ಮಗುವಿನ ಪಾಲಿಗೆ ರಾಕ್ಷಸಿಯಾದ ಚಿಕ್ಕಮ್ಮ; ಪಾರ್ಕ್​ನಲ್ಲೇ 2 ವರ್ಷದ ಕೂಸನ್ನು ಕೊಂದ ಮಹಿಳೆ – Kannada News | Delhi Crime News 2 Year Old Baby Strangled To Death By Aunt in Park

ನವದೆಹಲಿ, ಫೆಬ್ರವರಿ 20: ದೆಹಲಿಯ ಮುಖರ್ಜಿ ನಗರದಲ್ಲಿ 2 ವರ್ಷದ ಗಂಡು ಮಗುವನ್ನು ಅವನ ಚಿಕ್ಕಮ್ಮ ಕೊಲೆ (Killing) ಮಾಡಿದ್ದಾಳೆ. ಪಾರ್ಕ್​ವೊಂದರಲ್ಲಿ ಈ ಕೊಲೆ ನಡೆದಿದೆ. ಮಗುವನ್ನು ಕತ್ತು ಹಿಸುಕಿ ಕೊಂದು ಆ ಶವದೊಂದಿಗೆ ಆಕೆ ಪಾರ್ಕ್​ನಲ್ಲಿ ಕುಳಿತಿದ್ದಳು. ಮಗು ರಂಜಾನ್ ಹಬ್ಬಕ್ಕೆ ತನ್ನ ತಾಯಿಯೊಂದಿಗೆ ತನ್ನ ಅಜ್ಜಿಯ ಮನೆಗೆ ಹೋಗಿತ್ತು. ಆಗ ಅಲ್ಲಿಗೆ ಬಂದಿದ್ದ ಆ ಮಗುವಿನ ತಾಯಿಯ ತಂಗಿ ಮಗುವನ್ನು ಕರೆದುಕೊಂಡು ಪಾರ್ಕ್​ಗೆ ಹೋಗಿ ಕೊಲೆ ಮಾಡಿದ್ದಾಳೆ.

ನಂತರ ಆಕೆ ಉದ್ಯಾನವನದಲ್ಲಿ ಕುಳಿತು ಮಗುವಿನ ಶವವನ್ನು ತನ್ನ ಮಡಿಲಲ್ಲಿ ಇಟ್ಟುಕೊಂಡು ಅಳುತ್ತಾ ನಾಟಕವಾಡಿದ್ದಾಳೆ. ಸ್ಥಳೀಯರು ಮಹಿಳೆಯನ್ನು ಈ ಸ್ಥಿತಿಯಲ್ಲಿ ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದ ಪೊಲೀಸ್ ತಂಡ ಸ್ಥಳಕ್ಕೆ ಆಗಮಿಸಿ ಮಹಿಳೆಯಿಂದ ಶವವನ್ನು ಪಡೆದುಕೊಂಡಿದ್ದಾರೆ. ಆಗ ಆ ಮಹಿಳೆ ಮಗುವಿನ ಶವವನ್ನು ಬಿಡಲು ನಿರಾಕರಿಸಿದ್ದಾಳೆ. ಪೊಲೀಸರು ಆಕೆಯ ಮನವೊಲಿಸಿ ಮಗುವಿನ ಶವವನ್ನು ವಶಕ್ಕೆ ಪಡೆದಿದ್ದಾರೆ. ಆ ಮಹಿಳೆ ಮಗುವಿನ ಜೀವವನ್ನು ಏಕೆ ತೆಗೆದಳು ಎಂಬುದನ್ನು ಕಂಡುಹಿಡಿಯಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ.

ಇದನ್ನೂ ಓದಿ: 3 ವರ್ಷದ ಮಗುವಿನ ಮೇಲೆ ಅಪ್ಪನ ಗೆಳೆಯನಿಂದಲೇ ಅತ್ಯಾಚಾರ

ದೆಹಲಿ ಪೊಲೀಸರ ಪ್ರಕಾರ, ಇಂದು ಮಧ್ಯಾಹ್ನ 1.30ರ ಸುಮಾರಿಗೆ ಮುಖರ್ಜಿ ನಗರ ಪೊಲೀಸ್ ಠಾಣೆಗೆ ಫೋನ್ ಬಂದಿತು. ಎಸ್‌ಎಫ್‌ಎಸ್ ಫ್ಲಾಟ್‌ಗಳ ಬಳಿಯ ಉದ್ಯಾನವನದಲ್ಲಿ ಅಜ್ರಾ (30) ಎಂಬ ಮಹಿಳೆ 2 ವರ್ಷದ ಮಗುವನ್ನು ಕತ್ತು ಹಿಸುಕಿ ಕೊಂದಿದ್ದಾಳೆ ಎಂದು ಪೊಲೀಸರಿಗೆ ಮಾಹಿತಿ ಸಿಕ್ಕಿತು. ಅಜ್ರಾ ಮಗುವಿನ ಚಿಕ್ಕಮ್ಮನಾಗಿದ್ದು, ಆಕೆ ಮಗುವಿನ ಶವವನ್ನು ಹಿಡಿದು ಉದ್ಯಾನವನದಲ್ಲಿ ಕುಳಿತಿದ್ದಳು. ಅಜ್ರಾಳನ್ನು ಈ ಸ್ಥಿತಿಯಲ್ಲಿ ನೋಡಿ ಸ್ಥಳೀಯ ವ್ಯಕ್ತಿಯೊಬ್ಬರು ಆಘಾತಕ್ಕೊಳಗಾದರು. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದರು.

ಹಾದಿ ಎಂಬ ಮೃತ 2 ವರ್ಷದ ಮಗು ದೆಹಲಿಯ ಸೀಲಾಂಪುರದಲ್ಲಿ ತನ್ನ ಹೆತ್ತವರೊಂದಿಗೆ ವಾಸಿಸುತ್ತಿದ್ದ. ಹಾದಿ ಮತ್ತು ಆತನ ತಾಯಿ ಉಜ್ಮಾ ಎಸ್‌ಎಫ್‌ಎಸ್ ಫ್ಲಾಟ್‌ನಲ್ಲಿ ತಾಯಿಯ ಮನೆಗೆ ಬಂದಿದ್ದರು. ಈ ವೇಳೆ ಆಕೆಯ ತಂಗಿ ಮಗುವನ್ನು ಪಾರ್ಕ್​ಗೆ ಕರೆದುಕೊಂಡು ಹೋಗಿದ್ದಳು. ಆಗ ಈ ಕೃತ್ಯ ನಡೆದಿದೆ. ವೈಯಕ್ತಿಕ ದ್ವೇಷದಿಂದ ಈ ರೀತಿ ಮಾಡಲಾಗಿದೆಯೇ ಎಂಬ ಬಗ್ಗೆ ಪೊಲೀಸ್ ತನಿಖೆ ನಡೆಯುತ್ತಿದೆ. ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ತನಿಖೆ ಆರಂಭಿಸಿದ್ದಾರೆ. ಹಾದಿಯ ಚಿಕ್ಕಮ್ಮ ಅಜ್ರಾಳನ್ನೂ ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ: ಮರು ಮದುವೆಯಾದರೂ ಬಿಡಲಿಲ್ಲ, ಮನೆಗೆ ನುಗ್ಗಿ ಮೂರು ತಿಂಗಳ ಗರ್ಭಿಣಿಯಾಗಿದ್ದ ಮಾಜಿ ಪತ್ನಿಯ ಇರಿದು ಕೊಂದ ಟೆಕ್ಕಿ

ಈ ಘಟನೆಯಿಂದಾಗಿ ಸುತ್ತಲೂ ಭಯದ ವಾತಾವರಣ ಉಂಟಾಗಿದೆ. ಚಿಕ್ಕಮ್ಮ ಮಗುವನ್ನು ಕತ್ತು ಹಿಸುಕಿ ಕೊಂದಿದ್ದು ಏಕೆ ಎಂದು ಜನರು ಆಶ್ಚರ್ಯ ಪಡುತ್ತಿದ್ದಾರೆ. ಉದ್ಯಾನವನದಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಆಜ್ರಾ ಮಗುವನ್ನು ಕತ್ತು ಹಿಸುಕುವುದನ್ನು ನೋಡಿದ್ದ. ಅವನು ಕಿರುಚಿದಾಗ ಜನರು ಬಂದು ಪೊಲೀಸರಿಗೆ ವಿಷಯ ತಿಳಿಸಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *