ಬೆಂಗಳೂರು-ಕೊಯಿಕ್ಕೋಡ್ ನಡುವೆ ಆ.15ರಿಂದ ಫ್ಲೈ ಬಸ್ ಸಂಚಾರ
ಬೆಂಗಳೂರು, ಆಗಸ್ಟ್ 07: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ(KSRTC)ದ ಬೆಂಗಳೂರು ಕೇಂದ್ರೀಯ ವಿಭಾಗದ ವತಿಯಿಂದ ಬೆಂಗಳೂರು- ಕೇರಳದ ಕೊಯಿಕ್ಕೋಡ್ ನಡುವೆ ಸಂಪರ್ಕ ಕಲ್ಪಿಸುವ ಫ್ಲೈ ಬಸ್ ಸೇವೆ ಆರಂಭವಾಗುತ್ತಿದೆ. ಆಗಸ್ಟ್ 15ರಿಂದ ಈ ನೂತನ ಮಾರ್ಗದಲ್ಲಿ ಬಸ್ ಸಂಚಾರ ಶುರುವಾಗಲಿದ್ದು, ಬಸ್ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟು ಯಲಹಂಕ, ಹೆಬ್ಬಾಳ ಹಾಗೂ ನಾಯಂಡಹಳ್ಳಿ ಮೆಟ್ರೋ ಸ್ಟೇಷನ್ ಮೂಲಕ ಮೈಸೂರು, ಹುಣಸೂರು, ಗೋಣಿಕೊಪ್ಪ, ಪೊನ್ನಂಪೇಟೆ, ಕುಟ್ಟಾ, ಮಾನಂತವಾಡಿ, ಕಲ್ಪಟ್ಟಾ ಮಾರ್ಗದಲ್ಲಿ ಕೋಯಿಕ್ಕೋಡ್ ತಲುಪಲಿದೆ.
ಬಸ್ ಮಾರ್ಗ ಮತ್ತು ಸಮಯದ ಮಾಹಿತಿ
| ಬೆಂಗಳೂರು- ಕೊಯಿಕ್ಕೋಡ್ | ಕೊಯಿಕ್ಕೋಡ್- ಬೆಂಗಳೂರು | ||
| ಸ್ಥಳ | ಸಮಯ | ಸ್ಥಳ | ಸಮಯ |
| ಬೆಂಗಳೂರು ಏರ್ಪೋರ್ಟ್ | 22:45:00 | ಕೊಯಿಕ್ಕೋಡ್- ಬೆಂಗಳೂರು | 19:30:00 |
| ನಾಯಂಡಳ್ಳಿ ಮೆಟ್ರೋ ನಿಲ್ದಾಣ | 23:55:00 | ಕಲ್ಪಟ್ಟಾ | 20:40:00 |
| ಮೈಸೂರು | 02:45:00 | ಮಾನಂತವಾಡಿ | 21:15:00 |
| ಗೋಣೊಕೊಪ್ಪ | 04:15:00 | ಗೋಣೊಕೊಪ್ಪ | 22:50:00 |
| ಮಾನಂತವಾಡಿ | 05:20:00 | ಮೈಸೂರು | 00:30:00 |
| ಕಲ್ಪಟ್ಟಾ | 06:00:00 | ನಾಯಂಡಳ್ಳಿ ಮೆಟ್ರೋ ನಿಲ್ದಾಣ | 03:15:00 |
| ಕೊಯಿಕ್ಕೋಡ್ | 07:15:00 | ಬೆಂಗಳೂರು ಏರ್ಪೋರ್ಟ್ | 04:15:00 |
ಇದನ್ನೂ ಓದಿ: ಜೋಗ ಜಲಪಾತ ವೀಕ್ಷಣೆಗೆ KSRTCಯಿಂದ ವೀಕೆಂಡ್ ಪ್ಯಾಕೇಜ್
ಟಿಕೆಟ್ ದರ
— KSRTC (@KSRTC_Journeys) August 6, 2026
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮೈಸೂರಿಗೆ 960 ರೂ., ಗೋಣಿಕೊಪ್ಪಕ್ಕೆ 1,200 ರೂ., ಮಾನಂತವಾಡಿಗೆ 1,350ರೂ, ಕಲ್ಪೆಟ್ಟಾಗೆ 1,400 ರೂ. ಮತ್ತು ಕೊಯಿಕ್ಕೋಡ್ಗೆ 1,500 ರೂಪಾಯಿ ದರವನ್ನು ನಿಗದಿಪಡಿಸಲಾಗಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On – 6:21 pm, Fri, 7 August 26
