Headlines

ಬೆಂಗಳೂರಿನ Oben Rorr Evo ಎಲೆಕ್ಟ್ರಿಕ್ ಬೈಕ್ ಸೂಪರ್ ಹಿಟ್; ಬೆಲೆ 1.25 ಲಕ್ಷ, 180 ಕಿಮೀ ರೇಂಜ್; ಬಿಸಿ ದೋಸೆಯಂತೆ ವಾಹನಗಳ ಮಾರಾಟ – Kannada News | Oben Electric’s Oben Rorr Evo bike starts deliveries in Bengaluru, after getting over 25,000 bookings

ಬೆಂಗಳೂರು, ಜುಲೈ 9: ಸಿಲಿಕಾನ್ ಸಿಟಿ ಮೂಲದ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಿಕಾ ಕಂಪನಿಯಾದ ಓಬೆನ್ ಎಲೆಕ್ಟ್ರಿಕ್, ತನ್ನ ಇತ್ತೀಚಿನ ಪ್ರೀಮಿಯಂ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಮಾಡಲ್ ಆದ ‘ಓಬೆನ್ ರೋರ್ ಇವೊ’ (Oben Rorr Evo) ವಿತರಣೆಯನ್ನು (Deliveries) ತನ್ನ ತವರು ನಗರಿ ಬೆಂಗಳೂರಿನಲ್ಲಿ ಅಧಿಕೃತವಾಗಿ ಪ್ರಾರಂಭಿಸಿದೆ. ಮಾರುಕಟ್ಟೆಗೆ ಬಂದ ಕೆಲವೇ ದಿನಗಳಲ್ಲಿ ಈ ಬೈಕ್ ಗ್ರಾಹಕರಿಂದ ಭರ್ಜರಿ ಪ್ರತಿಕ್ರಿಯೆ ಪಡೆದಿದ್ದು, ದೇಶಾದ್ಯಂತ ಈಗಾಗಲೇ 25,000ಕ್ಕೂ ಹೆಚ್ಚು ಬುಕ್ಕಿಂಗ್‌ಗಳನ್ನು ದಾಖಲಿಸಿದೆ.

‘ಓಬೆನ್ ರೋರ್ ಇವೊ’ ಬೈಕ್‌ನ ಪ್ರಮುಖ ಫೀಚರ್ಸ್

ಬಲಿಷ್ಠ ಬ್ಯಾಟರಿ ತಂತ್ರಜ್ಞಾನ: ಈ ಬೈಕ್‌ನಲ್ಲಿ ಸುರಕ್ಷಿತ ಮತ್ತು ದೀರ್ಘಕಾಲ ಬಾಳಿಕೆ ಬರುವ LFP (Lithium Iron Phosphate) ಬ್ಯಾಟರಿ ತಂತ್ರಜ್ಞಾನವನ್ನು ಬಳಸಲಾಗಿದೆ. ಇದು ಭಾರತದ ಹವಾಮಾನಕ್ಕೆ ಅತ್ಯಂತ ಸೂಕ್ತವಾಗಿದೆ.

ಉತ್ತಮ ರೇಂಜ್ (Range): ಒಂದು ಬಾರಿ ಪೂರ್ತಿ ಚಾರ್ಜ್ ಮಾಡಿದರೆ ಈ ಎಲೆಕ್ಟ್ರಿಕ್ ಬೈಕ್ ಸುಮಾರು 175 ಕಿಲೋಮೀಟರ್ (IDC ರೇಂಜ್) ಚಲಿಸಬಲ್ಲದು ಎಂದು ಕಂಪನಿ ಹೇಳಿಕೊಂಡಿದೆ. ನಿತ್ಯದ ನಗರ ಸಂಚಾರಕ್ಕೆ ಇದು ಅತ್ಯುತ್ತಮ ಆಯ್ಕೆಯಾಗಿದೆ.

ವೇಗದ ಪಿಕಪ್: ಕೇವಲ 3.3 ಸೆಕೆಂಡುಗಳಲ್ಲಿ ಈ ಬೈಕ್ 0 ಯಿಂದ 40 ಕಿಮೀ ವೇಗವನ್ನು ತಲುಪಬಲ್ಲ ಸಾಮರ್ಥ್ಯ ಹೊಂದಿದೆ ಮತ್ತು ಇದರ ಗರಿಷ್ಠ ವೇಗ ಗಂಟೆಗೆ 100 ಕಿಮೀ ಆಗಿದೆ.

ಫಾಸ್ಟ್ ಚಾರ್ಜಿಂಗ್: ಕೇವಲ 45 ನಿಮಿಷಗಳಲ್ಲಿ ಬೈಕ್‌ನ ಬ್ಯಾಟರಿಯನ್ನು ಶೇ. 80 ರಷ್ಟು ಚಾರ್ಜ್ ಮಾಡಬಹುದಾದ ಸೂಪರ್ ಫಾಸ್ಟ್ ಚಾರ್ಜಿಂಗ್ ವ್ಯವಸ್ಥೆಯನ್ನು ಇದು ಬೆಂಬಲಿಸುತ್ತದೆ.

ಕಳ್ಳತನ ನಿರೋಧ: ಕಳ್ಳತನ ಅಸಾಧ್ಯವಾಗುವ ರೀತಿಯಲ್ಲಿ ಅಡ್ವಾನ್ಸ್ಡ್ ಜಿಪಿಎಸ್ ಟ್ರ್ಯಾಕಿಂಗ್, ರಿಮೋಟ್ ಇಮೊಬಿಲೈಸೇಶನ್ ವ್ಯವಸ್ಥೆ ಈ ವಾಹನದಲ್ಲಿದೆ.

ಬೆಂಗಳೂರಿನಿಂದಲೇ ವಾಹನ ವಿತರಣೆ ಆರಂಭ

ಕಂಪನಿಯು ತನ್ನ ಮೊದಲ ಹಂತದ ವಿತರಣೆಯನ್ನು ಬೆಂಗಳೂರಿನ ಎಚ್‌ಎಸ್‌ಆರ್ ಲೇಔಟ್ (HSR Layout) ನಲ್ಲಿರುವ ತನ್ನ ಪ್ರಮುಖ ಶೋರೂಮ್ ಮೂಲಕ ಆರಂಭಿಸಿದೆ. ಮುಂಬರುವ ವಾರಗಳಲ್ಲಿ ಮುಂಬೈ, ಪುಣೆ, ದೆಹಲಿ ಸೇರಿದಂತೆ ದೇಶದ ಇತರ ಪ್ರಮುಖ ನಗರಗಳಿಗೂ ಈ ವಿತರಣೆಯನ್ನು ವಿಸ್ತರಿಸಲು ಕಂಪನಿ ಯೋಜಿಸಿದೆ. ಶೋರೂಮುಗಳ ಸಂಖ್ಯೆ 150 ದಾಟಿಸುವ ಗುರಿ ಹೊಂದಿದೆ.

ಓಬೆನ್ ಇವಿ ಬೈಕ್ ಬೆಲೆ 1.25 ಲಕ್ಷ ರೂ

ಗ್ರಾಹಕರ ನಂಬಿಕೆ ನಮ್ಮ ಮೇಲಿದೆ: ಓಬೆನ್ ಎಲೆಕ್ಟ್ರಿಕ್ ಸಹ-ಸಂಸ್ಥಾಪಕಿ

“25,000ಕ್ಕೂ ಹೆಚ್ಚು ಬುಕ್ಕಿಂಗ್‌ಗಳು ನಮ್ಮ ಬೈಕ್‌ನ ವಿನ್ಯಾಸ ಮತ್ತು ತಂತ್ರಜ್ಞಾನದ ಮೇಲಿರುವ ಗ್ರಾಹಕರ ನಂಬಿಕೆಯನ್ನು ತೋರಿಸುತ್ತದೆ. ಬೆಂಗಳೂರಿನಿಂದ ಆರಂಭವಾಗಿರುವ ಈ ಪಯಣವನ್ನು ಶೀಘ್ರದಲ್ಲೇ ದೇಶದಾದ್ಯಂತ ವಿಸ್ತರಿಸಲಿದ್ದೇವೆ” ಎಂದು ಓಬೆನ್ ಎಲೆಕ್ಟ್ರಿಕ್‌ನ ಸಹ-ಸಂಸ್ಥಾಪಕಿ ಹಾಗೂ ಸಿಇಒ ಮಧುಮಿತಾ ಅಗರವಾಲ್ ತಿಳಿಸಿದ್ದಾರೆ.

ಐಐಟಿ ಮತ್ತು ಐಐಎಂನಲ್ಲಿ ಓದಿದ್ದ ದಿನಕರ್ ಅಗ್ರವಾಲ್ ಮತ್ತು ಮಧುಮಿತಾ ಅಗ್ರವಾಲ್ ಅವರು ಈ ಕಂಪನಿಯ ಸಂಸ್ಥಾಪಕರು. ದಿನಕರ್ ಅವರು ಸಿಒಒ ಆದರೆ, ಮಧುಮಿತಾ ಸಿಇಒ ಆಗಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *