ಭರವಸೆ ಮೂಡಿಸಿದ ಅಮೆರಿಕ-ಇರಾನ್ ಡೀಲ್; ಗರಿಗೆದರಿದ ಷೇರುಬಜಾರು – Kannada News | Stock Market rising today on May 25th, know the reasons behind this rise

ನವದೆಹಲಿ, ಮೇ 25: ಭಾರತದ ಷೇರು ಮಾರುಕಟ್ಟೆ (Stock Market) ಇವತ್ತು ಸೋಮವಾರ ಚೇತರಿಸಿಕೊಂಡಿದೆ. ಪ್ರಮುಖ ಸೂಚ್ಯಂಕಗಳಾದ ನಿಫ್ಟಿ50 ಮತ್ತು ಸೆನ್ಸೆಕ್ಸ್30 ಇದು ಶೇ. 1ರಿಂದ ಶೇ. 1.20ರಷ್ಟು ಹೆಚ್ಚಳ ಕಂಡಿವೆ. ಹೂಡಿಕೆದಾರರಿಗೆ 5 ಲಕ್ಷ ಕೋಟಿ ರೂ ಗಳಿಕೆ ಆಗಿದೆ. ನಿಫ್ಟಿ ಸೂಚ್ಯಂಕ 240 ಅಂಕಗಳ (ಶೇ. 1.02) ಹೆಚ್ಚಳದೊಂದಿಗೆ 23,959 ಮಟ್ಟಕ್ಕೆ ಏರಿದೆ. ಸೆನ್ಸೆಕ್ಸ್ 863 ಅಂಕಗಳ ಏರಿಕೆಯೊಂದಿಗೆ 76,279 ಮಟ್ಟ ಮುಟ್ಟಿದೆ. ಬಿಎಸ್​ಇ ಮತ್ತು ಎನ್​ಎಸ್​ಇಯಲ್ಲಿರುವ ಬಹುತೇಕ ಎಲ್ಲಾ ಸೂಚ್ಯಂಕಗಳೂ ಕೂಡ ಹಸಿರುಬಣ್ಣದಲ್ಲಿವೆ. ಷೇರು ಬಜಾರು ಇವತ್ತು ಸೋಮವಾರ ಗರಿಗೆದರಲು ಪ್ರಮುಖ ಕಾರಣಗಳೇನು?

ಅಮೆರಿಕ ಇರಾನ್ ಒಪ್ಪಂದ ಏರ್ಪಡುವ ನಿರೀಕ್ಷೆ

ಅಮೆರಿಕ ಮತ್ತು ಇರಾನ್ ದೇಶಗಳು ಒಂದು ಸರ್ವಸಮ್ಮತವಾದ ಒಪ್ಪಂದಕ್ಕೆ ಬರುವ ಸಾಧ್ಯತೆ ದಟ್ಟವಾಗಿದೆ. ಈಗಾಗಲೇ ಮೂರು ತಿಂಗಳ ಸಂಘರ್ಷದಿಂದ ಇಡೀ ಜಗತ್ತು ನಲುಗಿ ಹೋಗಿದೆ. ಅದರಲ್ಲೂ ಭಾರತಕ್ಕೆ ದೊಡ್ಡ ಹೊಡೆತವನ್ನೇ ಕೊಟ್ಟಿದೆ. ಹೀಗಾಗಿ, ಸಂಘರ್ಷ ಕೊನೆಗೊಳ್ಳುವ ನಿರೀಕ್ಷೆಯು ಹೂಡಿಕೆದಾರರಿಗೆ ಸಮಾಧಾನ ಕೊಟ್ಟಿರಬಹುದು.

ಇದನ್ನೂ ಓದಿ: ಮೊದಲ ಬಾರಿ ಇನ್ವೆಸ್ಟ್​ಮೆಂಟ್​ಗೆ ಪ್ರಯತ್ನಿಸುತ್ತಿದ್ದೀರಾ? ಹೇಗೆ ಆರಂಭಿಸೋದು, ಎಲ್ಲಿ ಹೂಡಿಕೆ ಮಾಡೋದು? ಇಲ್ಲಿದೆ ಟಿಪ್ಸ್

ಕಚ್ಚಾ ತೈಲ ಬೆಲೆ 100 ಡಾಲರ್​ನೊಳಗೆ

ಅಮೆರಿಕ ಇರಾನ್ ಮಧ್ಯೆ ಒಪ್ಪಂದ ಏರ್ಪಡುವ ಸಾಧ್ಯತೆಯು ಕಚ್ಚಾ ತೈಲ ಬೆಲೆ ಇಳಿಕೆಗೆ ದಾರಿ ಮಾಡಿಕೊಟ್ಟಿದೆ. ಬ್ರೆಂಟ್ ಕ್ರೂಡ್ ಫ್ಯೂಚರ್ಸ್ ಶೇ. 4.6ರಷ್ಟು ತಗ್ಗಿ 98.8 ಡಾಲರ್​ಗೆ ಇಳಿದಿದೆ.

ಆರ್​ಬಿಐನಿಂದ ಭರ್ಜರಿ ಡಿವಿಡೆಂಡ್

ಭಾರತೀಯ ರಿಸರ್ವ್ ಬ್ಯಾಂಕ್ ಮೊನ್ನೆ ಸರ್ಕಾರಕ್ಕೆ ಭರ್ಜರಿ ಡಿವಿಡೆಂಡ್ ಪ್ರಕಟಿಸಿದೆ. 2025-26ರ ವರ್ಷದಲ್ಲಿ ಆರ್ಬಿಐನಿಂದ ಸರ್ಕಾರಕ್ಕೆ 2.87 ಲಕ್ಷ ಕೋಟಿ ರೂ ಲಾಭಾಂಶ ಸಂದಾಯವಾಗಲಿದೆ. ಇದು ಅದರ ಇತಿಹಾಸದಲ್ಲೇ ಯಾವುದೇ ವರ್ಷದಲ್ಲಿ ಸರ್ಕಾರಕ್ಕೆ ನೀಡಲಾಗಿರುವ ಅತಿದೊಡ್ಡ ಡಿವಿಡೆಂಡ್ ಮೊತ್ತ. ಆರ್ಥಿಕವಾಗಿ ಒತ್ತಡದಲ್ಲಿರುವ ಭಾರತಕ್ಕೆ ಈ ಡಿವಿಡೆಂಡ್ ಬಹಳ ಸಹಾಯಕ್ಕೆ ಬರುವ ನಿರೀಕ್ಷೆ ಇದೆ.

ಇದನ್ನೂ ಓದಿ: ಭಾರತದ ಸ್ಟುಡೆಂಟ್ ಸ್ಟಾರ್ಟ್‌ಅಪ್‌ಗಳಲ್ಲಿ ಡೀಪ್-ಟೆಕ್ ಕ್ರಾಂತಿ: ಕ್ಯಾಂಪಸ್ ಫಂಡ್ ವರದಿ

ಡಾಲರ್ ಎದುರು ರುಪಾಯಿ ಚೇತರಿಕೆ

ಅಮೆರಿಕದ ಡಾಲರ್ ಎದುರು ರುಪಾಯಿ ಚೇತರಿಸಿಕೊಳ್ಳುತ್ತಿರುವುದೂ ಕೂಡ ಷೇರು ಪೇಟೆ ಉಬ್ಬಲು ಒಂದು ಕಾರಣ. ಕಳೆದ ವಾರ 96 ದಾಟಿ 97 ರ ಸಮೀಪಕ್ಕೆ ಹೋಗಿದ್ದ ರುಪಾಯಿ ಇದೀಗ 95.20ಗೆ ಬಂದಿದೆ. ಹಾಗೆಯೇ, ಭಯದ ಸೂಚಿಯಾಗಿರುವ ವಿಐಎಕ್ಸ್ ಕೂಡ ಕಡಿಮೆ ಆಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *