ಭಾರತ ತಂಡದಲ್ಲಿ 3ನೇ ಸ್ಥಾನಕ್ಕಾಗಿ ಮೂವರ ನಡುವೆ ಪೈಪೋಟಿ! – Kannada News | IND vs AFG: Who Will Fill Kohli’s No.3 Spot?

ಭಾರತ ಮತ್ತು ಅಫ್ಘಾನಿಸ್ತಾನ್ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯು ಇಂದಿನಿಂದ (ಜೂನ್ 13) ಶುರುವಾಗಲಿದೆ. ಧರ್ಮಶಾಲಾದಲ್ಲಿ ನಡೆಯಲಿರುವ ಮೊದಲ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಪರ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿಯುವುದು ಯಾರು? ಎಂಬುದೇ ಪ್ರಶ್ನೆ. ಏಕೆಂದರೆ ಐಪಿಎಲ್ 2026ರ ವೇಳೆ ಗಾಯಗೊಂಡಿರುವ ಅನುಭವಿ ಬ್ಯಾಟರ್ ವಿರಾಟ್ ಕೊಹ್ಲಿ ಈ ಸರಣಿಯಿಂದ ಹೊರಗುಳಿದಿದ್ದಾರೆ. ಹೀಗಾಗಿ ಅಫ್ಘಾನಿಸ್ತಾನ್ ವಿರುದ್ಧ ಮೂರನೇ ಕ್ರಮಾಂಕದಲ್ಲಿ ಬೇರೆ ಬ್ಯಾಟರ್​ನನ್ನು ಕಣಕ್ಕಿಳಿಸಬೇಕಾದ ಅನಿವಾರ್ಯತೆ ಎದುರಾಗಿದೆ.  ಈ ಅನಿವಾರ್ಯತೆಯ ಪಶ್ನೆಯನ್ನು ಟೀಮ್ ಇಂಡಿಯಾದ ಬೌಲಿಂಗ್ ಕೋಚ್ ಮೋರ್ನೆ ಮೋರ್ಕೆಲ್ ಮುಂದಿಡಲಾಗಿದೆ.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಕಾಣಿಸಿಕೊಂಡ ಮೋರ್ನೆ ಮೋರ್ಕೆಲ್ ಅವರಿಗೆ ಟೀಮ್ ಇಂಡಿಯಾ ಪರ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿಯುವುದು ಯಾರು ಎಂಬ ಪ್ರಶ್ನೆ ಕೇಳಲಾಗಿತ್ತು. ಈ ಪ್ರಶ್ನೆಗೆ ಉತ್ತರಿಸಿದ ಮೋರ್ಕೆಲ್​…

“ಈ ಏಕದಿನ ಸರಣಿಯಲ್ಲಿ ನಾವು ನಂ.3 ಸ್ಥಾನದಲ್ಲಿ ಇಶಾನ್ ಕಿಶನ್, ಕೆಎಲ್ ರಾಹುಲ್ ಅಥವಾ ಯಶಸ್ವಿ ಜೈಸ್ವಾಲ್ ಅವರಂತಹ ವಿಭಿನ್ನ ಆಟಗಾರರನ್ನು ಕಣಕ್ಕಿಳಿಸಿ ಪ್ರಯೋಗ ಮಾಡಲಿದ್ದೇವೆ. ಇದು ನಮಗೆ ಹೊಸ ಯೋಚನೆಗಳನ್ನು ಪರೀಕ್ಷಿಸಲು ಉತ್ತಮ ಅವಕಾಶ ನೀಡುತ್ತದೆ,” ಎಂದು ತಿಳಿಸಿದ್ದಾರೆ.

ಅಂದರೆ ಮೂರನೇ ಏಕದಿನ ಪಂದ್ಯದಲ್ಲಿ ಮೂವರು ಬ್ಯಾಟರ್​ಗಳು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿಯುವ ಸಾಧ್ಯತೆಯಿದೆ. ಅದರಂತೆ ಇಶಾನ್ ಕಿಶನ್, ಕೆಎಲ್ ರಾಹುಲ್ ಹಾಗೂ ಯಶಸ್ವಿ ಜೈಸ್ವಾಲ್ ಕಾಣಿಸಿಕೊಳ್ಳಬಹುದು.

  • ಇಶಾನ್ ಕಿಶನ್: ಎಡಗೈ ವಿಕೆಟ್‌ಕೀಪರ್-ಬ್ಯಾಟರ್ ಆಗಿರುವ ಇಶಾನ್ ಕಿಶನ್ ಈ ಸರಣಿಯ ಮೂಲಕ ಏಕದಿನ ಕ್ರಿಕೆಟ್​ಗೆ ಮರಳಿದ್ದು, ಅಗ್ರ ಕ್ರಮಾಂಕದಲ್ಲಿ ಆಕ್ರಮಣಕಾರಿ ಬ್ಯಾಟಿಂಗ್ ನಡೆಸುವ ಸಾಮರ್ಥ್ಯ ಹೊಂದಿದ್ದಾರೆ.
  • ಕೆಎಲ್ ರಾಹುಲ್: ಕಳೆದ ಕೆಲವು ವರ್ಷಗಳಿಂದ ಮಧ್ಯಮ ಕ್ರಮಾಂಕದಲ್ಲಿ (ನಂ.5) ಆಡುತ್ತಿರುವ ರಾಹುಲ್, ತಮ್ಮ ತಾಂತ್ರಿಕ ಕೌಶಲ್ಯದಿಂದಾಗಿ ಆರಂಭಿಕ ವಿಕೆಟ್ ಪತನದ ಸಂದರ್ಭದಲ್ಲಿ ಇನಿಂಗ್ಸ್ ಮುನ್ನಡೆಸಲು ಸೂಕ್ತ ಆಯ್ಕೆಯಾಗಿದ್ದಾರೆ.
  • ಯಶಸ್ವಿ ಜೈಸ್ವಾಲ್: ವಿರಾಟ್ ಕೊಹ್ಲಿ ಅವರ ಬದಲಿಯಾಗಿ ತಂಡಕ್ಕೆ ಆಯ್ಕೆಯಾಗಿರುವ ಯಶಸ್ವಿ ಜೈಸ್ವಾಲ್, ಐಪಿಎಲ್​ನಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಅಲ್ಲದೆ ಈಗಾಗಲೇ ಏಕದಿನ ಕ್ರಿಕೆಟ್‌ನಲ್ಲಿ ಶತಕ (116*) ಸಿಡಿಸಿರುವ ಇವರು ಮೂರನೇ ಕ್ರಮಾಂಕಕ್ಕೆ ಬಲ ತುಂಬಬಲ್ಲರು.

ಭಾರತ vs ಅಫ್ಘಾನಿಸ್ತಾನ್ ಏಕದಿನ ಸರಣಿ ವೇಳಾಪಟ್ಟಿ:

ಅಫ್ಘಾನಿಸ್ತಾನ್ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿರುವ ಭಾರತ ತಂಡ, ಇದೀಗ ಏಕದಿನ ಸರಣಿಯನ್ನೂ ಕೈವಶ ಮಾಡಿಕೊಳ್ಳುವ ವಿಶ್ವಾಸದಲ್ಲಿದೆ. ಸರಣಿಯ ಎಲ್ಲಾ ಪಂದ್ಯಗಳು ಮಧ್ಯಾಹ್ನ 1:30ಕ್ಕೆ ಆರಂಭವಾಗಲಿದ್ದು, ಈ ಮ್ಯಾಚ್​ಗಳ ವೇಳಾಪಟ್ಟಿ ಈ ಕೆಳಗಿನಂತಿದೆ.

  •  1ನೇ ಏಕದಿನ ಪಂದ್ಯ: ಜೂನ್ 13, ಶನಿವಾರ – ಧರ್ಮಶಾಲಾ
  •  2ನೇ ಏಕದಿನ ಪಂದ್ಯ: ಜೂನ್ 17, ಬುಧವಾರ – ಲಕ್ನೋ
  •  3ನೇ ಏಕದಿನ ಪಂದ್ಯ: ಜೂನ್ 20, ಶನಿವಾರ – ಚೆನ್ನೈ

ಇದನ್ನೂ ಓದಿ: ನನ್ನ ಎದುರಾಳಿ, ನನ್ನ ಆಪ್ತ ಗೆಳೆಯ… ವಿಲಿಯಮ್ಸನ್ ನಿವೃತ್ತಿಗೆ ಕೊಹ್ಲಿ ಭಾವುಕ ಪತ್ರ!

ಭಾರತ ಏಕದಿನ ತಂಡ:  ಶುಭ್​ಮನ್ ಗಿಲ್ (ನಾಯಕ) , ಕೆಎಲ್ ರಾಹುಲ್ (ವಿಕೆಟ್ ಕೀಪರ್), ರೋಹಿತ್ ಶರ್ಮಾ , ಯಶಸ್ವಿ ಜೈಸ್ವಾಲ್ , ಇಶಾನ್ ಕಿಶನ್ , ಶ್ರೇಯಸ್ ಅಯ್ಯರ್ , ವಾಷಿಂಗ್ಟನ್ ಸುಂದರ್ , ನಿತೀಶ್ ಕುಮಾರ್ ರೆಡ್ಡಿ , ಹರ್ಷ್ ದುಬೆ , ಕುಲ್ದೀಪ್ ಯಾದವ್ , ಅರ್ಷದೀಪ್ ಸಿಂಗ್ , ಗುರ್ನೂರ್ ಬ್ರಾರ್ , ಪ್ರಸಿದ್ಧ್ ಕೃಷ್ಣ , ಪ್ರಿನ್ಸ್ ಯಾದವ್.

Published On – 8:31 am, Sat, 13 June 26

Source link

Leave a Reply

Your email address will not be published. Required fields are marked *