ಜಿಂಬಾಬ್ವೆ ವಿದ್ಯಾರ್ಥಿ ಕಲುಂಬಾ ಮ್ವಾಲೆImage Credit source: Instagram @kalumba_mwale
ನವದೆಹಲಿ, ಆಗಸ್ಟ್ 18: ಭಾರತದಲ್ಲಿ ವಾಸಿಸುತ್ತಿರುವ ಜಿಂಬಾಬ್ವೆಯ ವಿದ್ಯಾರ್ಥಿ ಕಲುಂಬಾ ಮ್ವಾಲೆ (Kalumba Mwale) ಎಂಬ ಯುವಕ, ತಮ್ಮ ದೇಶ ಮತ್ತು ಭಾರತದ ನಡುವಿನ ವ್ಯತ್ಯಾಸಗಳನ್ನು ಹಾಗೂ ಭಾರತದಲ್ಲಿನ ತಮ್ಮ ಅನುಭವಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದು, ಈ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಭಾರತದ ಬಗ್ಗೆ ತಾನು ಏನೋ ನಿರೀಕ್ಷೆಯಲ್ಲಿ ಬಂದಿದ್ದೆ. ಇಲ್ಲಿಗೆ ಬಂದ ಬಳಿಕ ಬೇರೆಯೇ ಪ್ರಪಂಚ ಕಾಣುತ್ತಿದೆ ಎಂದು ಕಲುಂಬಾ ಅವರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಜಿಂಬಾಬ್ವೆಯಲ್ಲಿ ವಿಶ್ವವಿದ್ಯಾಲಯಗಳಿಗೆ ಪ್ರವೇಶ ಪಡೆಯುವುದು ಬಹಳ ಕಠಿಣ. ಆದರೆ ಭಾರತದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಕೈಗೆಟುಕುವ ವೆಚ್ಚದ ನೂರಾರು ಕಾಲೇಜುಗಳಿವೆ. ಸಾಮಾನ್ಯವಾಗಿ ವಿದೇಶಿ ಶಿಕ್ಷಣಕ್ಕೆ ಜನರು ಅಮೆರಿಕ, ಬ್ರಿಟನ್, ಕೆನಡಾ ಮುಂತಾದ ಪಾಶ್ಚಿಮಾತ್ಯ ದೇಶಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಆದರೆ ಜಗತ್ತಿನ ಹಲವು ದೇಶಗಳ ವಿದ್ಯಾರ್ಥಿಗಳು ಭಾರತಕ್ಕೆ ಬಂದು ವ್ಯಾಸಂಗ ಮಾಡುತ್ತಿರುವುದು ತನಗೆ ಆಶ್ಚರ್ಯ ತಂದಿದೆ ಎಂದು ಈ ವಿದೇಶಿ ವಿದ್ಯಾರ್ಥಿ ಹೇಳಿದ್ದಾರೆ.
ಇದನ್ನೂ ಓದಿ: Video: ದಯವಿಟ್ಟು ಭಾರತಕ್ಕೆ ಹೋಗಬೇಡಿ; ವಿದೇಶಿ ಮಹಿಳೆ ಹೀಗೆನ್ನಲು ನೀಡಿದ ಕಾರಣ ನೋಡಿ
ಜಿಂಬಾಬ್ವೆಯಲ್ಲಿ ಗುಣಮಟ್ಟದ ವೈದ್ಯಕೀಯ ಚಿಕಿತ್ಸೆ ದುಬಾರಿ…
ಜಿಂಬಾಬ್ವೆಯಲ್ಲಿ ಅತ್ಯಾಧುನಿಕ ಹಾಗೂ ವಿಶೇಷ ವೈದ್ಯಕೀಯ ಚಿಕಿತ್ಸೆಗಳು ದುಬಾರಿ ಅಥವಾ ಸೀಮಿತವಾಗಿವೆ. ಆದರೆ ಭಾರತವು ಉತ್ತಮ ಗುಣಮಟ್ಟದ ವೈದ್ಯಕೀಯ ಚಿಕಿತ್ಸೆಗೆ ಪ್ರಪಂಚದಲ್ಲೇ ಪ್ರಮುಖ ಕೇಂದ್ರವಾಗಿ ಹೊರಹೊಮ್ಮಿದೆ ಎಂದು ಅವರು ಮೆಚ್ಚುಗೆ ಪಟ್ಟಿದ್ದಾರೆ.
ಭಾರತದ್ದು ಅದ್ಬುತ ಆಹಾರ ಮತ್ತು ಸಂಸ್ಕೃತಿ
ಜಿಂಬಾಬ್ವೆಯಲ್ಲಿ ‘ಸಡ್ಜಾ’ (Sadza), ಅನ್ನ ಸಾಮಾನ್ಯವಾಗಿ ತಿನ್ನುವ ಆಹಾರ. ಆಹಾರಕ್ಕೆ ಸ್ಪೈಸಿ ಬೇಕೆಂದರೆ ಹೆಚ್ಚು ಮೆಣಸಿನಕಾಯಿ ಹಾಕಲಾಗುತ್ತದೆ. ಆದರೆ ಭಾರತದಲ್ಲಿ ದಿನಕ್ಕೊಂದು ಹೊಸ ಬಗೆಯ ಖಾದ್ಯ ಸವಿಯಬಹುದು. ಇಲ್ಲಿ ಆಹಾರಕ್ಕೆ ಬಳಸುವ ಸಾಂಬಾರ ಪದಾರ್ಥಗಳ ವೈವಿಧ್ಯತೆ ಅದ್ಭುತವಾಗಿದೆ ಎಂದು ಅವರು ವರ್ಣಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್
ಈ ವೀಡಿಯೊ 53 ಲಕ್ಷಕ್ಕೂ (5.3 Million) ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಸಾವಿರಾರು ನೆಟ್ಟಿಗರು ಕಮೆಂಟ್ ಮೂಲಕ ಭಾರತಕ್ಕೆ ಅವರನ್ನು ಪ್ರೀತಿಯಿಂದ ಸ್ವಾಗತಿಸಿದ್ದಾರೆ. ಭಾರತದಲ್ಲಿ ಕೇವಲ ಪಾಶ್ಚಿಮಾತ್ಯ ದೇಶಗಳಿಗಿಂತಲೂ ಮಿಗಿಲಾದ ಜಾಗತಿಕ ಮಟ್ಟದ ಶಿಕ್ಷಣ ಮತ್ತು ಅವಕಾಶಗಳಿವೆ ಎಂಬುದು ಇಲ್ಲಿಗೆ ಬಂದ ಮೇಲೆಯೇ ನನಗೆ ತಿಳಿಯಿತು ಎಂದು ಮ್ವಾಲೆ ತಮ್ಮ ಅನುಭವ ಹಂಚಿಕೊಂಡಿದ್ದಾರೆ.
ಜಿಂಬಾಬ್ವೆ ವಿದ್ಯಾರ್ಥಿಯ ಪೋಸ್ಟ್
ಇದನ್ನೂ ಓದಿ: Video: ತನ್ನ ಜತೆಗೆ ವಾಕಿಂಗ್‌ಗೆ ಬಂದ ಶ್ವಾನವನ್ನು ಮನೆಗೆ ಕರೆದೊಯ್ಯಲು ಹರಸಾಹಸ ಪಟ್ಟ ಯುವಕ
ಜಿಂಬಾಬ್ವೆಯ ಈ ವಿದ್ಯಾರ್ಥಿಯಾದ ಕಲುಂಬಾ ಮ್ವಾಲೆ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಿಂದ ಹಲವಾರು ಪೋಸ್ಟ್ಗಳನ್ನು ಹಾಕಿದ್ದು, ಹೆಚ್ಚಿನವು ಭಾರತದ ಬಗ್ಗೆ ಈತನಿಗಿರುವ ಗೌರವ ಮತ್ತು ಆದರವನ್ನು ತೋರಿಸುತ್ತವೆ. ತಮ್ಮ ದೇಶದಲ್ಲಿ ಭಾರತೀಯರ ಮೇಲೆ ಸ್ಥಳೀಯರು ತೋರುವ ಜನಾಂಗೀಯ ದ್ವೇಷವನ್ನು ಬಿಡಬೇಕೆಂದೂ ಈತ ತನ್ನ ಒಂದು ಪೋಸ್ಟ್ನಲ್ಲಿ ಕೇಳಿಕೊಂಡಿದ್ದಾರೆ. ಆತನ ಇನ್ಸ್ಟಾ ಅಕೌಂಟ್ನ ಲಿಂಕ್ ಇಲ್ಲಿದೆ: instagram.com/kalumba_mwale/
ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
