Headlines

ಬೆಲೆ ಏರಿಕೆ ಅಬ್ಬರದ ನಡುವೆ ಗ್ರಾಹಕರಿಗೆ ಮತ್ತೊಂದು ಶಾಕ್​​: ಖಾಸಗಿ ಬಸ್​​ಗಳ ಟಿಕೆಟ್​​ ದರವೂ ಹೆಚ್ಚಳ – Kannada News | Karnataka private bus fares jump 20 30 percent amid fuel price surge

ಬೆಂಗಳೂರು, ಮೇ 15: ಇಂಧನ, ಅಗತ್ಯ ಸಾಮಾಗ್ರಿಗಳ ಬೆಲೆಯೇರಿಕೆಯಿಂದ (Price Hike) ಈಗಾಗಲೇ ಕಂಗಾಲಾಗಿರುವ ಸಾಮಾನ್ಯ ಜನರಿಗೆ ಖಾಸಗಿ ಬಸ್​​ ಮಾಲೀಕರು ಮತ್ತೊಂದು ಶಾಕ್​​ ಕೊಟ್ಟಿದ್ದಾರೆ. ಪೆಟ್ರೋಲ್, ಡಿಸೇಲ್ ದರ ಏರಿಕೆ ಹಿನ್ನೆಲೆ ಇಂದು ಮಧ್ಯರಾತ್ರಿಯಿಂದಲೇ ಖಾಸಗಿ ಬಸ್‌ ಟಿಕೆಟ್ ದರ ಏರಿಕೆಗೆ ತೀರ್ಮಾನಿಸಲಾಗಿದೆ. ಶೇ.20-30ರಷ್ಟು ದರ ಏರಿಕೆಯಾಗಲಿದ್ದು, ಬೆಲೆ ಏರಿಕೆ ಅಬ್ಬರದ ಪರಿಣಾಮ ಈಗಾಗಲೇ ಸೋತು ಸುಣ್ಣವಾಗಿರುವ ಜನರಿಗೆ ಇದರಿಂದ ಮತ್ತಷ್ಟು ಹೊರೆಯಾಗಲಿದೆ.

ಮುಖ್ಯಾಂಶಗಳು

  • ಬೆಲೆ ಏರಿಕೆಯಿಂದ ತತ್ತರಿಸಿರುವ ಸಾರ್ವಜನಿಕರಿಗೆ ಮತ್ತೊಂದು ಶಾಕ್​​
  • ಇಂದು ಮಧ್ಯರಾತ್ರಿಯಿಂದ ಖಾಸಗಿ ಬಸ್​​ಗಳ ಟಿಕೆಟ್​​ ದರವೂ ಹೆಚ್ಚಳ
  • ಶೇ.20-30ರಷ್ಟು ದರ ಏರಿಕೆ ಬಗ್ಗೆ ಮಾಹಿತಿ ನೀಡಿದ ಬಸ್​​ ಮಾಲಕರು

ಖಾಸಗಿ ಬಸ್​​ ಮಾಲೀಕರು ಹೇಳೋದೇನು?

ಬಸ್​​ ಒಂದಕ್ಕೆ ಪ್ರತಿದಿನ ಕನಿಷ್ಠ 150 ಲೀಟರ್ ಡಿಸೇಲ್​​ ಹಾಕಿಸುತ್ತೇವೆ. ಇಂಧನ ಬೆಲೆಯಲ್ಲಿ 3 ರೂ. ಹೆಚ್ಚಳವಾಗಿರುವ ಕಾರಣ 450 ರೂಪಾಯಿ ಹೆಚ್ಚುವರಿಯಾಗಿ ನಮಗೆ ಹೊರೆಯಾಗಲಿದೆ. ಹೀಗಾಗಿ ಟಿಕೆಟ್​​ಗಳ ದರ ಏರಿಸೋದು ನಮಗೂ ಅನಿವಾರ್ಯವಾಗಿದೆ. ಇದರ ಪರಿಣಾಮ ಪ್ರಯಾಣಿಕರ ಮೇಲೆ ಉಂಟಾಗಲಿದೆ ಎಂದು ಕರ್ನಾಟಕ ರಾಜ್ಯ ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ನಟರಾಜ್ ಶರ್ಮಾ ತಿಳಿಸಿದ್ದಾರೆ.

ಇದನ್ನೂ ಓದಿ: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಬೆನ್ನಲ್ಲೇ ಸಿಎನ್​ಜಿ ಕೆಜಿಗೆ 2 ರೂಪಾಯಿ ಹೆಚ್ಚಳ

ಇನ್ನು ಪೆಟ್ರೋಲ್ ಹಾಗೂ ಡೀಸೆಲ್ ದರ ಏರಿಕೆ ಬಗ್ಗೆ ಇಂದು (ಮೇ 15) ಬೆಳಿಗ್ಗೆಯಷ್ಟೇ ತೈಲ ಕಂಪನಿಗಳು ಘೋಷಣೆ ಮಾಡಿದ್ದವು. ಪೆಟ್ರೋಲ್ ಹಾಗೂ ಡೀಸೆಲ್ ಎರಡೂ ಲೀಟರ್​​ಗೆ 3 ರೂಪಾಯಿಗೂ ಹೆಚ್ಚು ಏರಿಕೆ ಕಂಡಿತ್ತು. ಅದರ ಅನ್ವಯ ಬೆಂಗಳೂರಿನಲ್ಲಿ ಪೆಟ್ರೋಲ್ ದರ ಲೀಟರ್​​ಗೆ 3.27 ರೂಪಾಯಿ ಏರಿಕೆಯಾಗಿದ್ದು, ಡಿಸೇಲ್ ಬೆಲೆ ಲೀಟರ್​​ಗೆ 3.12 ರೂಪಾಯಿ ಹೆಚ್ಚಳವಾಗಿತ್ತು. ಆ ಬೆನ್ನಲ್ಲೇ ದೇಶಾದ್ಯಂತ ಸಿಎನ್‌ಜಿ (CNG) ದರವನ್ನೂ ಪ್ರತಿ ಕೆಜಿಗೆ 2 ರೂಪಾಯಿ ಏರಿಕೆ ಮಾಡಿರುವ ಬಗ್ಗೆ ಘೋಷಣೆಯಾಗಿತ್ತು. ಹಾರ್ಮುಜ್ ಜಲಸಂಧಿಯ ದಿಗ್ಬಂಧನದಿಂದಾಗಿ (Hormuz Blockade) ಇಂಧನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿರುವ ಪರಿಣಾಮ ಇಂಧನಗಳ ಪೂರೈಕೆ ವ್ಯತ್ಯಯವೇ ಇದಕ್ಕೆ ಪ್ರಮುಖ ಕಾರಣ ಎನ್ನಲಾಗಿತ್ತು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Leave a Reply

Your email address will not be published. Required fields are marked *