ಬೆಂಗಳೂರಿನಲ್ಲಿ ‘ಲವ್ ಜಿಹಾದ್’ ಆರೋಪ: ಮದುವೆಗೆ ನಿರಾಕರಿಸಿದ ಹಿಂದೂ ಯುವತಿಯ ಮೇಲೆ ಮನಬಂದಂತೆ ಹಲ್ಲೆ ಮಾಡಿದ ಜುಹೇಬ್ – Kannada News | Karnataka Love Jihad Concerns: Actress Assaulted in Bengaluru; Juheb Booked

ಬೆಂಗಳೂರು, ಏ,16: ರಾಜ್ಯದಲ್ಲಿ ಲವ್​​ ಜಿಹಾದ್ ಪ್ರಕರಣಗಳು ಹೆಚ್ಚಾಗುತ್ತಿದೆ. ಈಗಾಗಲೇ ಹಲವು ಕಡೆ ಲವ್​​​​​ ಜಿಹಾದ್​​​ ಕೃತ್ಯಕ್ಕೆ ಹಿಂದೂ ಹುಡುಗಿಯರು ಬಲಿಯಾಗಿರುವ ಘಟನೆಗಳು ಆಗ್ಗಾಗೆ ಬೆಳಕಿಗೆ ಬರುತ್ತಿದೆ. ಇತ್ತಿಚೆಗೆ ಹುಬ್ಬಳ್ಳಿಯಲ್ಲಿ ಜಿಮ್​​ ಟ್ರೈನರ್​​​​ ಹಿಂದೂ ಹುಡುಗಿಯ ವಿಡಿಯೋ ಮಾಡಿ ಮತಾಂತರ ಆಗುವಂತೆ ಒತ್ತಾಯ ಮಾಡಿದ್ದಾನೆ ಎಂಬೆಲ್ಲ ಆರೋಪಗಳು ಕೇಳಿ ಬಂದಿತ್ತು. ಇದೀಗ ಬೆಂಗಳೂರಿನಲ್ಲೂ ಲವ್​​ ಜಿಹಾದ್​​​ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಮಾಡೆಲ್​ ಹಾಗೂ ನಟಿಯೊಬ್ಬರು ಸೋಶಿಯಲ್​ ಮೀಡಿಯಾದಲ್ಲಿ ವಿಡಿಯೋವೊಂದನ್ನು ವೈರಲ್​ ಆಗಿದೆ. ಈ ವಿಡಿಯೋವನ್ನು @KarnatakaPortfolio ಎಂಬ ಎಕ್ಸ್​ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ರಾಜಧಾನಿಯ ಫ್ರೇಜರ್ ಟೌನ್‌ನಲ್ಲಿ ಈ ಪ್ರಕರಣ ನಡೆದಿದೆ ಎಂದು ಹೇಳಲಾಗಿದೆ.

ಮದುವೆಯಾಗುವಂತೆ ಒತ್ತಾಯಿಸಿ, ನಿರಾಕರಿಸಿದ ಹಿಂದೂ ಯುವತಿಯ ಮೇಲೆ ಜುಹೇಬ್ ಎಂಬ ಯುವಕ ಮನಬಂದಂತೆ ಹಲ್ಲೆ ಮಾಡಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಈ ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ತೀವ್ರ ಆಕ್ರೋಶ ವ್ಯಕ್ತವಾಗಿದೆ. ಸಂತ್ರಸ್ತ ಯುವತಿ ವೃತ್ತಿಯಲ್ಲಿ ಮಾಡೆಲ್ ಮತ್ತು ನಟಿಯಾಗಿದ್ದು, ಮಾಡೆಲಿಂಗ್ ಇಂಡಸ್ಟ್ರಿಯಲ್ಲಿರುವ ಜುಹೇಬ್ ಎಂಬಾತನ ಪರಿಚಯವಾಗಿತ್ತು. ಆರಂಭದಲ್ಲಿ ಕೆಲಸದ ನಿಮಿತ್ತ ಭೇಟಿಯಾಗಿದ್ದ ಇವರು ನಂತರ ಸ್ನೇಹಿತರಾಗಿದ್ದರು.

ಇಲ್ಲಿದೆ ನೋಡಿ ವಿಡಿಯೋ:

2024 ರಿಂದ ಜುಹೇಬ್ ಯುವತಿಯ ಹಿಂದೆ ಬಿದ್ದಿದ್ದು, ತನ್ನನ್ನು ಮದುವೆಯಾಗುವಂತೆ ಪೀಡಿಸುತ್ತಿದ್ದ. ಆದರೆ ಯುವತಿ ಆತನನ್ನು ನಿರಾಕರಿಸಿದ್ದರು. ಇದರಿಂದ ಆಕ್ರೋಶಗೊಂಡ ಆರೋಪಿಯು, “ನೀನು ನನ್ನನ್ನು ಮದುವೆಯಾಗದಿದ್ದರೆ ನಿನ್ನನ್ನು ಕೊಲೆ ಮಾಡುತ್ತೇನೆ” ಎಂದು ಬೆದರಿಕೆ ಹಾಕಲು ಪ್ರಾರಂಭಿಸಿದ್ದ. ಯುವತಿಯು ಫ್ರೇಜರ್ ಟೌನ್‌ನಲ್ಲಿದ್ದಾಗ ಆರೋಪಿಯು ಆಕೆಯ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದ್ದಾನೆ. ಯುವತಿಯ ಮುಖ ಮತ್ತು ತಲೆಯ ಹಿಂಭಾಗಕ್ಕೆ ಗಂಭೀರ ಗಾಯಗಳಾಗಿದ್ದು, ವಿಡಿಯೋದಲ್ಲಿ ಯುವತಿ ತನ್ನ ಗಾಯಗಳನ್ನು ತೋರಿಸಿದ್ದಾರೆ.

ಇದನ್ನೂ ಓದಿ: ಅನ್ಯಕೋಮಿನ ಯುವಕನನ್ನ ಪ್ರೀತಿಸುತ್ತಿದ್ದ ಯುವತಿ ಆತ್ಮಹತ್ಯೆ, ಲವ್ ಜಿಹಾದ್ ಆರೋಪ

ಜುಹೇಬ್ ತನ್ನ ವಾಟ್ಸಾಪ್ ಸಂದೇಶಗಳಲ್ಲಿ “ನಾನು ಆಕೆಯನ್ನು ಸಾಯಿಸುತ್ತೇನೆ,” “ಯುವತಿ ಸಾಯಲೇಬೇಕು,” ಎಂದು ಹಸಿಬಿಸಿಯಾಗಿ ಸಂದೇಶ ಕಳುಹಿಸಿದ್ದಾನೆ. ಅಲ್ಲದೆ, “ನನಗೆ ಹುಡುಗಿಯರ ಕೊರತೆಯಿಲ್ಲ, ಹಣದ ಕೊರತೆಯಿಲ್ಲ” ಎಂದು ಅಹಂಕಾರ ಮಾತುಗಳನ್ನು ಆಡಿದ್ದಾನೆ ಎಂದು ಆರೋಪಿಸಲಾಗಿದೆ.ಸಂತ್ರಸ್ತ ಯುವತಿಯು ಧೈರ್ಯವಾಗಿ ಫ್ರೇಜರ್ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣದ ಗಂಭೀರತೆಯನ್ನು ಪರಿಗಣಿಸಿದ ಪೊಲೀಸರು ಆರೋಪಿ ಜುಹೇಬ್‌ನನ್ನು ಈಗಾಗಲೇ ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *