
ಬೆಳಗಾವಿ, ಮಾರ್ಚ್ 26: ಬೆಳಗಾವಿ ಮಾರ್ಕೆಟ್ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸುವ ಮೂಲಕ ಖೋಟಾ ನೋಟು (Khota Notu) ದಂಧೆಯನ್ನು ಪತ್ತೆ ಮಾಡಿದ್ದಾರೆ. ಜೊತೆಗೆ ಬೆಳಗಾವಿಯಲ್ಲಿ ಖೋಟಾ ನೋಟು ಚಲಾವಣೆಗೆ ಯತ್ನಿಸಿದ್ದ ಗೋವಾ ಮೂಲದ ಗ್ಯಾಂಗ್ನ್ನು ಬಂಧಿಸಿದ್ದಾರೆ. ಎ1 ಮೊಹಮ್ಮದ್ ಅರ್ಬಾಜ್ (21), ಎ2 ರೂಪೇಶ್ ವಾಕೋಡೆ (26), ಎ3 ಮೊಹಮ್ಮದ್ ಹುಸೇನ್ ಭಕ್ಷಿ(23), ಶ್ರವಣಕುಮಾರ (25) ಬಂಧಿತರು. ಆರೋಪಿಗಳಿಂದ ಒಂದು ಕಾರು, 2 ಲಕ್ಷ 40 ಸಾವಿರ ರೂ ಮುಖ ಬೆಲೆಯ ಖೋಟಾ ನೋಟು ಮತ್ತು 4 ಮೊಬೈಲ್ ಜಪ್ತಿ ಮಾಡಲಾಗಿದೆ. ಬೆಳಗಾವಿ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಬೆಳಗಾವಿಯಲ್ಲಿ ಖೋಟಾ ನೋಟು ಚಲಾವಣೆಗೆ ಯತ್ನ
ಗೋವಾ ರಾಜ್ಯದ ಬಂಧಿತ ನಾಲ್ವರು ಆರೋಪಿಗಳು ಒಂದು ಲಕ್ಷ ರೂ ಅಸಲಿ ನೋಟಿಗೆ 2 ಲಕ್ಷ ರೂ ಖೋಟಾ ನೋಟು ನೀಡುತ್ತಿದ್ದರು. ಬೆಳಗಾವಿಯ ಖಡೇಬಜಾರ್ ಅಂಗಡಿಯಲ್ಲಿ ಖೋಟಾ ನೋಟು ಚಲಾವಣೆಗೆ ಗ್ಯಾಂಗ್ ಯತ್ನಿಸಿದೆ. ಸಂಶಯಗೊಂಡ ಅಂಗಡಿ ಮಾಲೀಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಅಲರ್ಟ್ ಆದ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಅದರಂತೆ ನಾಲ್ವರನ್ನು ಬಂಧಿಸಿದ್ದು, ಇನ್ನೂ ಮೂವರ ಬಂಧನಕ್ಕೆ ಪೊಲೀಸರು ಬಲೆಬೀಸಿದ್ದಾರೆ.
ಗೋವಾ ಜೈಲಿನಿಂದಲೇ ಖೋಟಾ ನೋಟು ದಂಧೆ
ಇನ್ನು ಖೋಟಾ ನೋಟ್ ಗ್ಯಾಂಗ್ನ ಕಿಂಗ್ ಪಿನ್ ಗೋವಾ ಜೈಲಿನಲ್ಲಿದ್ದಾನೆ. ಎ1 ಆರೋಪಿ ಮೊಹಮ್ಮದ್ ಅರ್ಬಾಜ್ನ ಅಣ್ಣ ಮೊಹಮ್ಮದ್ ಸರ್ಫರಾಜ್ ಅಸಲಿ ಕಿಂಗ್ ಪಿನ್. ಜೈಲಿನಲ್ಲಿರುವ ಅಣ್ಣನೊಂದಿಗೆ ಫೋನ್ ಮಾಡಿ ಖೋಟಾ ನೋಟು ತರಿಸಿಕೊಂಡಿದ್ದ. ಜೈಲಿನಲ್ಲಿ ಕುಳಿತುಕೊಂಡೇ ಫೋನ್ ಮೂಲಕ ಸರ್ಪರಾಜ್ ಆಪರೇಟ್ ಮಾಡುತ್ತಿದ್ದ.
ಇದನ್ನೂ ಓದಿ: 400 ಕೋಟಿ ರೂ. ದರೋಡೆ ಪ್ರಕರಣಕ್ಕೆ ರೋಚಕ ಟ್ವಿಸ್ಟ್: ಮಹಾರಾಷ್ಟ್ರ ಎಸ್ಐಟಿ ತನಿಖಾ ವರದಿಯಲ್ಲಿ ಸ್ಫೋಟಕ ಅಂಶ!
ಗೋವಾದಲ್ಲಿ ವ್ಯಕ್ತಿಯೊಬ್ಬನಿಗೆ 1 ಲಕ್ಷ ರೂ ಅಸಲಿ ಹಣಕ್ಕೆ 2 ಲಕ್ಷ ರೂ ಖೋಟಾ ನೋಟ್ ಸಪ್ಲೈ ಮಾಡಿದ್ದರು. ಜೈಲಿನಲ್ಲಿರುವ ಅಣ್ಣನ ಸೂಚನೆಯಂತೆ ತಮ್ಮ ಖೋಟಾ ನೋಟು ಸಪ್ಲೈ ಮಾಡಿದ್ದ. ಖೋಟಾ ನೋಟ್ ಸಪ್ಲೈ ಮಾಡಿದ್ದ ಅಪರಿಚಿತ ಆರೋಪಿ ಬಂಧನಕ್ಕೆ ತಂಡ ರಚನೆ ಮಾಡಲಾಗಿದೆ. ಸದ್ಯ ಬೆಳಗಾವಿ ಸಿಸಿಬಿ ಪೊಲೀಸರಿಗೆ ಕೇಸ್ ರವಾನಿಸಲಾಗಿದ್ದು, ಉಳಿದ ಮೂವರು ಆರೋಪಿಗಳ ಬಂಧಿಸುವ ಹೊಣೆಗಾರಿಕೆ ಹೊತ್ತಿದೆ. ಬೆಳಗಾವಿ ಪೊಲೀಸ್ ಕಮಿಷನರ್ ಪ್ರಕರಣ ಗಂಭೀರವಾಗಿ ತೆಗೆದುಕೊಂಡಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.