ಬೆಂಚ್​​ ಮೇಲೆ ಕಾಲಿಟ್ಟು ರಾಜ್ಯಸಭೆಯಲ್ಲಿ ಮಾತಾಡಿದ ಸದಸ್ಯ!: ಸತ್ಯ ತಿಳಿಯಲು ಈ ವಿಡಿಯೋ ನೋಡಿ – Kannada News | BJP Member Sadanandan Master Placed His Artificial Legs on the Bench During His First Speech in Rajya Sabha Session

ನವದೆಹಲಿ, ಫೆಬ್ರವರಿ 03: ರಾಜ್ಯಸಭೆಯಲ್ಲಿ ಚೊಚ್ಚಲ ಭಾಷಣದ ವೇಳೆ ಬಿಜೆಪಿ ಸದಸ್ಯ ಸಿ. ಸದಾನಂದನ್ ಮಾಸ್ಟರ್  ತಮ್ಮ ಕೃತಕ ಕಾಲುಗಳನ್ನು ಸದನದ ಬೆಂಚ್​​ ಮೇಲೆ ಪ್ರದರ್ಶಿಸಿ, ತಾವು ಕಾಲುಗಳನ್ನು ಕಳೆದುಕೊಂಡಿದ್ದೇಗೆ ಎಂಬ ಬಗ್ಗೆ ವಿವರಣೆ ನೀಡಿದ ಪ್ರಸಂಗ ನಡೆದಿದೆ. ಪ್ರಜಾಪ್ರಭುತ್ವ, ವಾಕ್ ಸ್ವಾತಂತ್ರ್ಯ, ಸಹಿಷ್ಣುತೆಯ ಬಗ್ಗೆ ಮಾತನಾಡುವ ಎಡಪಂಥೀಯ ರಾಜಕೀಯ ಪಕ್ಷಗಳು ತಮ್ಮ ಸೈದಾಂತಿಕ ವಿರೋಧಿಗಳಿಗೆ ಎಂತಾ ಹಿಂಸೆ ನೀಡಿವೆ ನೋಡಿ ಎಂದು ಅವರು ಹೇಳಿರೋದು ರಾಜ್ಯ ಸಭೆಯಲ್ಲಿ ಕೆಲ ಕಾಲ ಗದ್ದಲಕ್ಕೂ ಕಾರಣವಾಗಿದೆ. 1994ರ ಜನವರಿ 25ರಂದು ಸಿಪಿಐಎಂ ಕಾರ್ಯಕರ್ತರು ಎಂದು ಹೇಳಲಾದ ಗುಂಪು ಇವರ ಮೇಲೆ ದಾಳಿ ನಡೆಸಿತ್ತು. ಕಾಲುಗಳನ್ನು ಕತ್ತರಿಸಿ ಮತ್ತೆ ಜೋಡಣೆಗೆ ಸಿಗಬಾರದೆಂದು ಅಡಗಿಸಿಟ್ಟಿತ್ತು. ಬಳಿಕ ಬಿಜೆಪಿಯಲ್ಲಿ ಸಕ್ರಿಯರಾಗಿದ್ದ ಇವರು ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿದ್ದರು.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

Leave a Reply

Your email address will not be published. Required fields are marked *