Headlines

ಬೆಂಗಳೂರಿಗರಿಗೆ ಗುಡ್​​ನ್ಯೂಸ್​​: ನಮ್ಮ ಮೆಟ್ರೋ ಯೆಲ್ಲೋ ಲೈನ್​​ನಲ್ಲಿ ನಾಳೆಯಿಂದ 8ನೇ ರೈಲು ಸಂಚಾರ – Kannada News | Namma Metro Yellow Line to Get 8th Train from February 27

ಯೆಲ್ಲೋ ಲೈನ್​​ ಮೆಟ್ರೋImage Credit source: Google

ಬೆಂಗಳೂರು, ಫೆಬ್ರವರಿ 26: ಪಿಂಕ್ ಲೈನ್ ಮೆಟ್ರೋ ಮಾರ್ಗದಲ್ಲಿ ಸಂಚರಿಸಲಿರುವ ಬಿಇಎಂಎಲ್ ಸಂಸ್ಥೆ ತಯಾರಿಸಿದ ಮೂರನೇ ಡ್ರೈವರ್​ಲೆಸ್​ ರೈಲಿನ ಸೆಟ್ ಯಶಸ್ವಿಯಾಗಿ ಕೊತ್ತನೂರು ಡಿಪೋವನ್ನು ತಲುಪಿರುವ ಸುದ್ದಿಯ ನಡುವೆ ಬಿಎಂಆರ್​​ಸಿಎಲ್​​ ನಮ್ಮ ಮೆಟ್ರೋ ಪ್ರಯಾಣಿಕರಿಗೆ ಮತ್ತೊಂದು ಗುಡ್​​ನ್ಯೂಸ್​​ ಕೊಟ್ಟಿದೆ. ಯೆಲ್ಲೋ ಲೈನ್ ಮೆಟ್ರೋ ಮಾರ್ಗದಲ್ಲಿ ನಾಳೆಯಿಂದ 8ನೇ ರೈಲು ಸಂಚಾರ ಮಾಡಲಿದೆ ಎಂದು ಪ್ರಕಟಣೆ  ತಿಳಿಸಿದೆ.

ಪ್ರಕಟಣೆಯಲ್ಲಿ ಏನಿದೆ?

ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತವು 2026ರ ಫೆಬ್ರವರಿ 27ರಿಂದ ಹಳದಿ ಮಾರ್ಗದಲ್ಲಿ 8ನೇ ರೈಲನ್ನು ಪ್ರಯಾಣಿಕರ ಸೇವೆಗೆ ಒದಗಿಸುತ್ತಿದೆ. ಹೆಚ್ಚುವರಿ ರೈಲು ಸೇರ್ಪಡೆಯೊಂದಿಗೆ, ಸೋಮವಾರದಿಂದ ಶನಿವಾರದವರೆಗೆ ಹಳದಿ ಮಾರ್ಗದಲ್ಲಿ ಪೀಕ್ ಅವಧಿಯ ವೇಳೆಯಲ್ಲಿ 10 ನಿಮಿಷಗಳ ಬದಲಿಗೆ 9 ನಿಮಿಷಗಳ ಅಂತರದಲ್ಲಿ ಹಾಗೂ ನಾನ್-ಪೀಕ್ ಅವಧಿಯಲ್ಲಿ 18 ನಿಮಿಷಗಳ ಬದಲಿಗೆ 14 ನಿಮಿಷಗಳ ಅಂತರದಲ್ಲಿ ಮೆಟ್ರೋ ರೈಲುಗಳು ಸಂಚರಿಸಲಿವೆ. ಭಾನುವಾರದ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಎಲ್ಲಾ ದಿನಗಳಲ್ಲಿ ಆರ್.ವಿ. ರಸ್ತೆ ಹಾಗೂ ಬೊಮ್ಮಸಂದ್ರ ಟರ್ಮಿನಲ್‌ ನಿಲ್ದಾಣಗಳಿಂದ ಹೊರಡುವ ಮೊದಲ ಮತ್ತು ಕೊನೆಯ ರೈಲುಗಳ ಸಮಯದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಬಿಎಂಆರ್​​ಸಿಎಲ್​​ ತಿಳಿಸಿದೆ.

ಇದನ್ನೂ ಓದಿ: ಪಿಂಕ್ ಲೈನ್ ಮೆಟ್ರೋ; ಕೋತ್ತನೂರು ಡಿಪೋಗೆ ಮೂರನೇ ರೈಲು ಸೆಟ್ ಆಗಮನ

2025ರ ಆಗಸ್ಟ್ 10ರಂದು ಯೆಲ್ಲೋ ಲೈನ್​​ ಉದ್ಘಾಟನೆಯಾಗಿದ್ದು, ಆಗಸ್ಟ್​​ 11ರಿಂದ ವಾಣಿಜ್ಯ ಸಂಚಾರವನ್ನು ಈ ಮಾರ್ಗದಲ್ಲಿ ನಮ್ಮ ಮೆಟ್ರೋ ಆರಂಭಿಸಿತ್ತು. 19.15 ಕಿಮೀ ವಿಸ್ತೀರ್ಣವಿರುವ ಈ ಮಾರ್ಗದಲ್ಲಿ ಸದ್ಯ 7 ಮೆಟ್ರೋ ರೈಲುಗಳು ಮಾತ್ರ ಸಂಚಾರ ನಡೆಸುತ್ತಿದ್ದು, 8ನೇ ರೈಲಿನ ಸೇರ್ಪಡೆಯಿಂದ ರೈಲುಗಳ ಸಂಚಾರದ ನಡುವಿನ ಸಮಯ ಮಾತ್ರವಲ್ಲದೆ, ಪ್ರಯಾಣಿಕರ ದಟ್ಟಣೆಯೂ ಇಳಿಕೆಯಾಗುವ ನಿರೀಕ್ಷೆ ಇದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Leave a Reply

Your email address will not be published. Required fields are marked *