ಭುವನೇಶ್ವರ್ ಕುಮಾರ್​ ಯಶಸ್ಸಿನ ಗುಟ್ಟು ರಟ್ಟು ಮಾಡಿದ ಸಚಿನ್!

ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಅನುಭವಿ ವೇಗಿ ಭುವನೇಶ್ವರ್ ಕುಮಾರ್ ಈ ಬಾರಿಯ ಐಪಿಎಲ್​ನಲ್ಲಿ ಭರ್ಜರಿ ಬೌಲಿಂಗ್ ಪ್ರದರ್ಶಿಸಿದ್ದರು. ಪ್ರತಿ ಪಂದ್ಯದಲ್ಲೂ ಅತ್ಯುತ್ತಮ ದಾಳಿ ಸಂಘಟಿಸಿದ್ದ ಭುವಿ ರನ್​ ನಿಯಂತ್ರಿಸುವುದರೊಂದಿಗೆ 28 ವಿಕೆಟ್​ಗಳನ್ನೂ ಸಹ ಪಡೆದಿದ್ದರು. ಭುವನೇಶ್ವರ್ ಕುಮಾರ್ ಅವರ ಈ ಭರ್ಜರಿ ಯಶಸ್ಸಿಗೆ ಕಾರಣ ವೋಬ್ಲಿ ಸೀಮ್ ಕೌಶಲ್ಯವೇ ಎಂದಿದ್ದಾರೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ವಿಶ್ಲೇಷಿಸಿದ್ದಾರೆ.

ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಮಾತನಾಡಿರುವ ಸಚಿನ್ ತೆಂಡೂಲ್ಕರ್, “ಭುವನೇಶ್ವರ್ ಕುಮಾರ್ ಈ ಬಾರಿ ವೋಬ್ಲಿ ಸೀಮ್ ಬೌಲಿಂಗ್​ನೊಂದಿಗೆ ಅತ್ಯುತ್ತಮ ದಾಳಿ ನಡೆಸಿದ್ದಾರೆ. ಸಾಮಾನ್ಯವಾಗಿ ಸ್ವಿಂಗ್ ಮಾಡಲು ಬೌಲರ್​ಗಳು ಚೆಂಡಿನ ಸೀಮ್​ (ಚೆಂಡಿನ ಸ್ಟಿಚ್) ಮೇಲೆ ಹಿಡಿತ ಹೊಂದಿರುತ್ತಾರೆ. ಇದನ್ನು ಬ್ಯಾಟರ್​ಗಳು ಸುಲಭವಾಗಿ ಗ್ರಹಿಸಿ ರನ್​ಗಳಿಸುತ್ತಾರೆ”.

“ಆದರೆ ಭುವನೇಶ್ವರ್ ಕುಮಾರ್ ಈ ಬಾರಿ ವೋಬ್ಲಿ ಸೀಮ್ ಕೌಶಲ್ಯದ ಮೂಲಕ ದಾಳಿ ಸಂಘಟಿಸಿದ್ದಾರೆ. ಅಂದರೆ ಭುವಿ ಚೆಂಡಿನ ಸೀಮ್​ ಮೇಲೆ ತುಸು ವಕ್ರವಾಗಿ ಬೆರಳನ್ನಿಟ್ಟು ಬೌಲಿಂಗ್ ಮಾಡಿದ್ದಾರೆ. ಇದರಿಂದ ಚೆಂಡು ಬಿದ್ದ ಮೇಲೆ ಎತ್ತ ಸಾಗುತ್ತದೆ ಎಂಬುದು ಗೊತ್ತಾಗುವುದಿಲ್ಲ. ಕೆಲವೊಮ್ಮೆ ಅದು ಇನ್​ ಸ್ವಿಂಗ್ ಆಗಬಹುದು, ಇಲ್ಲಾ ಔಟ್ ಸ್ವಿಂಗ್ ಆಗಬಹುದು. ಹೀಗೆ ಬರುವ ಚೆಂಡನ್ನು ಗುರುತಿಸಿ ಬ್ಯಾಟಿಂಗ್ ಮಾಡುವುದು ತುಸು ಕಷ್ಟ”.

“ಏಕೆಂದರೆ ಬಾಲ್​ ಪಿಚ್ ಆದ ನಂತರ ಬ್ಯಾಟರ್‌ಗಳಿಗೆ ತಿಳಿಯದಂತೆ ದಿಕ್ಕು ಬದಲಾಯಿಸುತ್ತದೆ. ಇಂತಹದೊಂದು ಕೌಶಲ್ಯದೊಂದಿಗೆ ಈ ಬಾರಿ ಭುವನೇಶ್ವರ್​ ಕುಮಾರ್​ಗೆ ದಾಳಿ ಸಂಘಟಿಸಿದ್ದಾರೆ. ಅಲ್ಲದೆ ಆಫ್-ಸ್ಟಂಪ್ ಲೈನ್‌ಗೆ ಸತತವಾಗಿ ಬೌಲಿಂಗ್ ಮಾಡುವ ಮೂಲಕ ಬ್ಯಾಟರ್‌ಗಳನ್ನು ಕಟ್ಟಿಹಾಕಿದ್ದಾರೆ. ಇದುವೇ ಭುವನೇಶ್ವರ್ ಕುಮಾರ್ ಅವರ ಯಶಸ್ಸಿನ ಸಿಕ್ರೇಟ್” ಎಂದು ಸಚಿನ್ ತೆಂಡೂಲ್ಕರ್ ತಿಳಿಸಿದ್ದಾರೆ.

ವೋಬ್ಲಿ ಸೀಮ್ ದಾಳಿಯೊಂದಿಗೆ ಈ ಬಾರಿ ಭುವನೇಶ್ವರ್ ಕುಮಾರ್ ಪಡೆದಿರುವುದು ಬರೋಬ್ಬರಿ 28 ವಿಕೆಟ್​ಗಳು. ಹಾಗೆಯೇ 16 ಇನಿಂಗ್ಸ್​ಗಳಲ್ಲಿ ಬೌಲಿಂಗ್ ಮಾಡಿರುವ ಅವರು ಒಟ್ಟು 378 ಎಸೆತಗಳನ್ನು ಎಸೆದಿದ್ದಾರೆ. ಈ ವೇಳೆ ನೀಡಿರುವುದು ಕೇವಲ 501 ರನ್​ಗಳು ಮಾತ್ರ.

ಇದನ್ನೂ ಓದಿ: ವೈಭವ್ ಸೂರ್ಯವಂಶಿಗೆ 12 ಕೋಟಿ ರೂ. ಆಫರ್..!

ಅಂದರೆ ಪ್ರತಿ ಓವರ್​ನಲ್ಲಿ 7.95 ಸರಾಸರಿಯಲ್ಲಿ ಮಾತ್ರ ರನ್ ನೀಡಿದ್ದಾರೆ. ಈ ಮೂಲಕ ಈ ಬಾರಿಯ ಐಪಿಎಲ್​ನಲ್ಲಿ ಕನಿಷ್ಠ 100 ಎಸೆತಗಳನ್ನು ಎಸೆದು ಅತೀ ಕಡಿಮೆ ಸರಾಸರಿಯಲ್ಲಿ ರನ್ ನೀಡಿದ ಬೌಲರ್ ಎನಿಸಿಕೊಂಡಿದ್ದಾರೆ. ಹಾಗೆಯೇ 28 ವಿಕೆಟ್​ಗಳೊಂದಿಗೆ ಅತ್ಯಧಿಕ ವಿಕೆಟ್ ಪಡೆದ ಬೌಲರ್​ಗಳ ಪಟ್ಟಿಯಲ್ಲಿ ದ್ವಿತೀಯ ಸ್ಥಾನ ಅಲಂಕರಿಸಿದ್ದಾರೆ.

Source link

Leave a Reply

Your email address will not be published. Required fields are marked *