ಬೆಳಗ್ಗೆ ಫೀನಿಕ್ಸ್​ನಂತೆ ಎದ್ದು ಸಂಜೆ ಠುಸ್ ಎಂದು ಕುಸಿದ ಷೇರುಬಜಾರು; ಇಲ್ಲಿದೆ ಇಂಟರೆಸ್ಟಿಂಗ್ ಕಾರಣ – Kannada News | Sensex, Nifty gain big on Thursday morning, lose many points by evening, know the key reasons

ನವದೆಹಲಿ, ಜುಲೈ 9: ನಿನ್ನೆ ಬುಧವಾರ ಒಂದು ಸಾವಿರಕ್ಕೂ ಅಧಿಕ ಅಂಕಗಳನ್ನು ಕಳೆದುಕೊಂಡಿದ್ದ ಸೆನ್ಸೆಕ್ಸ್ (Sensex) ಇವತ್ತು 238 ಅಂಕಗಳನ್ನು ಗಳಿಸಿದೆ. ಗುರುವಾರ ಬೆಳಗಿನ ವಹಿವಾಟಿನಲ್ಲಿ ಒಂದು ಹಂತದಲ್ಲಿ 77,326 ಅಂಕಗಳ ಮಟ್ಟಕ್ಕೆ ಹೋಗಿದ್ದ ಸೆನ್ಸೆಕ್ಸ್ ದಿನದ ಕೊನೆಯಲ್ಲಿ 76,741 ಮಟ್ಟದಲ್ಲಿ ನಿಂತಿತು. ಸೆನ್ಸೆಕ್ಸ್ ಈ ದಿನದಲ್ಲಿ 238 ಅಂಕ ಗಳಿಸಿತಾದರೂ, ದಿನದ ಗರಿಷ್ಠ ಮಟ್ಟದಿಂದ 585 ಅಂಕಗಳನ್ನು ಕಳೆದುಕೊಂಡಿದ್ದು ಹೌದು.

ಷೇರು ಮಾರುಕಟ್ಟೆ ಗುರುವಾರ ಬೆಳಗ್ಗೆ ಚೇತರಿಸಿಕೊಳ್ಳಲು ಏನು ಕಾರಣ?

  • ಜಾಗತಿಕ ಮಾರುಕಟ್ಟೆ ಪ್ರಭಾವ: ಜಪಾನ್, ಅಮೆರಿಕ ಮೊದಲಾದ ದೇಶಗಳ ಷೇರು ಮಾರುಕಟ್ಟೆ ಸೂಚ್ಯಂಕಗಳು ಗುರುವಾರ ಪಾಸಿಟಿವ್ ಆಗಿವೆ. ಇದರ ಪರಿಣಾಮ ಭಾರತದ ಹೂಡಿಕೆದಾರರ ಮೇಲಾಗಿತ್ತು.
  • ವಿದೇಶಿ ಹೂಡಿಕೆದಾರರಿಂದ ಖರೀದಿ: ವಿದೇಶಿ ಸಾಂಸ್ಥಿಕ ಹೂಡಿಕೆದಾರರು (FIIs) ಭಾರತೀಯ ಷೇರು ಮಾರುಕಟ್ಟೆಯಲ್ಲಿ ನಿರಂತರವಾಗಿ ಖರೀದಿಯಲ್ಲಿ ತೊಡಗಿದ್ದಾರೆ. ಹಿಂದಿನ ದಿನದ ಕುಸಿತದ ನಡುವೆಯೂ ವಿದೇಶಿ ಹೂಡಿಕೆದಾರರು ಭಾರತೀಯ ಮಾರುಕಟ್ಟೆಯಲ್ಲಿ ಸುಮಾರು ₹1,962.80 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದು ಹೂಡಿಕೆದಾರರಲ್ಲಿ ಧೈರ್ಯ ತುಂಬಿತು.
  • ಕಡಿಮೆ ಬೆಲೆಗೆ ಷೇರುಗಳು: ಷೇರು ಮಾರುಕಟ್ಟೆ ನಿನ್ನೆ ಭರ್ಜರಿ ಕುಸಿತ ಕಂಡ ಬೆನ್ನಲ್ಲೇ ಬಹಳಷ್ಟು ಷೇರುಗಳ ಪ್ರೈಸ್ ಕರೆಕ್ಷನ್ ಚೆನ್ನಾಗಿ ಆಗಿದೆ. ಕಡಿಮೆ ಬೆಲೆಗೆ ಒಳ್ಳೆಯ ಸ್ಟಾಕ್ಸ್ ಲಭ್ಯವಾಗುತ್ತಿವೆ. ಇದು ಷೇರುಗಳ ಖರೀದಿಗೆ ಹೆಚ್ಚು ಪ್ರೇರಣೆ ನೀಡಿತು. ಹೀಗಾಗಿ, ಷೇರು ಮಾರುಕಟ್ಟೆ ಪಾಸಿಟಿವ್ ಆಯಿತು.

ಇದನ್ನೂ ಓದಿ: ವಿಕಿಪೀಡಿಯಾ ಸಹ-ಸ್ಥಾಪಕನಿಗೇ ನಿಷೇಧ: ‘ಅನಾಮಧೇಯ ಗುಂಪುಗಳ’ ಕೈಯಲ್ಲಿದೆ ಜಗತ್ತಿನ ಅತಿ ದೊಡ್ಡ ಜ್ಞಾನಕೋಶ

ಗುರುವಾರ ಸಂಜೆಗೆ ಷೇರುಪೇಟೆ ಕುಸಿಯಲು ಏನು ಕಾರಣ?

  • ಅಮೆರಿಕ ಇರಾನ್ ಯುದ್ಧ: ಇರಾನ್ ಜೊತೆ ಮತ್ತೆ ಮಾತುಕತೆಗೆ ತೊಡಗುವುದೇ ಇಲ್ಲ ಎಂದು ಟ್ರಂಪ್ ಹೇಳಿದ್ದಾರೆ. ಇವತ್ತೂ ಕೂಡ ಎರಡೂ ಕಡೆಗಳಿಂದ ಪರಸ್ಪರ ದಾಳಿಗಳಾಗಿವೆ. ಇದು ಹೂಡಿಕೆದಾರರ ಉತ್ಸಾಹ ಕುಗ್ಗುವಂತೆ ಮಾಡಿದೆ. ಹೂಡಿಕೆ ಮುಂದುವರಿಸುವ ಧೈರ್ಯ ಕುಂದಿಸಿದೆ.
  • ಪ್ರಾಫಿಟ್ ಬುಕಿಂಗ್: ಈ ಅನಿಶ್ಚಿತ ಪರಿಸ್ಥಿತಿಯಲ್ಲಿ ಬಂದಷ್ಟೇ ಲಾಭ ಎನ್ನುವಂತಾಗಿದೆ. ಬೆಳಗ್ಗೆ ಮಾರುಕಟ್ಟೆ ಉಬ್ಬಿದ್ದರಿಂದ ಕೆಲ ಷೇರುಗಳಿಗೆ ಉತ್ತಮ ಬೆಲೆ ಬಂದರಿಂದ ಲಾಭಕ್ಕಾಗಿ ಮಾರುವ ಟ್ರೆಂಡ್ ಶುರುವಾಯಿತು ಎಂದು ತಜ್ಞರು ಹೇಳುತ್ತಾರೆ. ಹೀಗಾಗಿ, ದಿನದ ಕೊನೆಕೊನೆಯಲ್ಲಿ ಮಾರುಕಟ್ಟೆ ಹಿನ್ನಡೆ ಅನುಭವಿಸಿದೆ.

ಇದನ್ನೂ ಓದಿ: ಗೃಹ ಜ್ಯೋತಿ ಸ್ಕೀಮ್​ನಲ್ಲಿ ಆರ್​ಆರ್ ನಂಬರ್​ಗೆ ನಿಮ್ಮ ಆಧಾರ್ ಡಿ-ಲಿಂಕ್ ಮಾಡುವುದು ಹೇಗೆ?

ಕಚ್ಚಾ ತೈಲದ ಮೇಲೆ ವಿಶ್ವದ ಚಿತ್ತ

ಇರಾನ್ ಮತ್ತು ಅಮೆರಿಕದ ಸಂಘರ್ಷದಲ್ಲಿ ಜಗತ್ತಿಗೆ ಹಾರ್ಮುಜ್ ಜಲಸಂಧಿಯ ಪ್ರಶ್ನೆ ಅತಿಹೆಚ್ಚು ಮುಖ್ಯವಾಗಿದೆ. ಯುದ್ಧದಿಂದ ಈ ಜಲಮಾರ್ಗಕ್ಕೆ ಮತ್ತೆ ತಡೆಯಾಗಿ ತೈಲ ಪೂರೈಕೆ ಸ್ಥಗಿತಗೊಂಡರೆ ಎನ್ನುವ ಭಯ ಎಲ್ಲರಲ್ಲೂ ಇದೆ. ಬ್ಯಾರಲ್​ಗೆ 120 ಡಾಲರ್​ವರೆಗೂ ಹೋಗಿದ್ದ ತೈಲ ಬೆಲೆ ಸದ್ಯ 70 ಡಾಲರ್ ಆಸುಪಾಸಿನಲ್ಲಿ ಇದೆ. ಇದು ಮತ್ತೆ 100 ಡಾಲರ್ ದಾಟಿಬಿಟ್ಟರೆ ಬಿಕ್ಕಟ್ಟಿನ ಪರಿಸ್ಥಿತಿ ತಲೆದೋರುತ್ತದೆ. ಈ ಮುಂದುವರಿದ ಬಿಕ್ಕಟ್ಟು ಇಡೀ ಜಗತ್ತಿನ ಬೆಳವಣಿಗೆಯನ್ನು ಕಿತ್ತು ತಿನ್ನಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *