ಬೇಲೂರು ಚನ್ನಕೇಶವಸ್ವಾಮಿ ದೇಗಲದ ಹುಂಡಿ ಎಣಿಕೆ ವೇಳೆ 1.98 ಲಕ್ಷ ರೂ. ಜಾಕೆಟ್ ಒಳಗೆ ಇಳಿಸಿ ಎಗರಿಸಿ ಸಿಕ್ಕಿಬಿದ್ದ ಆಸಾಮಿ – Kannada News | Belur Chennakeshava Temple: Man Caught Stealing Rs 1.98 Lakh During Hundi Counting

ಹಾಸನ, ಜುಲೈ 10: ಒಂದೆಡೆ ಅಯೋಧ್ಯೆಯ ದೇಣಿಗೆ ವಿಚಾರ ದೇಶದಾದ್ಯಂತ ಸದ್ದು ಮಾಡಿದ್ದರೆ, ಇತ್ತ ಕರ್ನಾಟಕದ ಕೊಪ್ಪಳದಲ್ಲಿ ಅಂಜನಾದ್ರಿಯ ಹುಂಡಿ ಹಣ ಎಣಿಕೆ ಮಾಹಿತಿ ನೀಡಲು ವಿಳಂಬ ಮಾಡಿರುವುದು ಚರ್ಚೆಗೆ ಗ್ರಾಸವಾಗಿತ್ತು. ಇದೆಲ್ಲದರ ಮಧ್ಯೆ, ಹಾಸನ ಜಿಲ್ಲೆಯ ಬೇಲೂರು ಪಟ್ಟಣದ ಐತಿಹಾಸಿಕ ಚನ್ನಕೇಶವ ಸ್ವಾಮಿ ದೇವಾಲಯದ ಹುಂಡಿ ಎಣಿಕೆ ವೇಳೆ ವ್ಯಕ್ತಿಯೊಬ್ಬ 1,98,000 ರೂಪಾಯಿ ಹಣವನ್ನು ಜರ್ಕಿನ್ ಒಳಗೆ ಹಾಕಿ ಎಗರಿಸಿದ ಘಟನೆ ನಡೆದಿದೆ.

ವಿಶೇಷವೆಂದರೆ, ಹುಂಡಿ ಎಣಿಕೆ ಕಾರ್ಯದ ವಿಡಿಯೋ ಗ್ರಾಫಿಗಾಗಿ ಬಂದಿದ್ದ ವ್ಯಕ್ತಿಯೇ ಕೃತ್ಯ ಎಸಗಿದ್ದಾನೆ. ಕರ್ನಾಟಕ ಒನ್ ಕೇಂದ್ರದ ಮಾಲೀಕ ನೀಲಕಂಠ ಎಂಬಾತ ಹುಂಡಿ ಎಣಿಕೆಯ ವಿಡಿಯೋ ಮಾಡಲು ಬಂದಿದ್ದ. ಈತನ ನಡೆಯ ಬಗ್ಗೆ ಅನುಮಾನಗೊಂಡ ಮುಜರಾಯಿ ಇಲಾಖೆ ಸಿಬ್ಬಂದಿ ಸಿಸಿಟಿವಿ ಕ್ಯಾಮೆರಾ ದೃಶ್ಯಗಳನ್ನು ಪರಿಶೀಲಿಸಿದಾಗ ವಿಚಾರ ಬೆಳಕಿಗೆ ಬಂದಿದೆ. ಈ ಬಗ್ಗೆ ತಹಶೀಲ್ದಾರ್ ಶ್ರೀಧರ್ ಕಂಕನವಾಡಿ ಬೇಲೂರು ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಆರೋಪಿಯನ್ನು ಅವರು ವಶಕ್ಕೆ ಪಡೆದಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *