
ನವದೆಹಲಿ, ಮಾರ್ಚ್ 20: ಭಾರತದಲ್ಲಿ ಒಟ್ಟು 8,400 ಅಕ್ರಮ ವೆಬ್ಸೈಟ್ಗಳನ್ನು ನಿರ್ಬಂಧಿಸಿರುವ ಕೇಂದ್ರ ಸರ್ಕಾರ ಆನ್ಲೈನ್ ಗೇಮಿಂಗ್ ಕಾಯ್ದೆ ಜಾರಿಗೆ ಬಂದ ನಂತರ ಸುಮಾರು 4,900 ಸೈಟ್ಗಳ ಮೇಲೆ ಕ್ರಮ ತೆಗೆದುಕೊಂಡಿದೆ. ಕೇಂದ್ರ ಸರ್ಕಾರ ಅಕ್ರಮ ಬೆಟ್ಟಿಂಗ್ (Illegal Betting) ಮೇಲೆ ಕಠಿಣ ಕ್ರಮ ಕೈಗೊಂಡಿದೆ. ಹಾಗೇ, 300 ವೆಬ್ಸೈಟ್ಗಳು ಮತ್ತು ಆನ್ಲೈನ್ ಗೇಮಿಂಗ್ ಅಪ್ಲಿಕೇಶನ್ಗಳನ್ನು (Online Gaming Apps) ನಿರ್ಬಂಧಿಸಿದೆ.
ಕೇಂದ್ರ ಸರ್ಕಾರವು ಅಕ್ರಮ ಆನ್ಲೈನ್ ಜೂಜು ಮತ್ತು ಬೆಟ್ಟಿಂಗ್ ಪ್ಲಾಟ್ಫಾರ್ಮ್ಗಳ ಮೇಲಿನ ಕಠಿಣ ಕ್ರಮವನ್ನು ತೀವ್ರಗೊಳಿಸಿದೆ. ಆನ್ಲೈನ್ ಕ್ರೀಡಾ ಬೆಟ್ಟಿಂಗ್, ಕ್ಯಾಸಿನೊ-ಶೈಲಿಯ ಗೇಮಿಂಗ್ ಮತ್ತು ಪೀರ್-ಟು-ಪೀರ್ ಬೆಟ್ಟಿಂಗ್, ಓಲ್ಡ್ ಸ್ಕೂಲ್ ಸತ್ತಾ ಆ್ಯಂಡ್ ಮಟ್ಕಾ ನೆಟ್ವರ್ಕ್, ಕ್ಯಾಸಿನೋ ಆ್ಯಪ್ ಸೇರಿದಂತೆ ವಿವಿಧ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿರುವ ಬೆಟ್ಟಿಂಗ್ ಪ್ಲಾಟ್ಫಾರ್ಮ್ಗಳ ಮೇಲೆ ಮೋದಿ ಸರ್ಕಾರ ಕಠಿಣ ಕ್ರಮ ಕೈಗೊಂಡಿದೆ.
ಇದನ್ನೂ ಓದಿ: ಬೆಟ್ಟಿಂಗ್ ಚಟಕ್ಕೆ ಬಿದ್ದು ತಂದೆ ಆಸ್ತಿ ಮಾರಿಸಿದ ಮಗ: ಆದರೂ ಬುದ್ಧಿ ಕಲಿಯದ ಇಂಜಿನಿಯರ್ ಕಳ್ಳನಾದ!
ಸರ್ಕಾರದ ಈ ಕ್ರಮವು ಆನ್ಲೈನ್ ಕ್ರೀಡಾ ಬೆಟ್ಟಿಂಗ್ ವೆಬ್ಸೈಟ್ಗಳು, ಸ್ಲಾಟ್ಗಳು, ರೂಲೆಟ್ ಮತ್ತು ಲೈವ್ ಡೀಲರ್ ಟೇಬಲ್ಗಳಂತಹ ಆಟಗಳನ್ನು ನೀಡುವ ವರ್ಚುವಲ್ ಕ್ಯಾಸಿನೊಗಳು ಮತ್ತು ಪೀರ್-ಟು-ಪೀರ್ ಮಾರುಕಟ್ಟೆಗಳಾಗಿ ಕಾರ್ಯನಿರ್ವಹಿಸುವ ಬೆಟ್ಟಿಂಗ್ ಎಕ್ಸ್ಚೇಂಜ್ಗಳು ಸೇರಿದಂತೆ ಹಲವಾರು ವರ್ಗಗಳ ಅಕ್ರಮ ಪ್ಲಾಟ್ಫಾರ್ಮ್ಗಳನ್ನು ಗುರಿಯಾಗಿಸಿಕೊಂಡಿದೆ. ಅಧಿಕಾರಿಗಳು ರಿಯಲ್-ಮನಿ ಕಾರ್ಡ್ ಮತ್ತು ಕ್ಯಾಸಿನೊ ಗೇಮಿಂಗ್ ಅಪ್ಲಿಕೇಶನ್ಗಳ ಜೊತೆಗೆ ಸತ್ತಾ ಮತ್ತು ಮಟ್ಕಾ ಜೂಜಿನ ನೆಟ್ವರ್ಕ್ಗಳ ವಿರುದ್ಧವೂ ಕ್ರಮ ಕೈಗೊಂಡಿದ್ದಾರೆ.
ಇದನ್ನೂ ಓದಿ: ಮಹಾದೇವ ಬೆಟ್ಟಿಂಗ್ ಆ್ಯಪ್ ಹಗರಣ, 2023ರಲ್ಲಿ ಬಂಧಿಸಲಾಗಿದ್ದ ಆರೋಪಿ ನಾಪತ್ತೆ, ಹಸ್ತಾಂತರಕ್ಕೆ ತಡೆ
ಅಧಿಕೃತ ಮಾಹಿತಿಯ ಪ್ರಕಾರ, ಕೇಂದ್ರ ಸರ್ಕಾರವು ಇಲ್ಲಿಯವರೆಗೆ ಸುಮಾರು 8,400 ಜೂಜು ಮತ್ತು ಬೆಟ್ಟಿಂಗ್ ವೆಬ್ಸೈಟ್ಗಳು ಮತ್ತು ಅಪ್ಲಿಕೇಶನ್ಗಳನ್ನು ನಿರ್ಬಂಧಿಸಿದೆ. ಇವುಗಳಲ್ಲಿ ಸುಮಾರು 4,900 ಪ್ಲಾಟ್ಫಾರ್ಮ್ಗಳನ್ನು ಆನ್ಲೈನ್ ಗೇಮಿಂಗ್ ಕಾಯ್ದೆ ಜಾರಿಗೆ ಬಂದ ನಂತರ ತೆಗೆದುಹಾಕಲಾಯಿತು. ಇದು ಡಿಜಿಟಲ್ ಗೇಮಿಂಗ್ ಮತ್ತು ಬೆಟ್ಟಿಂಗ್ ಚಟುವಟಿಕೆಗಳನ್ನು ನಿಯಂತ್ರಿಸಲು ಕಾನೂನು ಚೌಕಟ್ಟನ್ನು ಬಲಪಡಿಸಿತು.
ಈ ವರ್ಷದ ಜನವರಿಯ ಆರಂಭದಲ್ಲಿ ಕೇಂದ್ರ ಸರ್ಕಾರವು 242 ಅಕ್ರಮ ಬೆಟ್ಟಿಂಗ್ ಮತ್ತು ಜೂಜಾಟ ವೆಬ್ಸೈಟ್ ಲಿಂಕ್ಗಳನ್ನು ನಿರ್ಬಂಧಿಸಿತ್ತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ