ಭಾರತದ ಆರ್ಥಿಕ ಬೆಳವಣಿಗೆಯ ದರ ಶೇ. 6ಕ್ಕೆ ಇಳಿಕೆ? ಎಚ್‌ಎಸ್‌ಬಿಸಿ (HSBC) ಭವಿಷ್ಯವಾಣಿ ಮತ್ತು ಆರ್‌ಬಿಐ ಬಡ್ಡಿ ದರ ಏರಿಕೆ ಸಾಧ್ಯತೆ – Kannada News | HSBC Warns: India’s GDP Growth May Plunge to 6% by FY27 Amid Energy & Climate Crises

ಭಾರತದ ಆರ್ಥಿಕ ಬೆಳವಣಿಗೆImage Credit source: Shutterstock

ಮುಂಬೈ, ಮೇ 11: ಜಾಗತಿಕ ಹಣಕಾಸು ಸಂಸ್ಥೆಯಾದ ಎಚ್‌ಎಸ್‌ಬಿಸಿ (HSBC) ಭಾರತದ ಆರ್ಥಿಕತೆಯ ಬಗ್ಗೆ ಆತಂಕಕಾರಿ ವರದಿಯೊಂದನ್ನು ನೀಡಿದೆ. 2026-27ರ ಹಣಕಾಸು ವರ್ಷದಲ್ಲಿ (FY27) ಭಾರತದ ಒಟ್ಟು ಆಂತರಿಕ ಉತ್ಪನ್ನ (GDP) ಬೆಳವಣಿಗೆಯ ದರವು ಕೇವಲ ಶೇ. 6ಕ್ಕೆ ಕುಸಿಯಬಹುದು ಎಂದು ಅಂದಾಜಿಸಿದೆ. ಈ ಹಿಂದೆ ನೀಡಿದ್ದ ಅಂದಾಜುಗಳನ್ನು ಪರಿಷ್ಕರಿಸಿರುವ ಎಚ್‌ಎಸ್‌ಬಿಸಿ, ಇಂಧನ ಬಿಕ್ಕಟ್ಟು ಮತ್ತು ಅನಿಶ್ಚಿತ ಹವಾಮಾನದ (ಮಳೆ ಕೊರತೆ) ಕಾರಣದಿಂದಾಗಿ ಭಾರತದ ಆರ್ಥಿಕ ವೇಗ ಕುಂಠಿತಗೊಳ್ಳಲಿದೆ ಎಂದು ತಿಳಿಸಿದೆ.

ಹೆಚ್ಚುತ್ತಿರುವ ಹಣದುಬ್ಬರವನ್ನು ನಿಯಂತ್ರಿಸಲು ಭಾರತೀಯ ರಿಸರ್ವ್ ಬ್ಯಾಂಕ್ (RBI) ಈ ಹಣಕಾಸು ವರ್ಷದಲ್ಲಿ ಎರಡು ಬಾರಿ ರೆಪೊ ದರಗಳನ್ನು (Repo Rate Hikes) ಏರಿಕೆ ಮಾಡುವ ಸಾಧ್ಯತೆಯಿದೆ ಎಂದು ಬ್ಯಾಂಕ್ ಅಂದಾಜಿಸಿದೆ. ಇದು ಸಾಲಗಳ ಮೇಲಿನ ಬಡ್ಡಿದರ ಹೆಚ್ಚಳಕ್ಕೆ ಕಾರಣವಾಗಬಹುದು.

ಜಾಗತಿಕ ಮತ್ತು ಹವಾಮಾನ ಕಾರಣಗಳು

ಪಶ್ಚಿಮ ಏಷ್ಯಾದಲ್ಲಿನ ಉದ್ವಿಗ್ನತೆಯಿಂದಾಗಿ ತೈಲ ಬೆಲೆ ಏರಿಕೆ ಮತ್ತು ‘ಎಲ್ ನಿನೊ’ ಪ್ರಭಾವದಿಂದಾಗಿ ಮಳೆಯ ಕೊರತೆಯು ದೇಶದ ಕೃಷಿ ಹಾಗೂ ಗ್ರಾಮೀಣ ಮಾರುಕಟ್ಟೆಯ ಮೇಲೆ ತೀವ್ರ ಪರಿಣಾಮ ಬೀರಲಿದೆ ಎಂದು ವಿಶ್ಲೇಷಿಸಲಾಗಿದೆ.

ಇದನ್ನೂ ಓದಿ: ಎಐನಿಂದ ಉದ್ಯೋಗಗಳು ಹೋಗೋದು ಸುಳ್ಳಾ? ಕೆಲಸ ಸೇರುವ ಸಮಯ ಇದು ಎನ್ನುತ್ತಾರೆ ಜೆನ್ಸೆನ್ ಹುವಾಂಗ್

ಬೆಲೆ ಏರಿಕೆ ಮತ್ತು ಬೇಡಿಕೆಯ ಕೊರತೆಯಿಂದಾಗಿ ದೇಶದ ಸಣ್ಣ ಉದ್ಯಮಗಳು ಮತ್ತು ಗ್ರಾಮೀಣ ಕುಟುಂಬಗಳು ಹೆಚ್ಚಿನ ಆರ್ಥಿಕ ಒತ್ತಡಕ್ಕೆ ಒಳಗಾಗಬಹುದು ಎಂದೂ ವರದಿ ಎಚ್ಚರಿಸಿದೆ.

2025-26ರ ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿ ಶೇ. 7.4ರಷ್ಟು ಹೆಚ್ಚಿತ್ತು. ಪ್ರಸಕ್ತ ಹಣಕಾಸು ವರ್ಷದಲ್ಲಿ ಇದರ ಬೆಳವಣಿಗೆ ಶೇ. 6ಕ್ಕೆ ಸೀಮಿತಗೊಂಡರೆ ಆರ್ಥಿಕತೆಯ ಓಟಕ್ಕೆ ಹಿನ್ನಡೆ ಬಂದಂತಾಗಬಹುದು. ಆದರೆ, 2026-27ಕ್ಕೆ ಭಾರತದಿಂದ ಇಷ್ಟು ಕಡಿಮೆ ಜಿಡಿಪಿ ಬೆಳವಣಿಗೆ ನಿರೀಕ್ಷಿಸಿರುವ ಸಂಸ್ಥೆ ಎಚ್​ಎಸ್​ಬಿಸಿ ಮಾತ್ರವೇ. ಆರ್​ಬಿಐ ಶೇ. 6.9 ಬೆಳವಣಿಗೆ ನಿರೀಕ್ಷಿಸಿದೆ. ಇತರ ಅಂತರರಾಷ್ಟ್ರೀಯ ಏಜೆನ್ಸಿಗಳು ಕೂಡ ಹೆಚ್ಚಿನ ಆರ್ಥಿಕ ಪ್ರಗತಿಯನ್ನು ಅಂದಾಜಿಸಿವೆ.

ಇದನ್ನೂ ಓದಿ: ಮೋದಿ ಕರೆಗೆ ಏರ್​ಟೆಲ್ ಮುಖ್ಯಸ್ಥರ ಬೆಂಬಲ; ಭಾರತದಲ್ಲಿ ಹೂಡಿಕೆ ಹೆಚ್ಚಿಸುವಂತೆ ಭಾರತೀಯ ಉದ್ಯಮಗಳಿಗೆ ಸುನೀಲ್ ಮಿತ್ತಲ್ ಕರೆ

ಡಿಸೆಂಬರ್, ಮಾರ್ಚ್​ನಲ್ಲಿ ರಿಪೋ ದರ ಏರಿಕೆ?

ಅಕ್ಟೋಬರ್​ನಿಂದ ಮಾರ್ಚ್​ವರೆಗಿನ ಅವಧಿಯಲ್ಲಿ ರಿಸರ್ವ್ ಬ್ಯಾಂಕ್ ತನ್ನ ರಿಪೋ ದರಗಳನ್ನು ಏರಿಸುವ ಸಾಧ್ಯತೆ ಇದೆ ಎಂದು ಎಚ್​ಎಸ್​ಬಿಸಿ ಹೇಳಿದೆ. ಹಣದುಬ್ಬರ ಏರಿಕೆ ಸಾಧ್ಯತೆ ಇರುವುದರಿಂದ ಆರ್​ಬಿಐ ಈ ಕ್ರಮ ತೆಗೆದುಕೊಳ್ಳಬಹುದು. ಆದರೆ, ಜೂನ್​ನಲ್ಲಿ ನಡೆಯುವ ಎಂಪಿಸಿ ಸಭೆಯಲ್ಲಿ ರಿಪೋ ದರ ಏರಿಕೆ ಸಾಧ್ಯತೆ ಇಲ್ಲ ಎಂದಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *