ಬೆಂಗಳೂರಿನಲ್ಲಿ ಮುಂದುವರಿದ ಆಹಾರ ಇಲಾಖೆ ಅಧಿಕಾರಿಗಳ ದಾಳಿ: ಯುಬಿ ಸಿಟಿಯಲ್ಲಿ ಕಾರ್ಯಚರಣೆ – Kannada News | Bengaluru Food Department Raids Hotels: Mega Weekend Drive for Food Safety

ಆಹಾರ ಇಲಾಖೆ ಅಧಿಕಾರಿಗಳ ದಾಳಿImage Credit source: tv9 kannada

ಬೆಂಗಳೂರು, ಆಗಸ್ಟ್​​ 09: ರಾಜಧಾನಿ ಬೆಂಗಳೂರಿನಲ್ಲಿ (Bangaluru) ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಇಲಾಖೆ ಅಧಿಕಾರಿಗಳು ಕಳೆದ ಮೂರು ದಿನಗಳಿಂದ ನಡೆಸುತ್ತಿರುವ ಮೆಗಾ ಕಾರ್ಯಾಚರಣೆ ಇಂದು ಕೂಡ ಮುಂದುವರೆದಿದೆ. ವೀಕೆಂಡ್ ಹಿನ್ನೆಲೆ ಐಷಾರಾಮಿ ಹೋಟೆಲ್‌ಗಳು, ಸ್ಟಾರ್ ಹೋಟೆಲ್‌ಗಳು ಹಾಗೂ ಪ್ರಸಿದ್ಧ ಮಾಲ್‌ಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿ ಜನರಿಗೆ ಉತ್ತಮ ಆಹಾರ ನೀಡುತ್ತಿದ್ದಾರೆ ಎಂದು ಪರಿಶೀಲನೆ ಮಾಡಿದರು.

ಮುಂದುವರಿದ ಆಹಾರ ಇಲಾಖೆ ಅಧಿಕಾರಿಗಳ ದಾಳಿ

ಆಹಾರ ಸುರಕ್ಷತೆ ಇಲಾಖೆ ಅಧಿಕಾರಿಗಳು ನಗರದ ಐಷಾರಾಮಿ ಹೋಟೆಲ್‌ಗಳ ವಿರುದ್ಧ ಸಮರ ಸಾರಿದ್ದಾರೆ. 3 ಸ್ಟಾರ್‌, 5 ಸ್ಟಾರ್‌, 7 ಸ್ಟಾರ್ ಅಂತಾ ಹೋಟೆಲ್‌ಗಳ ಕಿಚನ್​ ಜಾಲಾಡುತ್ತಿದ್ದಾರೆ. ಇಂದು ಕೂಡ ದಾಳಿ ಮುಂದುವರೆದಿದೆ.

ವೀಕೆಂಡ್​ನಲ್ಲೂ ಮೆಗಾ ಆಪರೇಷನ್

ವೀಕೆಂಡ್ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಹೋಟೆಲ್‌ಗಳಿಗೆ ಭೇಟಿ ನೀಡುವ ಕಾರಣ, ಅವರಿಗೆ ಗುಣಮಟ್ಟದ ಹಾಗೂ ಸುರಕ್ಷಿತ ಆಹಾರ ಪೂರೈಕೆಯಾಗುತ್ತಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಆಹಾರ ಸುರಕ್ಷತಾ ಇಲಾಖೆ ಆಯುಕ್ತ ಶ್ರೀನಿವಾಸ್​​​ ನೇತೃತ್ವದಲ್ಲಿ ರಾತ್ರಿ ಹೊತ್ತಲ್ಲಿ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಈ ವೇಳೆ ಯುಬಿ ಸಿಟಿ, ಬ್ರಿಗೇಡ್ ರೋಡ್ ಹಾಗೂ ಎಂ.ಜಿ. ರೋಡ್‌ನಲ್ಲಿರುವ ಪ್ರಮುಖ ಹೋಟೆಲ್‌ಗಳ ಮೇಲೆ ಹತ್ತಕ್ಕೂ ಹೆಚ್ಚು ಅಧಿಕಾರಿಗಳ ತಂಡ ದಾಳಿ ನಡೆಸಿ ತಪಾಸಣೆ ನಡೆಸಿದರು.

ತಪ್ಪು ಮಾಡಿದರೆ ಕ್ಷಮಿಸುವುದಿಲ್ಲ ಎಂದ ಸಚಿವ ಯು.ಟಿ.ಖಾದರ್

ಇನ್ನು ಬೆಂಗಳೂರಿನ ಹೋಟೆಲ್​ಗಳ ಮೇಲೆ ಆರೋಗ್ಯ ಇಲಾಖೆ ದಾಳಿ ವಿಚಾರವಾಗಿ ಮಾಧ್ಯಮದವರೊಂದಿಗೆ ಮಾತನಾಡಿರುವ ಆರೋಗ್ಯ ಸಚಿವ ಯು.ಟಿ.ಖಾದರ್, ‘ತಪಾಸಣೆ ನಮ್ಮ ಜವಾಬ್ದಾರಿ, ಅದು ಮುಂದುವರಿಯುತ್ತದೆ. ಬಹಳಷ್ಟು ಕಡೆ ದಾಳಿ ಮಾಡಿ ಸ್ಯಾಂಪಲ್ಸ್ ಪಡೆಯಲಾಗಿದೆ. ಯಾವುದೇ ಪ್ರದೇಶಕ್ಕೆ ಈ ದಾಳಿಯನ್ನು ಸೀಮಿತ ಮಾಡಲ್ಲ’ ಎಂದರು.

ಇದನ್ನೂ ಓದಿ: ಪಂಚತಾರಾ ಹೋಟೆಲ್ ಸ್ಥಿತಿ ಬಯಲು ಮಾಡಿದ್ದೇವೆ: ತಿನ್ನೋದು ಬಿಡೋದು ಜನರಿಗೆ ಬಿಟ್ಟಿದ್ದು ಎಂದ ಸಚಿವ

‘ಕಿಡ್ನಿ ಸಮಸ್ಯೆ, ಕ್ಯಾನ್ಸರ್​ನಂತಹ ಪ್ರಕರಣಗಳೆಲ್ಲವೂ ಬರ್ತಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳುವುದಷ್ಟೇ ಉದ್ದೇಶವಲ್ಲ. ಪಂಚತಾರಾ ಹೋಟೆಲ್​ಗಳು ಸರಿಪಡಿಸಿಕೊಂಡು ಹೋಗಬೇಕು. ತಪ್ಪು ಮಾಡಿದರೆ ಕ್ಷಮಿಸುವುದಿಲ್ಲ’ ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಖಡಕ್​ ಎಚ್ಚರಿಕೆ ನೀಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Leave a Reply

Your email address will not be published. Required fields are marked *