ಬೆಂಗಳೂರು ವಿಮಾನ ನಿಲ್ದಾಣದಿಂದ 60 ದಶಲಕ್ಷ ಗುಲಾಬಿ ರಫ್ತು: ಹೂವಿನ ರಫ್ತಿನಲ್ಲಿ ದಾಖಲೆ – Kannada News | Bengaluru Airport Leads India in Flower Export: KIA’s Cold Chain Ensures Fresh Roses

ಬೆಂಗಳೂರು, ಫೆ.17: ಪ್ರೇಮಿಗಳ ದಿನದ ಅಂಗವಾಗಿ ಜಾಗತಿಕವಾಗಿ ಭಾರಿ ಬೇಡಿಕೆಯನ್ನು ಪೂರೈಸುವಲ್ಲಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (KIA) ಯಶಸ್ವಿಯಾಗಿದೆ. ಈ ಬಾರಿ ದಾಖಲೆಯ 60 ದಶಲಕ್ಷಕ್ಕೂ ಹೆಚ್ಚು ಗುಲಾಬಿ ಹೂವುಗಳನ್ನು ಜಗತ್ತಿನಾದ್ಯಂತ ಸಾಗಿಸುವ ಮೂಲಕ ಬೆಂಗಳೂರು ತನ್ನ ರಫ್ತು ಸಾಮರ್ಥ್ಯವನ್ನು ಸಾಬೀತುಪಡಿಸಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಹೂವುಗಳ ಒಟ್ಟು ತೂಕದಲ್ಲಿ ಶೇ. 64 ರಷ್ಟು ಮತ್ತು ಹೂವುಗಳ ಸಂಖ್ಯೆಯಲ್ಲಿ ಶೇ. 38 ರಷ್ಟು ಬಹುದೊಡ್ಡ ಮಟ್ಟದ ಬೆಳವಣಿಗೆ ಕಂಡುಬಂದಿದೆ. ಒಟ್ಟು 2,700 ಮೆಟ್ರಿಕ್ ಟನ್‌ಗಿಂತಲೂ ಅಧಿಕ ತೂಕದ ಹೂವುಗಳನ್ನು ರವಾನಿಸಲಾಗಿದೆ.

ಒಟ್ಟು 26 ಅಂತಾರಾಷ್ಟ್ರೀಯ ತಾಣಗಳಿಗೆ ಸುಮಾರು 305 ಮೆಟ್ರಿಕ್ ಟನ್ ಹೂವುಗಳನ್ನು ಕಳುಹಿಸಲಾಗಿದೆ. ಇದರಲ್ಲಿ ಸಿಂಗಾಪುರ ಮೊದಲ ಸ್ಥಾನದಲ್ಲಿದ್ದರೆ, ನಂತರದ ಸ್ಥಾನಗಳಲ್ಲಿ ಕೌಲಾಲಂಪುರ್, ಅಬುಧಾಬಿ, ನ್ಯೂಯಾರ್ಕ್ ಮತ್ತು ಕುವೈತ್ ನಗರಗಳಿವೆ. ವಿಶೇಷವೆಂದರೆ, ಲಾಸ್ ಏಂಜಲೀಸ್ ಮತ್ತು ಲಂಡನ್ ಗ್ಯಾಟ್ವಿಕ್‌ನಂತಹ ಹೊಸ ನಗರಗಳಿಗೂ ಬೆಂಗಳೂರಿನ ಗುಲಾಬಿ ತಲುಪಿದೆ. ಭಾರತದೊಳಗೆ 47 ತಾಣಗಳಿಗೆ ಒಟ್ಟು 2,402 ಮೆಟ್ರಿಕ್ ಟನ್ ಹೂವುಗಳನ್ನು ಸಾಗಿಸಲಾಗಿದೆ. ದೆಹಲಿ ಮತ್ತು ಕೋಲ್ಕತ್ತಾ ಪ್ರಮುಖ ಮಾರುಕಟ್ಟೆಗಳಾಗಿದ್ದು, ಲಕ್ನೋ ಮತ್ತು ಚಂಡೀಗಢ ನಗರಗಳು ಶೇ. 150ಕ್ಕೂ ಹೆಚ್ಚು ಬೆಳವಣಿಗೆ ದಾಖಲಿಸಿವೆ.

ಇದನ್ನೂ ಓದಿ: ಕೋಲಾರದ ಮಿನಿ ಹೆಲಿಕಾಪ್ಟರ್ ತಯಾರಿಕಾ ಘಟಕಕ್ಕೆ ಪ್ರಧಾನಿ ಮೋದಿ ಚಾಲನೆ

ಹೂವುಗಳು ಬಾಡದಂತೆ ತಾಜಾವಾಗಿ ಗ್ರಾಹಕರ ಕೈ ಸೇರಲು ಕೆಂಪೇಗೌಡ ವಿಮಾನ ನಿಲ್ದಾಣದ ಅತ್ಯಾಧುನಿಕ ‘ಕೋಲ್ಡ್ ಚೈನ್’ ಮೂಲಸೌಕರ್ಯವು ಪ್ರಮುಖ ಕಾರಣವಾಗಿದೆ. ನೈಜ-ಸಮಯದ ಟ್ರ್ಯಾಕಿಂಗ್ ಮತ್ತು ಸುಧಾರಿತ ತಾಪಮಾನ ನಿರ್ವಹಣೆಯಿಂದಾಗಿ ಹೂವುಗಳ ಶೇಖರಣೆ ಮತ್ತು ಸಾಗಣೆ ಯಾವುದೇ ಅಡೆತಡೆಯಿಲ್ಲದೆ ಸುಗಮವಾಗಿ ನಡೆದಿದೆ. ಈ ಮೂಲಕ ಸತತ ಐದನೇ ವರ್ಷವೂ ರಫ್ತಿನಲ್ಲಿ ಕೆಐಎ ಭಾರತದ ಮುಂಚೂಣಿ ವಿಮಾನ ನಿಲ್ದಾಣವಾಗಿ ಹೊರಹೊಮ್ಮಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *