ಬೆಂಗಳೂರು, ಮೇ 09: ನಾಳೆ (ಮೇ 10) ಬೆಂಗಳೂರಿಗೆ ಪ್ರಧಾನ ಮಂತ್ರಿಗಳು ಆಗಮಿಸುತ್ತಿರುವ ಹಿನ್ನೆಲೆ ನರೇಂದ್ರ ಮೋದಿಯವರು ಭಾಗಿಯಾಗಲಿರುವ ಕಾರ್ಯಕ್ರಮದ ಸ್ಥಳದಲ್ಲಿ ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿದೆ. ಹೆಚ್ಎಎಲ್ ಗೇಟ್ ನಂ.30ರ ಮುಂಭಾಗ ನಾಳೆ ಮುಂಜಾನೆ 5ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಸಮಾರಂಭ ನಡೆಯಲಿದ್ದು, ಸಾರ್ವಜನಿಕರ ಸುಗಮ ಸಂಚಾರದ ಹಿತದೃಷ್ಠಿಯಿಂದ ಕೆಲವು ಮಾರ್ಪಾಡು ಮಾಡಿರೋದಾಗಿ ಬೆಂಗಳೂರು ಸಂಚಾರ ಪೊಲೀಸರು ಮಾಹಿತಿ ನೀಡಿದ್ದಾರೆ.
ಸಂಚಾರ ನಿರ್ಬಂಧಿತ ಪ್ರದೇಶಗಳು
ಸಂಚಾರ ಸಲಹೆ /Traffic Advisory” pic.twitter.com/amj0UcucFu
— DCP SOUTH TRAFFIC (@DCPSouthTrBCP) May 9, 2026
- ಹೆಚ್.ಎ.ಎಲ್ ವಿಮಾನ ನಿಲ್ದಾಣ ಎಕ್ಸಿಟ್ ರಸ್ತೆಯಲ್ಲಿ ಹಳೆ ವಿಮಾನ ನಿಲ್ದಾಣ ರಸ್ತೆಯಿಂದ ಡಿ.ಜಿ.ಸಿ.ಎ ಕಚೇರಿವರೆಗೆ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿರುತ್ತದೆ.(ಎರಡೂ ಬದಿಯಲ್ಲಿ)
- ಹೆಚ್.ಎ.ಎಲ್ ವಿಮಾನ ನಿಲ್ದಾಣ ಗೇಟ್ ನಂ.30 ರಸ್ತೆಯಲ್ಲಿ ಅಂಬ್ರೆಲಾ ಜಂಕ್ಷನ್‌ನಿಂದ ಗೇಟ್ ನಂ.30ರ ವರೆಗೆ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿರುತ್ತದೆ.(ಎರಡೂ ಬದಿಯಲ್ಲಿ)
ಇದನ್ನೂ ಓದಿ: ಬೆಂಗಳೂರಲ್ಲಿ ಅತಿ ಉದ್ದದ ಮೆಟ್ರೋ ಓಪನ್ ಮಾಡಲು BMRCL ಸಿದ್ದತೆ; ಟ್ರಾಫಿಕ್ ಸಮಸ್ಯೆಗೆ ಸಿಗಲಿದೆ ಮುಕ್ತಿ
ವಾಹನ ನಿಲುಗಡೆ ನಿರ್ಬಂಧಿಸಿರುವ ರಸ್ತೆಗಳು
- ಹಳೆ ವಿಮಾನ ನಿಲ್ದಾಣ ರಸ್ತೆಯಲ್ಲಿ ಎಸ್.ಡಿ ರಸ್ತೆ ಜಂಕ್ಷನ್‌ನಿಂದ ಟ್ರಿನಿಟಿ ಜಂಕ್ಷನ್‌ವರೆಗೆ
- HAL ವಿಮಾನ ನಿಲ್ದಾಣ ಗೇಟ್ ನಂ. 30 ರಸ್ತೆಯಲ್ಲಿ ಅಂಬ್ರೆಲಾ ಜಂಕ್ಷನ್‌ನಿಂದ ಗೇಟ್ ನಂ. 30ರ ವರೆಗೆ
- HAL ವಿಮಾನ ನಿಲ್ದಾಣ ಎಕ್ಸಿಟ್ ರಸ್ತೆಯಲ್ಲಿ ಹಳೆ ವಿಮಾನ ನಿಲ್ದಾಣ ರಸ್ತೆಯಿಂದ DGCA ಕಚೇರಿವರೆಗೆ
ಪಾರ್ಕಿಂಗ್ ಸ್ಥಳಗಳು
- HAL ಟ್ರಾನ್ಸ್‌ಪೋರ್ಟ್ ಡಿಪಾರ್ಟ್‌ಮೆಂಟ್ ಪಾರ್ಕಿಂಗ್ (ಎಸ್.ಡಿ ರಸ್ತೆ ಜಂಕ್ಷನ್).
- ಸಾರ್ವಜನಿಕರಿಗೆ- ಸರ್ ಎಸ್.ಎಂ.ವಿ, ಕಾಲೇಜು ಮೈದಾನ, HAL ಬಸ್ ಯಾರ್ಡ್
ಬೆಳಗ್ಗೆ 9 ರಿಂದ ಮಧ್ಯಾಹ್ನ 3ರೆಗೆ ನೈಸ್ ರಸ್ತೆಯಲ್ಲಿಯೂ ಸಂಚಾರ ನಿರ್ಬಂಧ ವಿಧಿಸಲಾಗಿದ್ದು, ಈ ಮಾರ್ಗವಾಗಿ ಬರುವವರಿಗೆ ಪರ್ಯಾಯ ರಸ್ತೆಗಳನ್ನು ಬಳಸುವಂತೆ ಬೆಂಗಳೂರು ನಗರ ಸಂಚಾರ ಪೊಲೀಸರು ಸೂಚನೆ ನೀಡಿದ್ದಾರೆ.
ಪರ್ಯಾಯ ಮಾರ್ಗ
ತುಮಕೂರು ರಸ್ತೆಯಿಂದ ಕನಕಪುರ ರಸ್ತೆ: ತುಮಕೂರು ರಸ್ತೆಯಿಂದ ನೈಸ್ ರೋಡ್ ಮೂಲಕ ಕನಕಪುರ ರಸ್ತೆ ಕಡೆ ತೆರಳುವ ವಾಹನ ಸವಾರರು ಸಿಎಂಟಿಐ ಜಂಕ್ಷನ್ ಬಳಿ ಬಲ ತಿರುವು ಪಡೆದು ರಾಜ್ ಕುಮಾರ್ ಪುಣ್ಯಭೂಮಿ ರಸ್ತೆ ಮೂಲಕ ತೆರಳಬೇಕು. ತುಮಕೂರು ರಸ್ತೆಯಲ್ಲಿ ನಗರದ ಒಳಭಾಗದಿಂದ ಬಂದು ನೈಸ್ ರೋಡ್ ಮೂಲಕ ಕನಕಪುರ ರಸ್ತೆ ಕಡೆ ತೆರಳುವವರಿಗೂ ರಾಜ್ ಕುಮಾರ್ ಪುಣ್ಯಭೂಮಿ ರಸ್ತೆ ಮೂಲಕವೇ ತೆರಳಬೇಕಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
