ಸಂಗೀತಕ್ಕೆ ಭಾಷೆಯ ಮಿತಿ ಇಲ್ಲ. ಪರಭಾಷೆಯ ಅನೇಕ ಗಾಯಕರು ಕನ್ನಡ ಹಾಡನ್ನು ಹಾಡಿದ್ದು ಇದೆ. ಅದೇ ರೀತಿ ಅನೇಕ ಕನ್ನಡದ ಕಲಾವಿದರು ಪರಭಾಷೆಯಲ್ಲಿ ಮಿಂಚಿದ್ದಾರೆ. ಈಗ ಜೀ ತೆಲುಗು ವಾಹಿನಿಯವರು ಪ್ರತಿಭೆಗಳನ್ನು ಅರಸಿ ಬೆಂಗಳೂರಿಗೆ ಬರುತ್ತಿದ್ದಾರೆ. ‘ಸರಿಗಮಪ’ ತೆಲುಗು ಆಡಿಷನ್ಸ್ ಬೆಂಗಳೂರಿನಲ್ಲ ನಡೆಯಲಿದೆ. ಈ ಬಾರಿ ‘ಸರಿಗಮ ಪ – ನೆಕ್ಸ್ಟ್ ಇಂಡಿಯಾಸ್ ಸಿಂಗಿಂಗ್ ಸೆನ್ಸೇಷನ್’ ಎಂಬ ಹೊಸ ಶೀರ್ಷಿಕೆಯೊಂದಿಗೆ ಕಾರ್ಯಕ್ರಮ ಮೂಡಿಬರಲಿದ್ದು, ದೇಶದ ವಿವಿಧೆಡೆ ಆಡಿಷನ್‌ಗಳು ಆರಂಭವಾಗಿವೆ. ತೆಲುಗು ರಾಜ್ಯಗಳ ಜೊತೆಗೆ ದೇಶದ ಇತರೆ ಭಾಗಗಳಲ್ಲಿರುವ ಪ್ರತಿಭಾವಂತ ಗಾಯಕರನ್ನು ಗುರುತಿಸಲು ಈ ವೇದಿಕೆ ಸಹಕಾರಿ ಆಗಲಿದೆ.
ಬೆಂಗಳೂರಿನಲ್ಲಿಯೂ ಆನ್-ಗ್ರೌಂಡ್ ಆಡಿಷನ್ ಹಮ್ಮಿಕೊಳ್ಳಲಾಗಿದೆ. ಜೂನ್ 28ರ ಭಾನುವಾರದಂದು ಅಬ್ಬಯ್ಯ ನಾಯ್ಡು ಸ್ಟುಡಿಯೋದಲ್ಲಿ (ಮಧು ಆರ್ಟ್ ಸ್ಟುಡಿಯೋ) ಆಡಿಷನ್ ನಡೆಯಲಿದೆ. ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಆಡಿಷನ್ ನಡೆಯಲಿದೆ. ಈ ಆಡಿಷನ್ ಅಲ್ಲಿ ಪಾಲ್ಗೊಳ್ಳುವವರಿಗೆ ಕೆಲವು ಷರತ್ತುಗಳು ಕೂಡ ಇವೆ.
ಈ ಗಾಯನ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ವಯಸ್ಸಿನ ಮಿತಿ ಇದೆ. 18 ರಿಂದ 35 ವರ್ಷದೊಳಗಿನವರು ಮಾತ್ರ ಇದರಲ್ಲಿ ಭಾಗಿ ಆಗಬಹುದು. ಸಂಗೀತ ಕ್ಷೇತ್ರದಲ್ಲಿ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಬಯಸುವ ಆಸಕ್ತ ಗಾಯಕರು ನಿಗದಿಪಡಿಸಿದ ಸಮಯಕ್ಕೆ ಸರಿಯಾಗಿ ಆಡಿಷನ್ ಸ್ಥಳಕ್ಕೆ ತಲುಪಿ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬಹುದಾಗಿದೆ. ಹೆಚ್ಚಿನ ವಿವರಗಳಿಗಾಗಿ ವೀಕ್ಷಕರು ಜೀ ತೆಲುಗು ವಾಹಿನಿಯ ಅಧಿಕೃತ ಸಾಮಾಜಿಕ ಜಾಲತಾಣಗಳನ್ನು ಗಮನಿಸಬಹುದು.
ಇದನ್ನೂ ಓದಿ: ಜೀ ಕನ್ನಡದಲ್ಲಿ ಬರ್ತಿದೆ ‘ಸರಿಗಮಪ ಲಿಟ್ಲ್ ಚಾಂಪ್ಸ್’; ಈ ಬಾರಿಯ ವಿಶೇಷತೆ ಏನು?
ಬೆಂಗಳೂರಿನಲ್ಲಿ ತೆಲುಗು ಭಾಷಿಕರು ಕೂಡ ಇದ್ದಾರೆ. ಅನೇಕರಿಗೆ ತೆಲುಗು ಹಾಗೂ ಕನ್ನಡ ಎರಡನ್ನೂ ಮಾತನಾಡುವವರು ಇದ್ದಾರೆ. ಕೆಲವರು ಕನ್ನಡ ಸರಿಗಮಪ ಶೋ ಆಡಿಷನ್ ಕೊಟ್ಟು ಅವಕಾಶ ಪಡೆದುಕೊಳ್ಳಲು ವಿಫಲರಾಗಿರಬಹುದು. ಅಂಥವರಿಗೆ ‘ಸರಿಗಮಪ ತೆಲುಗು’ ವೇದಿಕೆ ಒಳ್ಳೆಯ ವೇದಿಕೆ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
