ಬೆಂಗಳೂರು: ಕದ್ದ ಗಡಿಯಾರದ ಫೋಟೋವನ್ನು ವಾಟ್ಸಾಪ್ ಸ್ಟೇಟಸ್ ಹಾಕಿ ಮಾಲೀಕನ ಕೈಗೆ ಸಿಕ್ಕಿಬಿದ್ದ ಮನೆಗೆಲಸದಾಕೆ – Kannada News | Bengaluru Maid Caught: Stolen Watch on WhatsApp Status Leads to Arrest

ಬೆಂಗಳೂರು ಜ.16: ಮನೆಯ ಯಜಮಾನನ ಬ್ರಾಂಡ್ ವಾಚ್ ಕದ್ದು, ವಾಟ್ಸಾಪ್ ಸ್ಟೇಟಸ್ ಹಾಕಿಕೊಂಡ ಮನೆ ಕೆಲಸದಾಕೆ, ಇದೀಗ ಯಜಮಾನನ ಕೈಗೆ ಸಿಕ್ಕಿಬಿದ್ದಿದ್ದಾಳೆ. ಈ ಘಟನೆ ಬೆಂಗಳೂರಿನ ಸರ್ಜಾಪುರದಲ್ಲಿ (Bengaluru Maid Caught) ನಡೆದಿದೆ. ಬ್ರಾಂಡ್ ವಾಚ್ ಧರಿಸಿದ ಫೋಟೋವನ್ನು ವಾಟ್ಸಾಪ್ ಸ್ಟೇಟಸ್​​​​ನಲ್ಲಿ ಹಾಕಿಕೊಂಡಿರುವುದೇ, ಆಕೆ ಸಿಕ್ಕಿ ಬೀಳಲು ಕಾರಣವಾಗಿದೆ. ಪೊಲೀಸರು ಈ ಫೋಟೋವನ್ನು ಇಟ್ಟುಕೊಂಡು ಮನೆ ಕೆಲಸದಾಕೆಯನ್ನು ಪತ್ತೆ ಮಾಡಿದ್ದಾರೆ. ಆರೋಪಿಯನ್ನು ದೊಡ್ಡಕನ್ನನಹಳ್ಳಿ ನಿವಾಸಿ ಸೌಮ್ಯ (26) ಎಂದು ಗುರುತಿಸಲಾಗಿದೆ.

ಸರ್ಜಾಪುರ ರಸ್ತೆಯ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುವ ಖಾಸಗಿ ಕಂಪನಿಯೊಂದರ ಹಿರಿಯ ಉತ್ಪನ್ನ ವ್ಯವಸ್ಥಾಪಕ ಆಗಿರುವ ರೋಹಿತ್ (39)ಅವರು ಜನವರಿ 5 ರಂದು ಈ ಬಗ್ಗೆ ದೂರು ನೀಡಿದ್ದಾರೆ. ಡಿಸೆಂಬರ್ 8, 2025 ರಂದು ಅವರ ಮನೆಯಿಂದ 42 ಗ್ರಾಂ ಚಿನ್ನದ ಮಂಗಳಸೂತ್ರ, ಒಂದು ಜೊತೆ ಕಿವಿಯೋಲೆಗಳು ಮತ್ತು ಮೈಕೆಲ್ ಕೋರ್ಸ್ ಬ್ರಾಂಡ್ ಗಡಿಯಾರ ಕಾಣೆಯಾಗಿದೆ ಎಂದು ಹೇಳಿದ್ದಾರೆ. ಈ ಬಗ್ಗೆ ರೋಹಿತ್ ಅವರು ಸೌಮ್ಯ ಅನ್ನು ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಆಕೆ ಇಲ್ಲ ನಾನು ಕದ್ದಿಲ್ಲ. ಈ ಬಗ್ಗೆ ನನಗೆ ಏನು ಗೊತ್ತಿಲ್ಲ, ನಾನು ಯಾವುದನ್ನು ಕದ್ದಿಲ್ಲ ಎಂದು ಹೇಳಿದ್ದಾಳೆ. ನಂತರ ಕೆಲಸಕ್ಕೆ ಬರುವುದನ್ನು ನಿಲ್ಲಿಸಿದಳು. ಡಿಸೆಂಬರ್ 28 ರಂದು, ರೋಹಿತ್ ಆಕಸ್ಮಿಕವಾಗಿ ವಾಟ್ಸಾಪ್ ಪರಿಶೀಲಿಸುತ್ತಿದ್ದಾಗ, ಸೌಮ್ಯಾ ತನ್ನ ವಾಟ್ಸಾಪ್ ಸ್ಟೇಟಸ್​​​ನಲ್ಲಿ ಬ್ರಾಂಡ್ ವಾಚ್ ಧರಿಸಿದ ಫೋಟೋ ಹಾಕಿಕೊಂಡಿದ್ದಾಳೆ.

ಇದನ್ನೂ ಓದಿ: ಧಾರವಾಡ ಕೇಂದ್ರ ಕಾರಾಗೃಹದಲ್ಲಿ ಜೀವಾವಧಿ ಶಿಕ್ಷೆಗೊಳಗಾದ ವ್ಯಕ್ತಿ ಆತ್ಮಹತ್ಯೆ, ಕಾರಣ ಏನು ಗೊತ್ತಾ?

ರೋಹಿತ್​​ ಈ ಫೋಟೋದ ಬಗ್ಗೆ ತನ್ನ ಕುಟುಂಬದವರನ್ನು ಕೇಳಿದ್ದಾರೆ. ಈ ವೇಳೆ ಮನೆಯವರು ಹೌದು ಇದು ನಮ್ಮ ವಾಚ್ ಎಂದು ಹೇಳಿದ್ದಾರೆ. ನಂತರ ತನ್ನ ಮನೆಯಿಂದ ಕದ್ದ ಅದೇ ಗಡಿಯಾರ ಎಂದು ತಿಳಿದು. ಸೌಮ್ಯಾ ಹಾಕಿದ ವಾಟ್ಸಾಪ್ ಸ್ಟೇಟಸ್ ಸ್ಕ್ರೀನ್‌ಶಾಟ್‌ ತೆಗೆದು ಪೊಲೀಸರಿಗೆ ದೂರು ನೀಡಿದ್ದಾರೆ. ಜನವರಿ 8 ರಂದು ಸೌಮ್ಯಾಳನ್ನು ಬಂಧಿಸಲಾಯಿತು. ವಿಚಾರಣೆಯ ನಿಜ ಒಪ್ಪಿಕೊಂಡಿದ್ದಾಳೆ. ಕದ್ದ 4.5 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳು ಮತ್ತು 20,000 ರೂ. ಮೌಲ್ಯದ ಗಡಿಯಾರವನ್ನು ವಶಪಡಿಸಿಕೊಳ್ಳಲಾಗಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 3:00 pm, Fri, 16 January 26

Source link

Leave a Reply

Your email address will not be published. Required fields are marked *