Headlines

ಬೇಸಿಗೆ ಧಗೆ ಹೆಚ್ಚಾಗುತ್ತಿದ್ದಂತೆ ಬಿಯರ್‌ಗೆ ಭಾರಿ ಡಿಮ್ಯಾಂಡ್: ಚಿಲ್ ಬಿಯರ್​​ ಮೊರೆ ಹೋಗುತ್ತಿರುವ ಮದ್ಯಪ್ರಿಯರು

ಬೇಸಿಗೆ ಧಗೆ ಹೆಚ್ಚಾಗುತ್ತಿದ್ದಂತೆ ಬಿಯರ್‌ಗೆ ಭಾರಿ ಡಿಮ್ಯಾಂಡ್: ಚಿಲ್ ಬಿಯರ್​​ ಮೊರೆ ಹೋಗುತ್ತಿರುವ ಮದ್ಯಪ್ರಿಯರು

ಕೋಲಾರ, ಏಪ್ರಿಲ್​ 26: ಜಿಲ್ಲೆಯಲ್ಲಿ ತಾಪಮಾನ ಏರಿಕೆಯಾಗುತ್ತಿದ್ದಂತೆಯೇ ಮದ್ಯದ ಅಂಗಡಿಗಳಲ್ಲಿ ಮಾರಾಟದ ಚಿತ್ರಣ ಸಂಪೂರ್ಣ ಬದಲಾಗಿದೆ. ಕಡು ಬಿಸಿಲಿನಿಂದಾಗಿ ರಮ್ ಮತ್ತು ಬ್ರಾಂದಿಗಿಂತಲೂ ಮದ್ಯಪ್ರಿಯರು ಚಿಲ್ ಆಗಿರುವ ಬಿಯರ್ ಮೊರೆ ಹೋಗುತ್ತಿದ್ದಾರೆ. ಸಾಮಾನ್ಯ ದಿನಗಳಿಗೆ ಹೋಲಿಸಿದರೆ ಕಳೆದ ಕೆಲವು ವಾರಗಳಿಂದ ಬಿಯರ್ ಮಾರಾಟದಲ್ಲಿ ಶೇ 20 ರಿಂದ 25 ರಷ್ಟು ಗಣನೀಯ ಏರಿಕೆ ಕಂಡುಬಂದಿದೆ. ತಾಪಮಾನ ಏರಿಕೆಯಿಂದಾಗಿ ಬಿಯರ್ ಕುಡಿಯಲು ಜನರು ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ. ಆದರೆ ಬೇಡಿಕೆಗೆ ತಕ್ಕಂತೆ ಬಿಯರ್ ಸರಬರಾಜು ಆಗದೆ ಬಾರ್ ಮಾಲೀಕರು ಬೇಸರಗೊಂಡಿದ್ದಾರೆ. ಒಂದೆಡೆ ಬಿಯರ್ ಅಬ್ಬರ ಜೋರಾಗಿದ್ದರೆ, ಮತ್ತೊಂದೆಡೆ ರಮ್ ಮತ್ತು ಬ್ರಾಂಡಿ ವ್ಯಾಪಾರದಲ್ಲಿ ಕುಸಿತ ಕಂಡುಬಂದಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

Leave a Reply

Your email address will not be published. Required fields are marked *