ಬೆಂಗಳೂರು, ಫೆ.4: ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ಮಹತ್ವದ ಘೋಷಣೆಯೊಂದನ್ನು ಮಾಡಿದೆ. ಬೆಂಗಳೂರಿನ ಜನರು ಫೆ.4 ಅಂದರೆ ಇಂದಿನಿಂದ ಫೆ.9ರವರೆಗೆ ವಿದ್ಯುತ್ ಕಡಿತ ಸಮಸ್ಯೆಯನ್ನು ಅನುಭವಿಸಬೇಕಾಗುತ್ತದೆ. ಫೆಬ್ರವರಿ 4 ರಿಂದ 9 ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ. ಪ್ರತಿದಿನ ನಾಲ್ಕು ಗಂಟೆಗಳ ಕಾಲ ವಿದ್ಯುತ್ ಕಡಿತಗೊಳ್ಳಲಿದ್ದು, ನಗರದ ಹಲವಾರು ಪ್ರದೇಶಗಳಲ್ಲಿ, ವಿಶೇಷವಾಗಿ ಹೆಬ್ಬಾಳ ಮತ್ತು ಉತ್ತರ ಬೆಂಗಳೂರಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಈ ಸಮಸ್ಯೆ ಉಂಟಾಗಲಿದೆ. ವರದಿಯ ಪ್ರಕಾರ, ನಗರದ ವಿದ್ಯುತ್ ಮೂಲಸೌಕರ್ಯವನ್ನು ಹೆಚ್ಚಿಸಲು ಈ ಕ್ರಮ ಅಗತ್ಯವಾಗಿದೆ ಎಂದು ಹೇಳಿದೆ. ಇದರಿಂದ ಮುಂದಿನ ದಿನಗಳಲ್ಲಿ ವಿದ್ಯುತ್ ಸಂಪರ್ಕದಿಂದ ಯಾವುದೇ ಸಮಸ್ಯೆಗಳು ಬರಬಾರದು ಎಂದ ಕ್ರಮವನ್ನು ತೆಗೆದುಕೊಳ್ಳಲಾಗಿದೆ.
ವಿದ್ಯುತ್ ಕಡಿತಕ್ಕೆ ಕಾರಣವೇನು?
66/11 ಕೆವಿ ಎಚ್‌ಬಿಆರ್ ವಿದ್ಯುತ್ ಸ್ಥಾವರದಲ್ಲಿ ತುರ್ತು ನಿರ್ವಹಣಾ ಕಾರ್ಯ ನಡೆಯುತ್ತಿರುವುದರಿಂದ ನಿಗದಿತ ವಿದ್ಯುತ್ ಕಡಿತ ಅಗತ್ಯವಾಗಿದೆ ಎಂದು ಬೆಸ್ಕಾಂ ತಿಳಿಸಿದೆ. ನಗರದ ವಿದ್ಯುತ್ ಮೂಲಸೌಕರ್ಯವನ್ನು ಹೆಚ್ಚಿಸಲು ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಿದ್ದಾರೆ. ಇದರಿಂದ ವಿದ್ಯುತ್ ಸರಬರಾಜಿನಲ್ಲಿ ದೀರ್ಘಕಾಲದ ವ್ಯತ್ಯಯಗಳಿಗೆ ಕಾರಣವಾಗುತ್ತದೆ, ಇದು ನಿವಾಸಿಗಳು, ಸಾರ್ವಜನಿಕ ಮತ್ತು ಖಾಸಗಿ ಕಚೇರಿಗಳು ಮತ್ತು ವಾಣಿಜ್ಯ ಸಂಸ್ಥೆಗಳ ಮೇಲೆ ಪರಿಣಾಮ ಬೀರುತ್ತದೆ.
ಯಾವೆಲ್ಲ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ:
ಕಾವಲ್‌ಬೈರಸಂದ್, ಎಲ್.ಆರ್. ಬಂಡೆ ಮುಖ್ಯ ರಸ್ತ, ಗಾಂಧಿನಗ, ಚಿನ್ನಣ್ಣ ಬಡಾವಣ, ಅಂಬೇಡ್ಕರ್ ಲೇಔಟ,, ಅನ್ವರ್ ಲೇಔಟ, ಕಾವೇರಿ ನಗ, ಅಂಬೇಡ್ಕರ್ ವೈದ್ಯಕೀಯ ಕಾಲೇಜು ಪ್ರದೇ, ಸುಲ್ತಾನ್ ಪಾಳ್, ರಂಕಾ ನಗ,ಕನಕ ನಗ, ಕೆಎಚ್‌ಬಿ ಮುಖ್ಯ ರಸ್ತೆ, ಭುವನೇಶ್ವರಿ ನಗ, ಡಿಜಿಎ ಹಳ್ಳ, ಕೆಜೆ ಹಳ್ಳಿ, ಕೆಜೆ ಕಾಲೋನ, ಆದರ್ಶ ನಗ, ವಿ. ನಾಗೇನಹಳ್ಳ, ಪೆರಿಯಾರ್ ನಗ, ಪೆರಿಯಾರ್ ವೃತ್, ಶಂಪು, ಕುಶಾಲ್ ನಗ, ಮೋದಿ ರಸ್ತೆ, ಮೋದಿ ಗಾರ್ಡನ, ದೊಡ್ಡಣ್ಣ ನಗ, ಮುನಿವೀರಪ್ಪ ಬಡಾವಣ, ಸಕ್ಕರೆ ಮಂಡ, ಉಪ್ಪು ಮಂಡಿ, ಮುನೇಶ್ವರ ನಗರ.
ಹೆಚ್ಚುವರಿಯಾಗಿ, ಐದು ದಿನಗಳ ನಿರ್ವಹಣಾ ಅವಧಿಯಲ್ಲಿ ದಿವ್ಯ ಶಾಂತಿ, ಗೋವಿಂದಪುರ, ಕಾರ್ಲೆ, ಬೃಂದಾವನ ನಗರ, ಟೈಟಾನ್ ಗ್ಯಾರೇಜ್, ಭೈರವಿ ಅಪಾರ್ಟ್‌ಮೆಂಟ್‌ಗಳು, ಹೆಗ್ಗಡೆ ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಇದನ್ನೂ ಓದಿ: ಕೆಲಸ ಕಳೆದುಕೊಳ್ಳುತ್ತಿರುವ ಬೆಂಗಳೂರಿನ ಯುವಕರು: 100 ಕೆಲಸಕ್ಕೆ ಅರ್ಜಿ, ಎಲ್ಲವೂ ತಿರಸ್ಕಾರ, ಟೆಕ್ಕಿ ಪೋಸ್ಟ್ ವೈರಲ್
ಈ ಕ್ರಮಗಳನ್ನು ಸಾರ್ವಜನಿಕರು ಅನುಸರಿಸಿ:
ಮೊಬೈಲ್ ಫೋನ್‌ಗಳು, ಲ್ಯಾಪ್‌ಟಾಪ್‌ಗಳು ಮತ್ತು ಪವರ್ ಬ್ಯಾಂಕ್‌ಗಳು ಸೇರಿದಂತೆ ಎಲ್ಲಾ ಎಲೆಕ್ಟ್ರಾನಿಕ್ ಸಾಧನಗಳನ್ನು ಮುಂಚಿತವಾಗಿ ಚಾರ್ಜ್ ಮಾಡಿ. ಲಭ್ಯವಿರುವಲ್ಲಿ ವಿದ್ಯುತ್ ಬ್ಯಾಕಪ್ ವ್ಯವಸ್ಥೆಗಳನ್ನು ಬಳಸಿಕೊಳ್ಳಿ. ಪ್ರತಿದಿನ ನಿರ್ವಹಣಾ ಕಾರ್ಯಗಳು ಪೂರ್ಣಗೊಂಡ ನಂತರ ವಿದ್ಯುತ್ ಸಂಪರ್ಕವನ್ನು ನೀಡಲಾಗುವುದು. ಇದಲ್ಲದೆ, ನಿವಾಸಿಗಳು ತಮ್ಮ ದೈನಂದಿನ ಚಟುವಟಿಕೆಗಳಿಗೆ ತೊಂದರೆ ಆಗದಂತೆ ಮುನ್ನೆಚ್ಚರಿಕೆ ಕ್ರಮವನ್ನು ತೆಗೆದುಕೊಳ್ಳವಂತೆ ತಿಳಿಸಲಾಗಿದೆ.
ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
