ಮಹಿಳಾ ಪೊಲೀಸ್ ಅಧಿಕಾರಿ ಮೇಲೆ ಹಲ್ಲೆImage Credit source: tv9 kannada
ಬೆಂಗಳೂರು, ಆಗಸ್ಟ್ 16: ಕರ್ತವ್ಯನಿರತ ಮಹಿಳಾ ಅಧಿಕಾರಿಯೊಬ್ಬರ ಮೇಲೆ ಕೆಲ ವ್ಯಕ್ತಿಗಳಿಂದ ಹಲ್ಲೆ ಮಾಡಿದ್ದಾರೆ. ಅಷ್ಟೇ ಅಲ್ಲದೆ ಅತ್ಯಂತ ಕೀಳುಮಟ್ಟದ ಪದಗಳಿಂದ ಬಾಡಿ ಶೇಮಿಂಗ್ (Body Shaming) ಮಾಡಿ ಅವಮಾನಿಸಿರುವ ಘಟನೆ ಬೆಂಗಳೂರಿನ (bengaluru) ಕೆ.ಆರ್. ಪುರಂ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸಂಚಾರಿ ಮಹಿಳಾ ಪಿಎಸ್ಐ ನಯಾನಾ ಮೇಲೆ ಹಲ್ಲೆ ನಡೆದಿದ್ದು, ಹೇಮಂತ್ ರೆಡ್ಡಿ, ರಾಧಾಕೃಷ್ಣ ರೆಡ್ಡಿ, ಹರ್ಷಿತ್ ರೆಡ್ಡಿ ಹಾಗೂ ರಾಹುಲ್ ಎಂಬುವವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ನಡೆದಿದ್ದೇನು?
ಭಟ್ಟರಹಳ್ಳಿ ಜಂಕ್ಷನ್ ಬಳಿ ಸಂಚಾರ ನಿಯಂತ್ರಣ ಕರ್ತವ್ಯದಲ್ಲಿದ್ದ ಕಾನ್‌ಸ್ಟೇಬಲ್ ಮಂಜುನಾಥ್ ಎಂಬುವವರೊಂದಿಗೆ ಆರೋಪಿಗಳು ಕ್ಷುಲ್ಲಕ ಕಾರಣಕ್ಕೆ ಜಗಳ ಮಾಡುತ್ತಿದ್ದರು. ಇದನ್ನು ಗಮನಿಸಿ ಪರಿಸ್ಥಿತಿಯನ್ನು ನಿಯಂತ್ರಿಸಲು ಮತ್ತು ಗಲಾಟೆ ಬಿಡಿಸಲು ಸಂಚಾರಿ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ (ಪಿಎಸ್‌ಐ) ನಯನಾ, ಸ್ಥಳಕ್ಕೆ ಬಂದಿದ್ದಾರೆ.
‘ಎಮ್ಮೆ ತರ ಇದ್ದೀಯಾ, ಹೊಟ್ಟೆಗೇನು ತಿಂತೀಯಾ?’
ಒಬ್ಬ ಜವಾಬ್ದಾರಿಯುತ ಮಹಿಳಾ ಅಧಿಕಾರಿಯಾಗಿ ಕರ್ತವ್ಯ ಪಾಲನೆಗೆ ಮುಂದಾದ ಅವರ ಮೇಲೆಯೇ ಆರೋಪಿಗಳು ದರ್ಪ ಮೆರೆದಿದ್ದಾರೆ. ಘಟನೆ ವೇಳೆ ಆರೋಪಿಗಳು ಪಿಎಸ್‌ಐ ನಯನಾ ಮೇಲೆ ಹಲ್ಲೆ ನಡೆಸಿರುವುದಲ್ಲದೆ, ‘ಎಮ್ಮೆ ತರ ಇದ್ದೀಯಾ, ಹೊಟ್ಟೆಗೇನು ತಿಂತೀಯಾ?’ ಎಂದು ಬಾಡಿ ಶೇಮಿಂಗ್ ಮಾಡಿದ್ದಾರೆ. ಅಷ್ಟೇ ಅಲ್ಲದೆ ‘ಇವಳನ್ನ ಇವತ್ತೇ ಸಸ್ಪೆಂಡ್ ಮಾಡಿಸುತ್ತೇನೆ’ ಎಂದು ಅಹಂಕಾರದ ಮಾತುಗಳನ್ನಾಡಿ ಬೆದರಿಕೆ ಹಾಕಿದ್ದಾರೆ. ಸಾರ್ವಜನಿಕ ರಸ್ತೆಯಲ್ಲಿ, ನೂರಾರು ಜನರ ಎದುರು ಸಮವಸ್ತ್ರದಲ್ಲಿದ್ದ ಮಹಿಳಾ ಅಧಿಕಾರಿಯೊಂದಿಗೆ ಹೀಗೆ ವರ್ತಿಸಿರುವ ಆರೋಪಿಗಳ ವಿರುದ್ಧ ಸಾರ್ವಜನಿಕರು ತೀವ್ರ ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ: ಅರಣ್ಯ ಇಲಾಖೆ ಸಿಬ್ಬಂದಿ ಗುಂಡೇಟಿಗೆ ಮೂವರ ಬಲಿ ಪ್ರಕರಣ: ಮೃತರ ಕುಟುಂಬಸ್ಥರ ಒಪ್ಪಿಗೆ ಇಲ್ಲದೆಯೇ ಮುಗಿಯಿತಾ ಪೋಸ್ಟ್ಮಾರ್ಟಮ್?
ಇನ್ನು ಈ ಸಂಪೂರ್ಣ ಕೃತ್ಯವು ಕರ್ತವ್ಯದಲ್ಲಿದ್ದ ಸಿಬ್ಬಂದಿಯ ಬಾಡಿವೋರ್ನ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ವಿಡಿಯೋ ಸಾಕ್ಷ್ಯವನ್ನು ಆಧರಿಸಿ ನಾಲ್ವರು ಆರೋಪಿಗಳ ವಿರುದ್ಧ ಕೆ.ಆರ್. ಪುರಂ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಪೊಲೀಸರು ಕಾನೂನು ಕ್ರಮ ಕೈಗೊಂಡಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
