ಭಾರತದ ಪಾಲಿಗೆ ಇಂದು ಯಾರು ಗೆಲ್ಲಬೇಕು? ಹೀಗಿದೆ ಲೆಕ್ಕಾಚಾರ – Kannada News | Why a South Africa Win Benefits India

T20 World Cup 2026: ಟಿ20 ವಿಶ್ವಕಪ್​ನ ಸೂಪರ್-8 ಸುತ್ತಿನಲ್ಲಿ ಇಂದು (ಫೆ.26) ಎರಡು ಪಂದ್ಯಗಳು ನಡೆಯಲಿದೆ. ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಮೊದಲ ಪಂದ್ಯದಲ್ಲಿ ಸೌತ್ ಆಫ್ರಿಕಾ ಹಾಗೂ ವೆಸ್ಟ್ ಇಂಡೀಸ್ ತಂಡಗಳು ಮುಖಾಮುಖಿಯಾಗಲಿದೆ. ಈ ಪಂದ್ಯವು ಮಧ್ಯಾಹ್ನ 3 ಗಂಟೆಯಿಂದ ಶುರುವಾಗಲಿದೆ. ಇನ್ನು ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯಲಿರುವ ದ್ವಿತೀಯ ಪಂದ್ಯದಲ್ಲಿ ಭಾರತ ಮತ್ತು ಝಿಂಬಾಬ್ವೆ ತಂಡಗಳು ಕಣಕ್ಕಿಳಿಯಲಿವೆ. ಈ ಮ್ಯಾಚ್ ರಾತ್ರಿ 7 ಗಂಟೆಯಿಂದ ಆರಂಭವಾಗಲಿದೆ.

ಈ ಎರಡು ಪಂದ್ಯಗಳು ಟೀಮ್ ಇಂಡಿಯಾ ಪಾಲಿಗೆ ನಿರ್ಣಾಯಕ. ಏಕೆಂದರೆ ಸೌತ್ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್ ನಡುವಣ ಪಂದ್ಯದ ಫಲಿತಾಂಶ ಭಾರತ ತಂಡದ ಸೆಮಿಫೈನಲ್ ಹಾದಿಯನ್ನು ಸುಗಮಗೊಳಿಸಲಿದೆ. ಹೀಗಾಗಿಯೇ ಇಂದಿನ ಮ್ಯಾಚ್​ನಲ್ಲಿ ಭಾರತದ ಪಾಲಿಗೆ ಯಾರು ಗೆಲ್ಲಬೇಕು ಎಂಬ ಲೆಕ್ಕಾಚಾರ ಶುರುವಾಗಿದೆ. ಇಲ್ಲಿ ಉಭಯ ತಂಡಗಳು 2 ಅಂಕಗಳನ್ನು ಹೊಂದಿರುವ ಕಾರಣ ಟೀಮ್ ಇಂಡಿಯಾ ಪಾಲಿಗೆ ಯಾರು ಗೆದ್ದರೆ ಉತ್ತಮ ಎಂಬ ಪ್ರಶ್ನೆ ಮೂಡುವುದು ಸಹಜ. ಈ ಪ್ರಶ್ನೆಗೆ ಉತ್ತರ ಈ ಕೆಳಗಿನಂತಿದೆ…

  • ಸೌತ್ ಆಫ್ರಿಕಾ ಗೆಲುವು: ಟೀಮ್ ಇಂಡಿಯಾದ ಸೆಮಿಫೈನಲ್ ಹಾದಿ ಸುಗಮವಾಗಬೇಕಿದ್ದರೆ ವೆಸ್ಟ್ ಇಂಡೀಸ್ ವಿರುದ್ಧ ಸೌತ್ ಆಫ್ರಿಕಾ ತಂಡ ಗೆಲುವು ದಾಖಲಿಸಬೇಕು. ಹಾಗೆಯೇ ಸೌತ್ ಆಫ್ರಿಕಾ ಝಿಂಬಾಬ್ವೆ ತಂಡವನ್ನು ಸೋಲಿಸಬೇಕು.
  • ನೇರ ಅರ್ಹತೆ ಅವಕಾಶ: ವೆಸ್ಟ್ ಇಂಡೀಸ್ ಮತ್ತು ಝಿಂಬಾಬ್ವೆ ವಿರುದ್ಧ ಸೌತ್ ಆಫ್ರಿಕಾ ಗೆದ್ದರೆ ಟೀಮ್ ಇಂಡಿಯಾಗೆ ನೇರವಾಗಿ ಸೆಮಿಫೈನಲ್​ಗೇರಲು ಅವಕಾಶ ದೊರೆಯಲಿದೆ. ಅಂದರೆ ಯಾವುದೇ ನೆಟ್ ರನ್ ರೇಟ್ ಲೆಕ್ಕಾಚಾರ ಗಣನೆಗೆ ಬರುವುದಿಲ್ಲ.
  • ಟೀಮ್ ಇಂಡಿಯಾಗೆ ಲಾಭ: ಇಂದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಸೋತರೆ, ಮಾರ್ಚ್ 1 ರಂದು ನಡೆಯಲಿರುವ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಪಂದ್ಯವು ‘ನಾಕೌಟ್’ ಪಂದ್ಯದಂತಾಗುತ್ತದೆ. ಆಗ ಭಾರತ ಕೇವಲ ಈ ಪಂದ್ಯವನ್ನು ಗೆದ್ದರೆ ಸಾಕು. ಈ ಮೂಲಕ ಟೀಮ್ ಇಂಡಿಯಾ ಅಂಕಪಟ್ಟಿಯಲ್ಲಿ ದ್ವಿತೀಯ ಸ್ಥಾನ ಅಲಂಕರಿಸಿ ನೇರವಾಗಿ ಸೆಮಿಫೈನಲ್​ಗೇರಬಹುದು.
  • ವೆಸ್ಟ್ ಇಂಡೀಸ್ ಗೆದ್ದರೆ: ಸೌತ್ ಆಫ್ರಿಕಾ ವಿರುದ್ಧ ವೆಸ್ಟ್ ಇಂಡೀಸ್ ತಂಡ ಗೆದ್ದರೆ ತನ್ನ ನೆಟ್ ರನ್ ರೇಟ್​ ಅನ್ನು ಮತ್ತಷ್ಟು ಹೆಚ್ಚಿಸಿ ಸೆಮಿಫೈನಲ್ ಹಾದಿಯನ್ನು ಸುಗಮಗೊಳಿಸುತ್ತದೆ. ಪರಿಣಾಮ ಟೀಮ್ ಇಂಡಿಯಾ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯವನ್ನು ಭಾರೀ ಅಂತರದಿಂದ ಗೆದ್ದರೆ ಮಾತ್ರ ಸೆಮಿಫೈನಲ್​ಗೇರಲು ಅವಕಾಶ ದೊರೆಯಲಿದೆ.
  • ಸೌತ್ ಆಫ್ರಿಕಾ ಗೆಲುವುಗಳು: ಸೌತ್ ಆಫ್ರಿಕಾ ತಂಡವು ವೆಸ್ಟ್ ಇಂಡೀಸ್ ಹಾಗೂ ಝಿಂಬಾಬ್ವೆ ತಂಡಗಳನ್ನು ಸೋಲಿಸಿದರೆ, ಟೀಮ್ ಇಂಡಿಯಾ ವೆಸ್ಟ್ ಇಂಡೀಸ್ ಹಾಗೂ ಝಿಂಬಾಬ್ವೆ ವಿರುದ್ಧ ಗೆದ್ದು ನೇರವಾಗಿ ಸೆಮಿಫೈನಲ್​ಗೆ ಅರ್ಹತೆ ಪಡೆಯಬಹುದು. ಹೀಗಾಗಿ ಟೀಮ್ ಇಂಡಿಯಾ ಪಾಲಿಗೆ ಸೌತ್ ಆಫ್ರಿಕಾ ತಂಡದ ಗೆಲುವುಗಳು ಅತೀ ಮುಖ್ಯ.

ಇದನ್ನೂ ಓದಿ: ವಿಶ್ವಕಪ್​ನಲ್ಲಿ ‘ಬ್ರೂಕ್ ಬ್ಲಸ್ಟರ್’ ವಿಶ್ವ ದಾಖಲೆ

ಒಟ್ಟಾರೆಯಾಗಿ ಹೇಳುವುದಾದರೆ, ಸೌತ್ ಆಫ್ರಿಕಾ ಗೆದ್ದರೆ ಭಾರತ ತಂಡದ ಸೆಮಿಫೈನಲ್ ಹಾದಿ ಸುಲಭವಾಗಲಿದೆ. ವೆಸ್ಟ್ ಇಂಡೀಸ್ ಗೆದ್ದರೆ, ಭಾರತ ತನ್ನ ಮುಂದಿನ ಪಂದ್ಯಗಳನ್ನು ಭಾರಿ ಅಂತರದಿಂದ ಗೆಲ್ಲಲೇಬೇಕಾದ ಅನಿವಾರ್ಯತೆ ಎದುರಾಗಲಿದೆ. ಹೀಗಾಗಿ ಇಂದಿನ ಮ್ಯಾಚ್​ನಲ್ಲಿ ಟೀಮ್ ಇಂಡಿಯಾ ಪಾಲಿಗೆ ಸೌತ್ ಆಫ್ರಿಕಾ ತಂಡ ಗೆಲ್ಲಲೇಬೇಕು.

Source link

Leave a Reply

Your email address will not be published. Required fields are marked *