್ಲಿ ಅತಿ ಹೆಚ್ಚು ನಾಯಿ ಕಡಿತ ಪ್ರಕರಣ ದಾಖಲಾಗಿದ್ದು, ಕಳೆದ 5 ತಿಂಗಳಿನಲ್ಲಿ 3,303 ಪ್ರಕರಣಗಳು ಪತ್ತೆಯಾಗಿವೆ. ಕೆಸಿ ಜನರಲ್ ಆಸ್ಪತ್ರೆ ಸೇರಿದಂತೆ ಅನೇಕ ಕಡೆಗಳಲ್ಲಿ ಡಾಗ್ ಬೈಟ್ ವ್ಯಾಕ್ಸಿನ್ಗೆ ಬೇಡಿಕೆ ಹೆಚ್ಚಿದ್ದು, ದಿನಕ್ಕೆ 60-70 ಜನರಿಗೆ ಡಾಗ್ ಬೈಟ್ ವ್ಯಾಕ್ಸಿನ್ ನೀಡುವ ಪರಿಸ್ಥಿತಿ ಎದುರಾಗಿದೆ. ಹೀಗಾಗಿ ಆ್ಯಂಟಿ ರೇಬಿಸ್ ವ್ಯಾಕ್ಸಿನ್ನ ಶೇಖರಣೆಗೆ ಸರ್ಕಾರಿ ಆಸ್ಪತ್ರೆಗಳು ಮುಂದಾಗಿವೆ. ನಾಯಿ ಕಚ್ಚಿದರೆ ನಿರ್ಲಕ್ಷ್ಯ ಮಾಡದೆ ಕೂಡಲೇ ವ್ಯಾಕ್ಸಿನ್ ಪಡೆಯಿರಿ ಎಂದು ವೈದ್ಯರು ಕೂಡ ಸಲಹೆ ನೀಡಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
