ನವದೆಹಲಿ, ಫೆಬ್ರುವರಿ 22: ಪ್ರಧಾನಿ ನರೇಂದ್ರ ಮೋದಿ (Narendra Modi) ಇಂದು ಭಾನುವಾರ ಎರಡು ಮಹತ್ವದ ಇನ್ಫ್ರಾಸ್ಟ್ರಕ್ಚರ್ ಸೇವೆಗಳನ್ನು ಲೋಕಾರ್ಪಣೆ ಮಾಡಿದ್ದಾರೆ. ಉತ್ತರಪ್ರದೇಶದ ಮೀರತ್ ನಗರದಲ್ಲಿ ಮೆಟ್ರೋ ಸರ್ವಿಸ್ಗೆ (Meerut Metro) ಚಾಲನೆ ನೀಡಿದ್ದಾರೆ. ಹಾಗೆಯೇ, ದೆಹಲಿಯಿಂದ ಮೀರತ್ವರೆಗಿನ ರಾಪಿಡ್ ರೈಲ್ ಕಾರಿಡಾರ್ (Delhi Meerut Rapid Rail Corridor) ಅನ್ನೂ ಆರಂಭಿಸಿದ್ದಾರೆ. ದೆಹಲಿ-ಮೀರತ್ ರೈಲು ಕಾರಿಡಾರ್ನಲ್ಲಿರುವ ಶತಾಬ್ದಿ ನಗರ್ ನಿಲ್ದಾಣದಿಂದ ನಮೋ ಭಾರತ್ ಟ್ರೈನ್ಗೆ ಪಿಎಂ ಚಾಲನೆ ಕೊಟ್ಟಿದ್ದಾರೆ.
ಭಾರತದ ಅತಿವೇಗದ ಮೆಟ್ರೋ ಸಿಸ್ಟಂ
ಮೀರತ್ ಮೆಟ್ರೋದಲ್ಲಿ ಆಪರೇಷನಲ್ ಸ್ಪೀಡ್ 120 ಕಿಮೀ ಇದೆ. ಇದು ಭಾರತದ ಅತಿವೇಗದ ಮೆಟ್ರೋ ಸಿಸ್ಟಂ ಎನಿಸಿದೆ. ಇದು 23 ಕಿಮೀ ರೈಲ್ ನೆಟ್ವರ್ಕ್ ಹೊಂದಿದೆ. ಈ 23 ಕಿಮೀ ಕಾರಿಡಾರ್ನಲ್ಲಿ 16 ಕಿಮೀ ಎಲಿವೇಟೆಡ್ ಟ್ರ್ಯಾಕ್ ಆಗಿದೆ. ಉಳಿದ 7 ಕಿಮೀ ಟ್ರ್ಯಾಕ್ ಅಂಡರ್ಗ್ರೌಂಡ್ನಲ್ಲಿ ಸಾಗುತ್ತದೆ. ಈ ಕಾರಿಡಾರ್ನಲ್ಲಿ 21 ಕಿಮೀ ದೂರವನ್ನು ಕೇವಲ 30 ನಿಮಿಷದಲ್ಲಿ ಕ್ರಮಿಸಬಲ್ಲುದು ಮೆಟ್ರೋ ಟ್ರೈನುಗಳು.
ಇದನ್ನೂ ಓದಿ: ಎಂಟು ಮಂದಿ ಶಂಕಿತ ಉಗ್ರರ ಬಂಧನ; ಗಾರ್ಮೆಂಟ್ಸ್ ಫ್ಯಾಕ್ಟರಿ ಮತ್ತಿತರೆಡೆಯಲ್ಲಿ ಕೆಲಸ ಮಾಡುತ್ತಿದ್ದವರಿವರು
ಈ ಮೆಟ್ರೋ ಸಿಸ್ಟಂನಲ್ಲಿ 12 ಸ್ಟೇಷನ್ಗಳಿವೆ. ಪೀಕ್ ಅವರ್ನಲ್ಲಿ ಇಲ್ಲಿ ರೈಲುಗಳು 5ರಿಂದ 10 ನಿಮಿಷಗಳಿಗೊಮ್ಮೆ ಓಡುತ್ತವೆ. ಪೀಕ್ ಅಲ್ಲದ ಸಮಯಗಳಲ್ಲಿ 10ರಿಂದ 15 ನಿಮಿಷಕ್ಕೊಮ್ಮೆ ಟ್ರೈನುಗಳು ಆಪರೇಟ್ ಆಗುತ್ತವೆ.
ದೆಹಲಿ ಮೀರತ್ ನಮೋ ಭಾರತ್ ಕಾರಿಡಾರ್…
ದೆಹಲಿಯಿಂದ ಮೀರತ್ವರೆಗೆ 82 ಕಿಮೀ ನಮೋ ಭಾರತ್ ಕಾರಿಡಾರ್ ನಿರ್ಮಾಣವಾಗಿದೆ. ವಿವಿಧ ಹಂತಗಳಲ್ಲಿ ಕಾಮಗಾರಿ ಪೂರ್ಣಗೊಂಡಿದೆ. ಈ ಟ್ರ್ಯಾಕ್ನಲ್ಲಿ ನಮೋ ಭಾರತ್ ಸೆಮಿ ಸ್ಪೀಡ್ ಟ್ರೈನುಗಳು ಚಲಿಸುತ್ತವೆ. ಈ ಮಾರ್ಗದಲ್ಲಿ ಪ್ರಯಾಣಿಸುವ ಅವಧಿ ಎರಡು ಗಂಟೆಯಿಂದ 55 ನಿಮಿಷಕ್ಕೆ ಇಳಿಕೆ ಆಗುತ್ತದೆ. ನಮೋ ಭಾರತ್ ಟ್ರೈನುಗಳನ್ನು 180 ಕಿಮೀ ವೇಗದಲ್ಲಿ ಚಲಿಸುವಂತೆ ಡಿಸೈನ್ ಮಾಡಲಾಗಿದೆ. ಇದರ ಗರಿಷ್ಠ ಆಪರೇಷನಲ್ ಸ್ಪೀಡ್ 160 ಕಿಮೀ ಇದೆ. ಸರಾಸರಿ ವೇಗ 90 ಕಿಮೀಯಾಗಿದೆ.
ಇದನ್ನೂ ಓದಿ: Mann Ki Baat: AI ಇಂಪ್ಯಾಕ್ಟ್ ಸಮಿಟ್, ಡಿಜಿಟಲ್ ವಂಚನೆ ಸೇರಿ ಹಲವು ಅಂಶ ಉಲ್ಲೇಖಿಸಿದ ನಮೋ
ಉತ್ತರಪ್ರದೇಶ ರಾಜ್ಯಕ್ಕೆ ಸೇರಿದ ಮೀರತ್ ನಗರವು ದೆಹಲಿಯಿಂದ ಸುಮಾರು 100 ಕಿಮೀ ದೂರದಲ್ಲಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
