ಬೆಂಗಳೂರು, ಏಪ್ರಿಲ್ 29: ನಗರದಲ್ಲಿ ಸುರಿದ ಭಾರೀ ಗಾಳಿ ಮಳೆಯು ಹಲವೆಡೆ ಅವಾಂತರ ಸೃಷ್ಟಿಸಿದೆ. ಬಹುತೇಕ ರಸ್ತೆಗಳಲ್ಲಿ ಮರಗಳು ಮತ್ತು ರೆಂಬೆ-ಕೊಂಬೆಗಳು ಧರೆಗುರುಳಿದ್ದು, ತೀವ್ರ ಸಂಚಾರ ದಟ್ಟಣೆಗೆ ಕಾರಣವಾಗಿದೆ. ಸಂಚಾರ ದಟ್ಟಣೆ ಎಷ್ಟರಮಟ್ಟಿಗಿದೆ ಎಂದರೆ, ಆಂಬ್ಯುಲೆನ್ಸ್‌ಗಳು ಕೂಡಾ ಸಿಕ್ಕಿಬಿದ್ದು ಮುಂದೆ ಸಾಗಲು ಕಷ್ಟಪಟ್ಟ ಪ್ರಸಂಗ ನಡೆದಿದೆ. ಜವಾಹರಲಾಲ್ ನೆಹರು ಕಾಂಟೇರಿಯಂ ಕಡೆಗೆ ತೆರಳುವ ಮಾರ್ಗದಲ್ಲಿ ವಾಹನಗಳು ನಿಂತಿದ್ದು, ಶೇಷಾದ್ರಿಪುರದಿಂದ ಬೋರಿಂಗ್ ಆಸ್ಪತ್ರೆಯವರೆಗಿನ ರಸ್ತೆಯಲ್ಲಿ ಅತೀ ಹೆಚ್ಚು ಸಂಚಾರ ದಟ್ಟಣೆ ಕಂಡುಬಂದಿದೆ. ಮಳೆ ನಿಂತರೂ, ಬಿದ್ದ ಮರಗಳಿಂದಾಗಿ ಸಂಚಾರ ಸಾಮಾನ್ಯ ಸ್ಥಿತಿಗೆ ಬರಲು ಸಮಯ ಹಿಡಿದಿದೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
