‘ಭೂತ್ ಬಂಗ್ಲ’ ಅಡ್ವಾನ್ಸ್ ಬುಕ್ಕಿಂಗ್‌: ಅಕ್ಷಯ್ ಕುಮಾರ್ ಸಿನಿಮಾಗೆ 15 ಕೋಟಿ ರೂ. ಓಪನಿಂಗ್ ನಿರೀಕ್ಷೆ – Kannada News | Akshay Kumar Bhooth Bangla movie Advance Booking Box Office Collection

ಬಾಲಿವುಡ್ ನಟ ಅಕ್ಷಯ್ ಕುಮಾರ್ (Akshay Kumar) ಮತ್ತು ನಿರ್ದೇಶಕ ಪ್ರಿಯದರ್ಶನ್ ಜೋಡಿಯ ಬಹುನಿರೀಕ್ಷಿತ ಹಾರರ್ ಕಾಮಿಡಿ ಚಿತ್ರ ‘ಭೂತ್ ಬಂಗ್ಲ’ (Bhooth Bangla) ಬಿಡುಗಡೆಗೆ ಸಜ್ಜಾಗಿದೆ. ಏಪ್ರಿಲ್ 17ರಂದು ಈ ಸಿನಿಮಾ ತೆರೆಕಾಣಲಿದೆ. ಈಗಾಗಲೇ ಮುಂಗಡ ಟಿಕೆಟ್ ಬುಕ್ಕಿಂಗ್ ಪ್ರಕ್ರಿಯೆ ಶುರುವಾಗಿದೆ. ಟಿಕೆಟ್ ಬುಕ್ ಮಾಡುವಲ್ಲಿ ಜನರು ಆಸಕ್ತಿ ತೋರಿಸುತ್ತಿದ್ದಾರೆ. ಆ ಮೂಲಕ ‘ಭೂತ್ ಬಂಗ್ಲ’ ಸಿನಿಮಾ ಉತ್ತಮ ಓಪನಿಂಗ್ ಪಡೆಯುವ ಸೂಚನೆ ಸಿಕ್ಕಿದೆ. ಬಾಕ್ಸ್ ಆಫೀಸ್​ನಲ್ಲಿ ಈ ಸಿನಿಮಾ ಮೊದಲ ದಿನ ಎಷ್ಟು ಕಲೆಕ್ಷನ್ ಮಾಡಲಿದೆ ಎಂಬುದನ್ನು ತಿಳಿಯುವ ಕೌತುಕ ಹೆಚ್ಚಿದೆ.

ಬುಧವಾರ (ಏಪ್ರಿಲ್ 15) ಸಂಜೆ 4.30ರ ಸುಮಾರಿಗೆ ಲಭ್ಯವಾದ ಅಂಕಿಅಂಶಗಳ ಪ್ರಕಾರ, ಪಿವಿಆರ್ ಐನಾಕ್ಸ್ ಮತ್ತು ಸಿನಿಪೊಲಿಸ್‌ ಮಲ್ಟಿಪ್ಲೆಕ್ಸ್​ಗಳಲ್ಲಿ ಸುಮಾರು 20 ಸಾವಿರ ಟಿಕೆಟ್‌ಗಳು ಮಾರಾಟವಾಗಿವೆ. ಗುರುವಾರ ಪ್ರಿವ್ಯೂ ಶೋಗೆ 10,500 ಟಿಕೆಟ್ ಹಾಗೂ ಶುಕ್ರವಾರದ ಶೋಗೆ 9,000 ಟಿಕೆಟ್ ಮಾರಾಟ ಆಗಿವೆ. ಇದರಿಂದ ಚಿತ್ರಕ್ಕೆ ಪಾಸಿಟಿವ್ ಫೀಲ್ ಸಿಕ್ಕಿದೆ.

ಏಪ್ರಿಲ್ 15ರ ರಾತ್ರಿಯ ವೇಳೆಗೆ ಒಟ್ಟು ಟಿಕೆಟ್ ಮಾರಾಟ 25,000ರಿಂದ 30,000 ಗಡಿಯನ್ನು ದಾಟುವ ಸಾಧ್ಯತೆಯಿದೆ. ಗುರುವಾರ ರಾತ್ರಿ ಪ್ರಿವ್ಯೂ ಶೋಗಳು ಆರಂಭವಾಗುವ ಹೊತ್ತಿಗೆ ಇದು 60,000ರಿಂದ 70,000ಕ್ಕೆ ಏರಿಕೆಯಾಗಬಹುದು ಎಂದು ಅಂದಾಜಿಸಲಾಗಿದೆ. ಹಾಗಾಗಿ ‘ಭೂತ್ ಬಂಗ್ಲ’ ಸಿನಿಮಾಗೆ ಬಿಡುಗಡೆಗೂ ಮೊದಲೇ ಗೆಲುವಿನ ಸೂಚನೆ ಸಿಗುತ್ತಿದೆ.

ಅಕ್ಷಯ್ ಕುಮಾರ್ ಅವರ ಈ ಹಿಂದಿನ ಚಿತ್ರಗಳಿಗೆ ಹೋಲಿಸಿದರೆ ‘ಭೂತ್ ಬಂಗ್ಲ’ ಟಿಕೆಟ್ ಬುಕಿಂಗ್ ಸಾಧಾರಣ ಎನಿಸುತ್ತಿದೆ. ‘ಹೌಸ್‌ಫುಲ್ 5’ ಸಿನಿಮಾಗೆ ಮೊದಲ ದಿನ 96,000 ಟಿಕೆಟ್ ಮಾರಾಟವಾಗಿತ್ತು. ಪ್ರಸ್ತುತ ಟ್ರೆಂಡ್ ಗಮನಿಸಿದರೆ, ‘ಭೂತ್ ಬಂಗ್ಲಾ’ ಚಿತ್ರವು ಮೊದಲ ದಿನ, ಪ್ರಿವ್ಯೂ ಶೋಗಳನ್ನೂ ಸೇರಿ, ಸುಮಾರು 15 ಕೋಟಿ ರೂಪಾಯಿ ಗಳಿಸುವ ಸಾಧ್ಯತೆಯಿದೆ.

ಇದನ್ನೂ ಓದಿ: ‘ಭೂತ್ ಬಂಗ್ಲ’ ಟ್ರೇಲರ್: ಮತ್ತದೇ ಹಳೇ ಕಥೆ ಹೇಳುತ್ತಾರಾ ಅಕ್ಷಯ್ ಕುಮಾರ್?

ಸದ್ಯ ಬಾಲಿವುಡ್ ಬಿಸ್ನೆಸ್ ಚೆನ್ನಾಗಿದೆ. ‘ಧುರಂಧರ್: ದಿ ರಿವೇಂಜ್’ ದೊಡ್ಡ ಮಟ್ಟದ ಹಿಟ್ ಆಗಿದೆ. ಇದರ ಜೊತೆ ‘ಮರ್ದಾನಿ 3’ ಮತ್ತು ‘ದಿ ಕೇರಳ ಸ್ಟೋರಿ 2’ ಕೂಡ ಯಶಸ್ಸು ಕಂಡಿವೆ. ‘ಭೂತ್ ಬಂಗ್ಲ’ ಸಿನಿಮಾದ ನಿರ್ಮಾಣ ವೆಚ್ಚ ಮಿತವಾಗಿದ್ದು, ಡಿಜಿಟಲ್ ಮತ್ತು ಸ್ಯಾಟಲೈಟ್ ಹಕ್ಕುಗಳಿಂದ ಈಗಾಗಲೇ ಉತ್ತಮ ಲಾಭ ಕಂಡಿದೆ. ಮೊದಲ ದಿನ ಪಾಸಿಟಿವ್ ಪ್ರತಿಕ್ರಿಯೆ ಸಿಕ್ಕರೆ ಅಕ್ಷಯ್ ಕುಮಾರ್ ಖಾತೆಗೆ ಒಂದು ಸಕ್ಸಸ್ ಸೇರ್ಪಡೆ ಆಗುವುದು ಗ್ಯಾರಂಟಿ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *