ರಾಕಿಂಗ್ ಸ್ಟಾರ್ ಯಶ್ (Yash) ಈಗ ಪ್ಯಾನ್ ಇಂಡಿಯಾ ಸ್ಟಾರ್. ಅವರು ‘ಟಾಕ್ಸಿಕ್’ ಆರಂಭಿಸುವಾಗಲೇ, ‘ನಾನು ಪರಭಾಷೆಗೆ ಹೋಗಲ್ಲ, ಅವರನ್ನೇ ಇಲ್ಲಿಗೆ ಕರೆಯುತ್ತೇನೆ’ ಎಂದು ಹೇಳಿದ್ದರು. ಈ ಮಾತನ್ನು ನಿಜ ಮಾಡಿದ್ದಾರೆ. ಈಗ ಟ್ರೇಲರ್ ಲಾಂಚ್ ಈವೆಂಟ್ ಬೆಂಗಳೂರಲ್ಲೇ ನಡೆಯುತ್ತಿದ್ದು, ದೇಶ-ವಿದೇಶದ ಪತ್ರಕರ್ತರು ಆಗಮಿಸುವ ನಿರೀಕ್ಷೆ ಇದೆ. ಆದರೆ, ಈ ವಿಷಯದಲ್ಲಿ ಅಭಿಮಾನಿಗಳಿಗೆ ನಿರಾಸೆ ಕಾದಿದೆ.
ರಾಕಿಂಗ್ ಸ್ಟಾರ್ ಯಶ್ ಅವರು ‘ಕೆಜಿಎಫ್ 2’ ಚಿತ್ರದ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಹೊರ ಹೊಮ್ಮಿದರು.ಆ ಬಳಿಕ ಅವರು ಕೈಗೆತ್ತಿಕೊಂಡ ಚಿತ್ರ ಎಂದರೆ ‘ಟಾಕ್ಸಿಕ್’. ಈ ಚಿತ್ರಕ್ಕಾಗಿ ಫ್ಯಾನ್ಸ್ ಬರೋಬ್ಬರಿ ನಾಲ್ಕು ವರ್ಷ ಕಾದಿದ್ದಾರೆ. ಈ ಚಿತ್ರಕ್ಕೆ ಸರಿಯಾಗಿ ಪ್ರಚಾರ ಕೊಡಲಾಗುತ್ತಿಲ್ಲ ಎಂಬ ಬಗ್ಗೆ ಅಭಿಮಾನಿಗಳಿಗೆ ಬೇಸರ ಇದೆ. ಈಗ ಟ್ರೇಲರ್ ಲಾಂಚ್ ಮೂಲಕ ಜನರನ್ನು ಸೆಳೆದುಕೊಳ್ಳಲು ಯಶ್ ರೆಡಿ ಆಗಿದ್ದಾರೆ.
ಯಶ್ ಪ್ಲ್ಯಾನ್ ಪ್ರಕಾರ ಭಾನುವಾರ (ಫೆಬ್ರವರಿ 8) ಟ್ರೇಲರ್ ಲಾಂಚ್ ಈವೆಂಟ್ ಬೆಂಗಳೂರಲ್ಲೇ ನಡೆಯಲಿದೆ. ಕರ್ನಾಟಕದ ಪತ್ರಕರ್ತರ ಜೊತೆ ಬೇರೆ ಬೇರೆ ಭಾಷೆಯ ಪತ್ರಕರ್ತರು ಇದಕ್ಕೆ ಹಾಜರಿ ಹಾಕುವ ನಿರೀಕ್ಷೆ ಇದೆ. ಆದರೆ, ಈ ಈವೆಂಟ್ ಮಲ್ಟಿಪ್ಲೆಕ್ಸ್ ಒಂದರಲ್ಲಿ ನಡೆಯುತ್ತಿರುವುದರಿಂದ ಅಭಿಮಾನಿಗಳ ಪ್ರವೇಶಕ್ಕೆ ಅವಕಾಶ ಇಲ್ಲ. ಇದು ಫ್ಯಾನ್ಸ್ ಬೇಸರಕ್ಕೆ ಕಾರಣ ಆಗಿದೆ.
ಪರಭಾಷೆಯಲ್ಲಿ ಪ್ರೀ ರಿಲೀಸ್ ಈವೆಂಟ್ ಅನ್ನು ಓಪನ್ ಗ್ರೌಂಡ್ ಅಲ್ಲಿ ಮಾಡಲಾಗುತ್ತದೆ. ‘ಟಾಕ್ಸಿಕ್’ ಕೂಡ ಅದೇ ರೀತಿ ಮಾಡಬೇಕಿತ್ತು ಎಂಬುದು ಅಭಿಮಾಗಳ ಕೋರಿಕೆ. ಆದರೆ, ಬೆಂಗಳೂರಲ್ಲಿ ನಡೆದ ಆರ್ಸಿಬಿ ಈವೆಂಟ್ ಕಾಲ್ತುಳಿತದ ಬಳಿಕ ಯಾರೊಬ್ಬರೂ ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಸೇರಿಸುವ ರಿಸ್ಕ್ ತೆಗೆದುಕೊಳ್ಳುತ್ತಿಲ್ಲ. ಒಂದೊಮ್ಮೆ ಈವೆಂಟ್ ಮಾಡಿ ಏನಾದರೂ ತೊಂದರೆ ಆದರೆ, ಆ ರಿಸ್ಕ್ನ ಇವರೇ ತೆಗೆದುಕೊಳ್ಳಬೇಕಾದ ಪರಿಸ್ಥಿತಿ ಬರುತ್ತದೆ. ಹೀಗಾಗಿ, ರಿಸ್ಕ್ ಬೇಡ ಎಂಬ ನಿರ್ಧಾರಕ್ಕೆ ಯಶ್ ಬಂದಂತೆ ಇದೆ.
ಇದನ್ನೂ ಓದಿ: ‘ಟಾಕ್ಸಿಕ್’ಗೆ ತಿರುಗೇಟು ಕೊಡಲು ಸರ್ಪ್ರೈಸ್ ಶಾಕ್ ರೆಡಿ ಮಾಡಿದ ‘ಧುರಂಧರ್ 2’
ಗೀತು ಮೋಹನ್ದಾಸ್ ಅವರು ‘ಟಾಕ್ಸಿಕ್’ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಕೆವಿಎನ್ ಹಾಗೂ ಯಶ್ ಒಟ್ಟಾಗಿ ಸಿನಿಮಾ ನಿರ್ಮಿಸಿದ್ದಾರೆ. ಮಾರ್ಚ್ 19ರಂದು ಚಿತ್ರ ತೆರೆಗೆ ಬರಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
