ಬೆಂಗಳೂರು-ಹೈದರಾಬಾದ್ ವಂದೇ ಭಾರತ್ ರೈಲು: ಕಡಿಮೆ ದರದಲ್ಲಿ 8 ಗಂಟೆಯ ಪ್ರಯಾಣ, ಇಲ್ಲಿದೆ ಸಂಪೂರ್ಣ ವೇಳಾಪಟ್ಟಿ – Kannada News | Vande Bharat Bengaluru Hyderabad: Fastest Train, Expanded Seats, Journey Time and Stops

ಬೆಂಗಳೂರು, ಜು.13: ರಾಜ್ಯ ರಾಜಧಾನಿ ಮತ್ತು ಹೈದರಾಬಾದ್ ನಡುವಿನ ಸಂಪರ್ಕವನ್ನು ಮತ್ತಷ್ಟು ವೇಗಗೊಳಿಸಿರುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಕೇವಲ 8 ಗಂಟೆ 15 ನಿಮಿಷಗಳಲ್ಲಿ ಸುಮಾರು 610 ಕಿಲೋಮೀಟರ್ ದೂರವನ್ನು ಕ್ರಮಿಸುತ್ತದೆ. ದೇಶದ 29ನೇ ವಂದೇ ಭಾರತ್ ಸೇವೆಯಾಗಿರುವ ಈ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಸೆಪ್ಟೆಂಬರ್ 24, 2023 ರಂದು ಚಾಲನೆ ನೀಡಿದ್ದರು. ಈ ಮಾರ್ಗದಲ್ಲಿ ಸಂಚರಿಸುವ ವಂದೇ ಭಾರತ್ ರೈಲು ಬುಧವಾರ ಹೊರತುಪಡಿಸಿ ವಾರದ ಉಳಿದ ಆರೂ ದಿನಗಳೂ ಸೇವೆ ಒದಗಿಸುತ್ತದೆ.

ಹೈದರಾಬಾದ್‌ನಿಂದ ಬೆಂಗಳೂರಿಗೆ (ರೈಲು ಸಂಖ್ಯೆ: 20703)

ಹೊರಡುವ ಸಮಯ: ಕಾಚಿಗುಡದಿಂದ (Kacheguda) ಮುಂಜಾನೆ 5:45 ಕ್ಕೆ ಹೊರಡುತ್ತದೆ.

ತಲುಪುವ ಸಮಯ: ಯಶವಂತಪುರ ಜಂಕ್ಷನ್‌ಗೆ (Yesvantpur) ಅಂದೇ ಮಧ್ಯಾಹ್ನ 2:00 ಕ್ಕೆ ತಲುಪುತ್ತದೆ.

ಬೆಂಗಳೂರಿನಿಂದ ಹೈದರಾಬಾದ್‌ಗೆ (ರೈಲು ಸಂಖ್ಯೆ: 20704)

ಹೊರಡುವ ಸಮಯ: ಯಶವಂತಪುರದಿಂದ ಮಧ್ಯಾಹ್ನ 2:45 ಕ್ಕೆ ಹೊರಡುತ್ತದೆ.

ತಲುಪುವ ಸಮಯ: ಕಾಚಿಗುಡ ನಿಲ್ದಾಣಕ್ಕೆ ಅಂದೇ ರಾತ್ರಿ 11:00 ಕ್ಕೆ ತಲುಪುತ್ತದೆ.

ಪ್ರಮುಖ ನಿಲ್ದಾಣಗಳು:

ಈ ರೈಲು ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ಮೂಲಕ ಹಾದುಹೋಗುತ್ತದೆ. ಮಹಬೂಬ್‌ನಗರ, ಕರ್ನೂಲ್ ಸಿಟ, ಅನಂತಪುರ, ಧರ್ಮಾವರಂ ಜಂಕ್ಷನ್, ಹಿಂದೂಪುರ ಒಟ್ಟು ಐದು ನಿಲ್ದಾಣಗಳಲ್ಲಿ ಇದು ನಿಲ್ಲುತ್ತದೆ. ನೈಋತ್ಯ ರೈಲ್ವೆಯು ಡಿಸೆಂಬರ್ 2025 ರ ಕೊನೆಯಲ್ಲಿ ಹಿಂದೂಪುರದಲ್ಲಿ 2 ನಿಮಿಷಗಳ ಪ್ರಾಯೋಗಿಕ ನಿಲ್ದಾಣವನ್ನು ಪರಿಚಯಿಸಿದೆ. ಪರಿಷ್ಕೃತ ವೇಳಾಪಟ್ಟಿಯ ಪ್ರಕಾರ, ಹೈದರಾಬಾದ್ ಕಡೆಗೆ ಹೋಗುವ ರೈಲು ಮಧ್ಯಾಹ್ನ 12:17 ಕ್ಕೆ ಹಿಂದೂಪುರ ತಲುಪಿ 12:19 ಕ್ಕೆ ಅಲ್ಲಿಂದ ಹೊರಡುತ್ತದೆ.

ಇದನ್ನೂ ಓದಿ: ಮುರುಡೇಶ್ವರದಲ್ಲಿ ಚಲಿಸುತ್ತಿರುವ ರೈಲಿನಿಂದ ಬೀಳುತ್ತಿದ್ದ ಯುವಕನನ್ನು ರಕ್ಷಿಸಿದ ಸಿಬ್ಬಂದಿ!

ಹೆಚ್ಚುವರಿ ಸೀಟುಗಳು ಮತ್ತು ಅತ್ಯಾಧುನಿಕ ಬೋಗಿಗಳು:

ಪ್ರಯಾಣಿಕರ ಭಾರಿ ಬೇಡಿಕೆಯ ಹಿನ್ನೆಲೆಯಲ್ಲಿ, ಜುಲೈ 10, 2025 ರಿಂದ ಜಾರಿಗೆ ಬರುವಂತೆ ಈ ರೈಲಿನ ಸಾಮರ್ಥ್ಯವನ್ನು ದ್ವಿಗುಣಗೊಳಿಸಲಾಗಿದೆ. ಮೊದಲು ಕೇವಲ 8 ಬೋಗಿಗಳನ್ನು ಹೊಂದಿದ್ದ ಈ ರೈಲಿಗೆ ಈಗ 16 ಬೋಗಿಗಳ ಅತ್ಯಾಧುನಿಕ ರೇಕ್ ಅಳವಡಿಸಲಾಗಿದೆ. ಇದರಲ್ಲಿ ಎರಡು ವರ್ಗದ ಆಸನ ವ್ಯವಸ್ಥೆಗಳಿವೆ. ಒಂದು ಎಸಿ ಚೇರ್ ಕಾರ್, ಇನ್ನೊಂದು ಎಕ್ಸಿಕ್ಯೂಟಿವ್ ಚೇರ್ ಕಾರ್. ಕಾಚಿಗುಡದಿಂದ ಯಶವಂತಪುರ ನಡುವಿನ ಪೂರ್ಣ ಪ್ರಯಾಣಕ್ಕೆ ಒಂದು ಬದಿಯ ಟಿಕೆಟ್ ದರ ಎಸಿ ಚೇರ್ ಕಾರ್​​ಗೆ 1600 ರೂ. ಎಕ್ಸಿಕ್ಯೂಟಿವ್ ಚೇರ್ ಕಾರ್ 2,915 ರೂ. ಆಗುತ್ತದೆ ಎಂದು ಹೇಳಲಾಗಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *