ಬೆಟಗೇರಿಯ ನಿಗೂಢ ಗವಿಯಲ್ಲೂ ಇದ್ಯಂತೆ ನಿಧಿ! ಸಂಪತ್ತಿಗಿದ್ಯಾ ಏಳು ಹೆಡೆ ಸರ್ಪದ ಕಾವಲು? – Kannada News | Gadag: Treasure Rumours Spread to Betageri After Lakkundi Discovery

ಗದಗ, ಜನವರಿ 27: ಲಕ್ಕುಂಡಿಯಲ್ಲಿ ನಿಧಿ ಪತ್ತೆಯಾದ ಬಳಿಕ ರಾಜ್ಯದಾದ್ಯಂತ ನಿಧಿ ವದಂತಿಗಳು ವ್ಯಾಪಕವಾಗಿ ಹರಡುತ್ತಿವೆ. ಇದೀಗ ಬೆಟಗೇರಿಯಲ್ಲಿರುವ ನಿಗೂಢ ಗವಿಯೊಂದರಲ್ಲಿ ನಿಧಿ ಅಡಗಿದೆ ಎಂಬ ಮಾತುಗಳು ಹೊಸ ಚರ್ಚೆಗೆ ಕಾರಣವಾಗಿದೆ. ಗ್ರಾಮಸ್ಥರ ಪ್ರಕಾರ, ಈ ನಿಧಿಯನ್ನು ಏಳು ಹೆಡೆಯ ಸರ್ಪವೊಂದು ಕಾಯುತ್ತಿದೆಯಂತೆ. ಹಾವು ಹೊರಬಂದಾಗ ಸಾಂಬ್ರಾಣಿ ವಾಸನೆ ಬರುತ್ತದೆ. ತಮ್ಮ ತಂದೆ ಮತ್ತು ಅಜ್ಜಂದಿರು ಕೂಡ ಇಲ್ಲಿ ನಿಧಿ ಇರುವುದನ್ನು ನೋಡಿದ್ದಾರೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ದೊಡ್ಡ ಗಾತ್ರದ ಹಾವುಗಳು ಇಲ್ಲೇ ಸುತ್ತಾಡಿಕೊಂಡಿರುತ್ತವೆ ಎಂದೂ ತಿಳಿಸಿದ್ದಾರೆ. ಈ ಗವಿಯಿಂದ ಶಿವಾನಂದ ಮಠ ಮತ್ತು ಕೆರಂಬನಕಲ್ಲ ದೇವಸ್ಥಾನಕ್ಕೆ ದಾರಿ ಇದೆ ಎಂಬ ನಂಬಿಕೆಯೂ ಇದೆ. ನಾಗದೇವರ ಕಲ್ಲುಗಳು ಕಾವಲು ಕಾಯುತ್ತಿದ್ದು, ಮೂರು ಹೆಡೆ ಮತ್ತು ಎರಡು ಹೆಡೆಯ ಜೋಡಿ ಹಾವುಗಳು ಇಲ್ಲಿವೆ. ಈ ಹಾವುಗಳು ಇಲ್ಲಿಯವರೆಗೆ ಯಾರಿಗೂ ತೊಂದರೆ ನೀಡಿಲ್ಲ ಎಂಬುದು ಗ್ರಾಮಸ್ಥರ ಮಾತು.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

Leave a Reply

Your email address will not be published. Required fields are marked *