ಬೆಂಗಳೂರು, ಏಪ್ರಿಲ್ 28: ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ಬೆಂಗಳೂರಿನಲ್ಲಿ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಡಿಜಿ ಕಚೇರಿ ಮೈದಾನದಲ್ಲಿ ಮಾಕ್ಡ್ರಿಲ್ ನಡೆಸಲಾಗಿದೆ. ಅಣಕು ಪ್ರದರ್ಶನದಲ್ಲಿ ಅಗ್ನಿಶಾಮಕ ದಳ, ಗೃಹರಕ್ಷಕ ದಳ, ಸಿವಿಲ್ ಡಿಫೆನ್ಸ್ ಭಾಗಿಯಾಗಿದ್ದವು. ತುರ್ತು ಸಂದರ್ಭ ಅಥವಾ ಏರ್ಸ್ಟ್ರೈಕ್ ಆದಾಗ ಪರಿಸ್ಥಿತಿ ಎದುರಿಸಲು ಯಾವ ರೀತಿ ಸನ್ನದ್ಧರಾಗಬೇಕೆಂದು ಮಾಹಿತಿ ನೀಡಲಾಯಿತು. ಏರ್ಸ್ಟ್ರೈಕ್ ಸಂದರ್ಭದಲ್ಲಿ ಸೈರನ್ ಮೊಳಗಿದ ತಕ್ಷಣ ಮತ್ತು ರೆಡ್ಅಲರ್ಟ್ ಸೈರನ್ ಮೊಳಗಿದ ಕೂಡಲೇ ಸುರಕ್ಷಿತ ಜಾಗಕ್ಕೆ ಜನರನ್ನು ಹೇಗೆ ಸ್ಥಳಾಂತರ ಮಾಡಬೇಕೆಂದು ತಿಳಿಸಿಕೊಡಲಾಯಿತು.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
