ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ – Kannada News | Tejasvi Surya Demands White Paper on Bengaluru Road Funds, Alleges Mismanagement

ಬೆಂಗಳೂರು, ಜೂನ್ 23: ಬೆಂಗಳೂರಿನ ರಸ್ತೆ ಗುಂಡಿಗಳು ಮತ್ತು ಅವುಗಳ ದುರಸ್ತಿಗೆಂದು ಸರ್ಕಾರ ಘೋಷಿಸಿರುವ ಸಾವಿರಾರು ಕೋಟಿ ರೂಪಾಯಿಗಳ ಅನುದಾನದ ಕುರಿತು ಸಂಸದ ತೇಜಸ್ವಿ ಸೂರ್ಯ ಅವರು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಬೆಂಗಳೂರು ದಕ್ಷಿಣ ಸಂಸದರು, ಕಳೆದ ಮೂರು ವರ್ಷಗಳಲ್ಲಿ ರಸ್ತೆ ಕಾಮಗಾರಿ ಮತ್ತು ಗುಂಡಿ ನಿರ್ವಹಣೆಗೆ ಎಷ್ಟು ಹಣ ಖರ್ಚು ಮಾಡಲಾಗಿದೆ ಎಂಬುದರ ಕುರಿತು 30 ದಿನಗಳೊಳಗೆ ಶ್ವೇತಪತ್ರ ಹೊರಡಿಸುವಂತೆ ಆಗ್ರಹಿಸಿದ್ದಾರೆ.

ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಸೇರಿದಂತೆ ವಿವಿಧ ಸಚಿವರು ಬೇರೆ ಬೇರೆ ಸಮಯದಲ್ಲಿ ಘೋಷಿಸಿರುವ ಅನುದಾನಗಳ ಅಂಕಿ-ಅಂಶಗಳಲ್ಲಿ ಸ್ಪಷ್ಟತೆಯಿಲ್ಲ ಎಂದು ಸೂರ್ಯ ದೂರಿದ್ದಾರೆ. 1,225 ಕೋಟಿ, 1,700 ಕೋಟಿ, 1,900 ಕೋಟಿ, 450 ಕೋಟಿ, 7 ಕೋಟಿ, 12 ಕೋಟಿ, 750 ಕೋಟಿ, 1,100 ಕೋಟಿ, 2,200 ಕೋಟಿ, 4,000 ಕೋಟಿ, 1,241 ಕೋಟಿ, 4,800 ಕೋಟಿ, 5,500 ಕೋಟಿಗಳಂತಹ ವಿವಿಧ ಮೊತ್ತಗಳನ್ನು ಉಲ್ಲೇಖಿಸಿ, ಇದೆಲ್ಲವೂ ಒಂದೇ ಯೋಜನೆಯೇ ಅಥವಾ ವಿಭಿನ್ನ ಯೋಜನೆಗಳೇ ಎಂಬುದರ ಬಗ್ಗೆ ಜನರಿಗೆ ಸ್ಪಷ್ಟತೆ ಬೇಕು ಎಂದು ಅವರು ಒತ್ತಾಯಿಸಿದ್ದಾರೆ. ತೆರಿಗೆದಾರರ ಹಣ ಎಲ್ಲಿಗೆ ಹೋಗಿದೆ ಎಂಬುದಕ್ಕೆ ಉತ್ತರ ನೀಡುವಂತೆ ಅವರು ಸರ್ಕಾರವನ್ನು ಆಗ್ರಹಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *