ಭಾರತದಲ್ಲಿ ಹಣದುಬ್ಬರಕ್ಕೆ ಹೊಸ ಸ್ವರೂಪ; ಮೂಲ ವರ್ಷ ಬದಲಾವಣೆ; ಜನವರಿಯಲ್ಲಿ ಶೇ. 2.8 ಇನ್​ಫ್ಲೇಶನ್ ದಾಖಲು – Kannada News | Retail inflation at 2.8pc in January 2026, based on new CPI series with 2024 as base year

ನವದೆಹಲಿ, ಫೆಬ್ರುವರಿ 13: ಭಾರತದ ರೀಟೇಲ್ ಹಣದುಬ್ಬರ (Retail Inflation) ಜನವರಿಯಲ್ಲಿ ಶೇ. 2.8 ಎಂದು ದಾಖಲಾಗಿದೆ. ಬದಲಾವಣೆ ಮಾಡಲಾದ ಮಾನಕದ ಪ್ರಕಾರ ಹಣದುಬ್ಬರ ಲೆಕ್ಕಾಚಾರ ಮಾಡಲಾಗಿದೆ. ಮೂಲ ವರ್ಷ ಅಥವಾ ಬೇಸ್ ವರ್ಷವನ್ನು 2012ರಿಂದ 2024ಕ್ಕೆ ಬದಲಾಯಿಸಲಾಗಿದೆ. 2023-24ರ ಗೃಹ ಅನುಭೋಗ ಸಮೀಕ್ಷೆಯ ದತ್ತಾಂಶವನ್ನು ಬಳಸಿ ದೇಶಾದ್ಯಂತ ಅನುಭೋಗ ಮಾದರಿ (consumption pattern) ಆಗಿರುವ ಬದಲಾವಣೆಯನ್ನು ಗುರುತಿಸಲಾಗಿದೆ. ಹಣದುಬ್ಬರ ಲೆಕ್ಕಾಚಾರ ಪಟ್ಟಿಯಲ್ಲಿರುವ ಸರಕುಗಳಿಗೆ ಹೊಸ ಸೇರ್ಪಡೆ ಮತ್ತು ವೈಟೇಜ್ ಅನ್ನು ಕೊಡಲಾಗಿದೆ. ಆಹಾರಕ್ಕಿರುವ ವೈಟೇಜ್ ಅನ್ನು ಕಡಿಮೆ ಮಾಡಲಾಗಿದೆ. ಹೀಗೆ ವಿವಿಧ ಮಾನಕ ಬದಲಾವಣೆಗಳೊಂದಿಗೆ ದಾಖಲಾಗಿರುವ ಜನವರಿಯ ಹಣದುಬ್ಬರ ಹೆಚ್ಚು ನಿಖರ ಎಂದು ನಂಬಲಾಗಿದೆ.

ಒಟ್ಟಾರೆ ಗ್ರಾಹಕ ಬೆಲೆ ಅನುಸೂಚಿ ಆಧಾರಿತವಾದ ರೀಟೇಲ್ ಹಣದುಬ್ಬರ ಡಿಸೆಂಬರ್ ತಿಂಗಳಲ್ಲಿ 1.3 ಇತ್ತು. ಅದು 2012 ಅನ್ನು ಬೇಸ್ ಇಯರ್ ಆಗಿಸಿಕೊಂಡ ಹಳೆಯ ಸರಣಿಯ ಪ್ರಕಾರ ಲೆಕ್ಕಾಚಾರ ಮಾಡಲಾದ ಹಣದುಬ್ಬರ ದರವಾಗಿತ್ತು. ಜನವರಿಯಲ್ಲಿ ಹೊಸ ಸರಣಿಯ ಲೆಕ್ಕಾಚಾರ ನಡೆದಿದೆ. ಅದರ ಪ್ರಕಾರ, ಹಣದುಬ್ಬರ ಶೇ. 2.8 ಎಂದಿದೆ. ಇದರಲ್ಲಿ ಆಹಾರ ಹಣದುಬ್ಬರ ಶೇ. 2.1 ಇದೆ. ಗ್ರಾಮೀಣ ಹಣದುಬ್ಬರ ಶೇ. 2.7 ಇದ್ದರೆ, ನಗರದ ಹಣದುಬ್ಬರ ಶೇ. 2.8 ಇದೆ.

ಇದನ್ನೂ ಓದಿ: ಹೊಸ ಆದಾಯ ತೆರಿಗೆ ಕಾಯ್ದೆಯಲ್ಲಿ ಪ್ಯಾನ್ ನಿಯಮಗಳ ಬದಲಾವಣೆ ಗಮನಿಸಿ…

ಒಡವೆಗಳ ಬೆಲೆಯಲ್ಲಿ ಭರ್ಜರಿ ಏರಿಕೆ..

ಚಿನ್ನ, ಬೆಳ್ಳಿ ಒಡವೆ, ಪರ್ಸನಲ್ ಕೇರ್, ಸಾಮಾಜಿಕ ರಕ್ಷಣೆ ಮತ್ತಿತರ ಸರಕುಗಳ ಬೆಲೆ ಏರಿಕೆ ಶೇ. 19 ಇರಬಹುದು ಎಂದು ಲೆಕ್ಕಾಚಾರ ಹಾಕಲಾಗಿದೆ. ಇದರಲ್ಲಿ ಬೆಳ್ಳಿ ಒಡವೆಯ ಹಣದುಬ್ಬರವೇ ಜನವರಿಯಲ್ಲಿ ಶೇ. 160 ಇದೆ.

ಬೆಳ್ಳಿ ಒಡವೆ, ಟೊಮೆಟೋ, ಕೊಬ್ಬರಿ, ಚಿನ್ನದ ಒಡವೆ, ಕೊಬ್ಬರಿ ಎಣ್ಣೆ ಬೆಲೆಗಳಲ್ಲಿ ಭರ್ಜರಿ ಏರಿಕೆ ಆಗಿದ್ದು ಜನವರಿಯಲ್ಲಿ ಹಣದುಬ್ಬರ ಹೆಚ್ಚಲು ಪ್ರಮುಖ ಕಾರಣವಾಗಿವೆ.

ಬೆಳ್ಳುಳ್ಳಿ, ಈರುಳ್ಳಿ, ಆಲೂಗಡ್ಡೆ, ಬಟಾಣಿ ಸೇರಿದಂತೆ ತರಕಾರಿಗಳ ಬೆಲೆ ಕಡಿಮೆಗೊಂಡಿದ್ದು ಹಣದುಬ್ಬರ ಮಿತಿಮೀರಿ ಹೋಗದಂತೆ ನಿಯಂತ್ರಣಗೊಂಡಿದೆ.

ತಂಬಾಕು, ರೆಸ್ಟೋರೆಂಟ್, ಹೋಟೆಲ್, ಉಡುಗೆ ತೊಡುಗೆ, ಶಿಕ್ಷಣ ಕ್ಷೇತ್ರಗಳಲ್ಲಿ ಹಣದುಬ್ಬರವು ಶೇ. 2.8ಕ್ಕಿಂತಲೂ ಹೆಚ್ಚಿದೆ.

ಹೊಸ ಸಿಪಿಐ ಸರಣಿಯಲ್ಲಿ ಬದಲಾವಣೆಗಳೇನು?

  • ಮೂಲ ವರ್ಷ 2012ರಿಂದ 2024ಕ್ಕೆ ಬದಲಾವಣೆ
  • ಸಿಪಿಐ ಸರಣಿಯಲ್ಲಿ ಗಣನೆಯಲ್ಲಿರುವ ಅಂಶಗಳ ಸಂಖ್ಯೆ 299ರಿಂದ 358ಕ್ಕೆ ಏರಿಕೆ.
  • ಸರಕುಗಳ ಸಂಖ್ಯೆ 259ರಿಂದ 308ಕ್ಕೆ ಏರಿಕೆ. ಸರ್ವಿಸ್ ಅಂಶಗಳು 40ರಿಂದ 50ಕ್ಕೆ ಏರಿಕೆ.

ಇದನ್ನೂ ಓದಿ: ಹೂಡಿಕೆಗಳು ಎತ್ತ..? ಕುಗ್ಗಿದ ಈಕ್ವಿಟಿ ಮ್ಯೂಚುವಲ್ ಫಂಡ್​ಗಳು; ಹಿಗ್ಗಿದ ಗೋಲ್ಡ್ ಇಟಿಎಫ್​ಗಳು

ಸಿಪಿಐ ಸರಣಿಗೆ ಹೊಸದಾಗಿ ಸೇರ್ಪಡೆಯಾದ ಅಂಶಗಳಿವು…

ಗ್ರಾಮೀಣ ವಸತಿ, ಆನ್ಲೈನ್ ಮೀಡಿಯಾ ಸರ್ವಿಸ್ ಪ್ರೊವೈಡರ್, ಸ್ಟ್ರೀಮಿಂಗ್ ಸರ್ವಿಸ್, ಮೌಲ್ಯ ವರ್ಧಿತ ಡೈರಿ ಉತ್ಪನ್ನಗಳು, ಬಾರ್ಲೆ ಉತ್ಪನ್ನಗಳು, ಪೆನ್ ಡ್​ರೈವ್, ಬಾಹ್ಯ ಹಾರ್ಡ್ ಡಿಸ್ಕ್, ಅಟೆಂಡೆಂಟ್, ಬೇಬಿಸಿಟ್ಟರ್, ವ್ಯಾಯಾಮ ಉಪಕರಣ ಮೊದಲಾದವು.

ಗಣನೆಯಿಂದ ಕೈಬಿಡಲಾದ ವಸ್ತುಗಳು

ವಿಸಿಆರ್, ವಿಸಿಡಿ, ಡಿವಿಡಿ ಪ್ಲೇಯರ್​ಗಳು, ರೇಡಿಯೋ, ಟೇಪ್ ರೆಕಾರ್ಡರ್, ಸೆಕೆಂಟ್ ಹ್ಯಾಂಡ್ ಬಟ್ಟೆ, ಕ್ಯಾಸೆಟ್, ಹಗ್ಗ ಇತ್ಯಾದಿ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *