ದೇವನಹಳ್ಳಿ, ಏಪ್ರಿಲ್ 21: ಪದೇಪದೆ ಸ್ಲೀಪರ್ ಕೋಚ್ ಬಸ್ಗಳ ಅಪಘಾತ ಹಿನ್ನೆಲೆ ಬೆಳ್ಳಂಬೆಳಗ್ಗೆ ದೇವನಹಳ್ಳಿ ಆರ್ಟಿಒ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ, ಖಾಸಗಿ ಸ್ಲೀಪರ್ ಕೋಚ್ ಬಸ್ಗಳ ಪಾರ್ಟಿಶನ್ ಡೋರ್ ತೆರವು ಮಾಡಿದ್ದಾರೆ. ದೇವನಹಳ್ಳಿ ಪಟ್ಟಣದ ರಾಣಿ ಕ್ರಾಸ್ ಬಳಿ ಬಸ್ಗಳನ್ನು ನಿಲ್ಲಿಸಿ ತೆರವು ಕಾರ್ಯ ನಡೆಸಲಾಗಿದೆ. ಹೈದರಾಬಾದ್ನಿಂದ ಬೆಂಗಳೂರಿಗೆ ಬರುತ್ತಿದ್ದ ಸ್ಲೀಪರ್ ಕೋಚ್ ಬಸ್ಗಳನ್ನು ನಡೆದಿರುವ ಅಧಿಕಾರಿಗಳು, ಬಸ್ ಡ್ರೈವರ್ ಮತ್ತು ಪ್ಯಾಸೆಂಜರ್ಗಳ ನಡುವಿನ ಡೋರ್ ತೆರವು ಮಾಡಿದ್ದಾರೆ.8 ಬಸ್ಗಳ ಡೋರ್ ಬಿಚ್ಚಿಸಿ ಸೀಜ್ ಮಾಡಲಾಗಿದೆ. ದೇವನಹಳ್ಳಿ ಆರ್ಟಿಒ ಸುಧೀರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.